T20 World Cup; ಪಪುವಾ ನ್ಯೂ ಗಿನಿಯ ವಿರುದ್ಧ ವಿಂಡೀಸ್ ಗೆ 5 ವಿಕೆಟ್ ಗಳ ಜಯ
Team Udayavani, Jun 3, 2024, 12:10 AM IST
ಗಯಾನ: ಆತಿಥೇಯ ವೆಸ್ಟ್ ಇಂಡೀಸ್ ತನ್ನ ಆರಂಭಿಕ ಪಂದ್ಯದಲ್ಲಿ ಪಪುವಾ ನ್ಯೂ ಗಿನಿಯ (ಪಿಎನ್ಜಿ) ವಿರುದ್ಧ 5 ವಿಕೆಟ್ ಗಳ ಜಯ ಸಾಧಿಸಿದೆ.
137 ರನ್ನುಗಳ ಸುಲಭ ಸವಾಲು ಪಡೆದ ವಿಂಡೀಸ್ ನಿಧಾನಗತಿಯಲ್ಲಿ ಆಟವಾಡಿ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಜಯ ಸಾಧಿಸಿತು. ರೋಸ್ಟನ್ ಚೇಸ್ 27 ಎಸೆತಗಳಲ್ಲಿ 42 ರನ್ ಗಳಿಸಿ ಔಟಾಗದೆ ಉಳಿದರು. ಪಂದ್ಯ ಶ್ರೇಷ್ಠ ಎನಿಸಿಕೊಂಡರು. ಬ್ರಾಂಡನ್ ಕಿಂಗ್ 34, ನಿಕೋಲಸ್ ಪೂರನ್ 27, ರೋವ್ಮನ್ ಪೊವೆಲ್ 15, ಆಂಡ್ರೆ ರಸೆಲ್ ಔಟಾಗದೆ 15 ರನ್ ಕೊಡುಗೆ ಸಲ್ಲಿಸಿದರು.
ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಪಪುವಾ ನ್ಯೂ ಗಿನಿಯ 8 ವಿಕೆಟಿಗೆ 136 ರನ್ ಮಾಡಿತು. ಮಧ್ಯಮ ಕ್ರಮಾಂಕದ ಆಟಗಾರ ಸೆಸೆ ಬಾವ್ ಭರ್ತಿ 50 ರನ್ ಹೊಡೆದರು (43 ಎಸೆತ, 6 ಬೌಂಡರಿ, 1 ಸಿಕ್ಸರ್). ವೆಸ್ಟ್ ಇಂಡೀಸ್ ಪರ ಆ್ಯಂಡ್ರೆ ರಸೆಲ್ ಮತ್ತು ಅಲ್ಜಾರಿ ಜೋಸೆಫ್ 2 ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.