Taiwan Open: ಜಾವೆಲಿನ್‌ ಚಿನ್ನ ಗೆದ್ದ ಕರ್ನಾಟಕದ ಡಿ.ಪಿ. ಮನು


Team Udayavani, Jun 1, 2024, 10:55 PM IST

1-aasa

ತೈಪಿ (ತೈವಾನ್‌): ಕರ್ನಾಟಕದ ಡಿ.ಪಿ. ಮನು “ತೈವಾನ್‌ ಓಪನ್‌’ ಕೂಟದ ಜಾವೆಲಿನ್‌ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಶನಿವಾರದ ಸ್ಪರ್ಧೆಯಲ್ಲಿ ಅವರು 81.58 ಮೀಟರ್‌ಗಳ ಗರಿಷ್ಠ ದೂರ ದಾಖಲಿಸಿದರು.

ಏಷ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಮನು, ತಮ್ಮ ಕೊನೆಯ ಎಸೆತದಲ್ಲಿ ಈ ದೂರವನ್ನು ದಾಖಲಿಸಿದರು. ಮನು ಅವರ ಆರಂಭಿಕ ಎಸೆತ 78.32 ಮೀ. ಆಗಿತ್ತು. ದ್ವಿತೀಯ ಎಸೆತ 76.80 ಮೀಟರ್‌ಗಳಿಗೆ ಕುಸಿಯಿತು. ಆದರೆ ಇಲ್ಲಿಂದ ಮುಂದೆ ಪ್ರಗತಿ ಕಾಣುತ್ತ ಹೋದರು. 3ನೇ ಎಸೆತದಲ್ಲಿ 80.59 ಮೀ., 5ನೇ ಎಸೆತದಲ್ಲಿ 81.52 ಮೀ. ದೂರ ದಾಖಲಿಸಿದರು.

ಆದರೆ ಈ ಸಾಧನೆ ಎನ್ನುವುದು ಅವರ ವೈಯಕ್ತಿಕ ಹಾಗೂ ಸೀಸನ್‌ ದಾಖಲೆಗಿಂತ ಹಿಂದುಳಿದಿದೆ. ಮನು ಅವರ ಅತ್ಯುತ್ತಮ ಸಾಧನೆ 84.35 ಮೀ. ಆಗಿದೆ. ಈ ಸೀಸನ್‌ನಲ್ಲಿ 82.06 ಮೀ. ದಾಖಲಿಸಿದ್ದರು. ಇದು ಭುವನೇಶ್ವರದಲ್ಲಿ ನಡೆದ ಕಳೆದ “ಫೆಡರೇಶನ್‌ ಕಪ್‌’ನಲ್ಲಿ ದಾಖಲಾಗಿತ್ತು. ಅಲ್ಲಿ ಇವರು ದ್ವಿತೀಯ ಸ್ಥಾನಿಯಾಗಿದ್ದರು. ಒಲಿಂಪಿಕ್‌ ಚಾಂಪಿ ಯನ್‌ ನೀರಜ್‌ ಚೋಪ್ರಾ ಚಿನ್ನ ಜಯಿಸಿದ್ದರು.

ತೈವಾನ್‌ ಓಪನ್‌ ಎನ್ನುವುದು ವರ್ಲ್ಡ್
ಆ್ಯತ್ಲೆಟಿಕ್ಸ್‌ ಕಾಂಟಿನೆಂಟಲ್‌ ಟೂರ್‌ ಬ್ರಾಂಝ್ ಮಟ್ಟದ ಕ್ರೀಡಾಕೂಟ ವಾಗಿದ್ದು, ಇಲ್ಲಿನ ಸಾಧನೆ ರ್‍ಯಾಂಕಿಂಗ್‌ ಅಂಕಗಳಿಗೆ ಅತ್ಯಂತ ಮಹತ್ವದ್ದಾಗಿದೆ.

ಸಿಕ್ಕಿಲ್ಲ ಪ್ಯಾರಿಸ್‌ ಅರ್ಹತೆ
ಡಿ.ಪಿ. ಮನು ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 6ನೇ ಸ್ಥಾನಿಯಾಗಿದ್ದರು. ಇನ್ನೂ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿಲ್ಲ. ಇಲ್ಲಿನ ಮಾನದಂಡ 85.50 ಮೀ. ಆಗಿದೆ. ನೀರಜ್‌ ಚೋಪ್ರಾ ಮತ್ತು ಕಿಶೋರ್‌ ಜೇನಾ ಈಗಾಗಲೇ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌ ಸಂಪಾದಿಸಿದ್ದಾರೆ.

ಟಾಪ್ ನ್ಯೂಸ್

1-india

Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

jio

Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ

26

Bantwal: ಬೈಕ್‌ ಸ್ಕೀಡ್; ಗಂಭೀರ ಗಾಯಗೊಂಡು ಸಹಸವಾರೆ ಮೃತ್ಯು

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-india

Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ

31

Kiran Pahal: ವನಿತೆಯರ 400 ಮೀ.; ಕಿರಣ್‌ ಪಹಲ್‌ ಒಲಿಂಪಿಕ್ಸ್‌ ಗೆ ಅರ್ಹತೆ

Ajinkya Rahane: ಲೀಸೆಸ್ಟರ್‌ ಶೈರ್‌ ಪರ ಕೌಂಟಿ ಆಡಲಿದ್ದಾರೆ ರಹಾನೆ

Ajinkya Rahane: ಲೀಸೆಸ್ಟರ್‌ ಶೈರ್‌ ಪರ ಕೌಂಟಿ ಆಡಲಿದ್ದಾರೆ ರಹಾನೆ

20

Superbet Classic Chess: ಸೂಪರ್‌ಬೆಟ್‌ ಕ್ಲಾಸಿಕ್‌ ಚೆಸ್‌; ಡಿ.ಗುಕೇಶ್‌ ಶುಭಾರಂಭ

19

Droupadi Murmu: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅಥ್ಲೀಟ್‌ಗಳಿಗೆ ರಾಷ್ಟ್ರಪತಿ ಶುಭಾಶಯ

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

Recruitment: ಕೊನೆಗೂ ಮರಾಠಿ ಶಾಲೆಗಳಿಗೆ ನಿವೃತ್ತ ಕನ್ನಡ ಶಿಕ್ಷಕರ ನೇಮಕ! ಏನಿದು ಸಮಸ್ಯೆ?

Recruitment: ಕೊನೆಗೂ ಮರಾಠಿ ಶಾಲೆಗಳಿಗೆ ನಿವೃತ್ತ ಕನ್ನಡ ಶಿಕ್ಷಕರ ನೇಮಕ! ಏನಿದು ಸಮಸ್ಯೆ?

1-fox

Foxconn ಹೇಳಿಕೆ: ಮಹಿಳೆಯರಿಗೆ ತಾರತಮ್ಯ ಮಾಡಿಲ್ಲ

1-weqwwe

Uttara Kannada: ಸರಕಾರಿ ಆಸ್ತಿ ರಕ್ಷಣೆಯಲ್ಲಿ ಉತ್ತರ ಕನ್ನಡ ಪ್ರಥಮ

Rain: ಇನ್ನೂ ಎರಡು ದಿನ ವರುಣನ ಅಬ್ಬರ

Rain: ಇನ್ನೂ ಎರಡು ದಿನ ವರುಣನ ಅಬ್ಬರ

9

Price Rise: ದರ ಏರಿಕೆ; ನಾಳೆ ರಾಜ್ಯಾದ್ಯಂತ ಬಿಜೆಪಿಯಿಂದ ಕ್ಷೀರ ಅಭಿಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.