ಬಾಲಂಗೋಚಿಗಳ ಪೆವಿಲಿಯನ್ ಪರೇಡ್: ದಿನದ ಆರಂಭದಲ್ಲೇ ಟೀಂ ಇಂಡಿಯಾ ಆಲ್ ಔಟ್
Team Udayavani, Dec 18, 2020, 10:27 AM IST
ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ನ ಎರಡನೇ ದಿನದ ಆರಂಭದಲ್ಲೇ ಟೀಂ ಇಂಡಿಯಾ ಮುಗ್ಗರಿಸಿದೆ. ಬಾಲಂಗೋಚಿಗಳ ಪೆವಿಲಿಯನ್ ಪರೇಡ್ ನ ಕಾರಣದಿಂದ ಭಾರತ ತಂಡ 244 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ಮೊದಲ ದಿನದ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದ್ದ ಟೀಂ ಇಂಡಿಯಾ ಇಂದು ತನ್ನ ಮೊತ್ತಕ್ಕೆ ಕೇವಲ 11 ರನ್ ಸೇರಿಸಿ ನಾಲ್ಕು ವಿಕೆಟ್ ಕಳೆದುಕೊಂಡಿತು.
ತಲಾ 9 ರನ್ ಮತ್ತು 15 ರನ್ ಅಜೇಯರಾಗುಳಿದಿದ್ದ ಸಾಹಾ ಮತ್ತು ಅಶ್ವಿನ್ ಇಂದು ಒಂದು ರನ್ ಸೇರಿಸದೆ ವಿಕೆಟ್ ಒಪ್ಪಿಸಿದರು. ಉಮೇಶ್ ಯಾದವ್ ಆರು ರನ್ ಗಳಿಸಿದರೆ ಬುಮ್ರಾ ನಾಲ್ಕು ರನ್ ಗಳಿಸಿದರು. ಸ್ಟಾರ್ಕ್ ಮತ್ತು ಕಮಿನ್ಸ್ ಇಂದು ತಲಾ ಎರಡು ವಿಕೆಟ್ ಪಡೆದರು.
ಇದನ್ನೂ ಓದಿ:ಏಳು ತಾಣಗಳಲ್ಲಿ ನಡೆಯಲಿದೆ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿ
ಒಟ್ಟಾರೆ ಭಾರತದ ಪರ ನಾಯಕ ವಿರಾಟ್ 74 ರನ್ ಬಾರಿಸಿದ್ದೇ ಅತೀ ಹೆಚ್ಚು ರನ್, ಉಳಿದಂತೆ ಪುಜಾರ 43 ರನ್ ಮತ್ತು ರಹಾನೆ 42 ರನ್ ಗಳಿಸಿದ್ದರು. ಆಸೀಸ್ ಪರ ಸ್ಟಾರ್ಕ್ ನಾಲ್ಕು ವಿಕೆಟ್, ಕಮಿನ್ಸ್ ಮೂರು ವಿಕೆಟ್ ಕಬಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.