ಇಂಗ್ಲೆಂಡ್ ಸ್ಪಿನ್ ಜಾಲಕ್ಕೆ ಸಿಲುಕಿದ ಟೀಂ ಇಂಡಿಯಾ: 145ಕ್ಕೆ ಆಲೌಟ್, ಅಲ್ಪ ಮುನ್ನಡೆ
Team Udayavani, Feb 25, 2021, 4:09 PM IST
ಅಹಮದಾಬಾದ್: ಇಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಗಳ ದಾಳಿ ಎದುರಿಸಲಾಗದ ಟೀಂ ಇಂಡಿಯಾ ಮುಗ್ಗರಿಸಿದೆ. ಆದರೂ 33 ರನ್ ಗಳ ಮುನ್ನಡೆ ಸಾಧಿಸಿದೆ.
ಮೂರು ವಿಕೆಟ್ ಗೆ 99 ರನ್ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಇಂದು ಕೇವಲ 145 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳುದುಕೊಂಡಿತು. ಅಜಿಂಕ್ಯ ರಹಾನೆ, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್ ಅಗ್ಗಕ್ಕೆ ಔಟಾಗಿ ತಂಡದ ಸಂಕಷ್ಟಕ್ಕೆ ಕಾರಣರಾದರು.
ಇದನ್ನೂ ಓದಿ:ಏಕದಿನದಲ್ಲಿ ಪೃಥ್ವಿ ಶಾ ದ್ವಿಶತಕ, ಸೂರ್ಯಕುಮಾರ್ ಭರ್ಜರಿ ಶತಕ: 457 ರನ್ ಗಳಿಸಿದ ಮುಂಬೈ !
ಅಜೇಯರಾಗಿದ್ದ ರೋಹಿತ್ ಶರ್ಮಾ 66 ರನ್ ಗಳಿಸಿ ಔಟಾದರು. ಉಳಿದಂತೆ ನಾಯಕ ವಿರಾಟ್ ಕೊಹ್ಲಿ 27 ರನ್, ರವಿ ಅಶ್ವಿನ್ 17 ರನ್ ಮತ್ತು ಇಶಾಂತ್ ಶರ್ಮಾ (10) ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು.
ಇಂಗ್ಲೆಂಡ್ ಪರ ಸ್ಪಿನ್ನರ್ ಗಳಾದ ಜ್ಯಾಕ್ ಲೀಚ್ ಮತ್ತು ನಾಯಕ ರೂಟ್ ಬಿಗು ದಾಳಿ ನಡೆಸಿದರು. ರೂಟ್ ಐದು ವಿಕೆಟ್ ಪಡೆದರೆ, ಲೀಚ್ ನಾಲ್ಕು ವಿಕೆಟ್ ಕಬಳಿಸಿದರು.
ಇದನ್ನೂ ಓದಿ:ಖೋ ಖೋ ಕ್ರೀಡಾಪಟು ಶ್ರೀನಿವಾಸ್‌ಗೆ ಸನ್ಮಾನ
ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 112 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು. ಇದು ಸರಣಿಯ ಮೂರನೇ ಪಂದ್ಯವಾಗಿದ್ದು, ಉಭಯ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.