ಪ್ಯಾರಾಲಿಂಪಿಕ್ಸ್ ಇತಿಹಾಸ ಭಾರತಕ್ಕೆ ಒಲಿದಿವೆ ಡಜನ್ ಪದಕಗಳು
Team Udayavani, Aug 24, 2021, 7:10 AM IST
ಬೇಡಿ… ಪದಕಗಳ ಹ್ಯಾಟ್ರಿಕ್:
1984ರ ನ್ಯೂಯಾರ್ಕ್-ಸ್ಟೋಕ್ ಮಾಂಡೆವಿಲ್ಲೆ ಕೂಟದಲ್ಲಿ ಜೋಗಿಂದರ್ ಬೇಡಿ ಪದಕಗಳ ಹ್ಯಾಟ್ರಿಕ್ ಸಾಧಿಸಿದ್ದು ವಿಶೇಷ. ಅಂದು ಅವರು ಮೂರು ಕ್ರೀಡೆ ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಶಾಟ್‌ಪುಟ್‌ನಲ್ಲಿ ಬೆಳ್ಳಿ, ಡಿಸ್ಕಸ್ ತ್ರೋ ಮತ್ತು ಜಾವೆಲಿನ್ ತ್ರೋನಲ್ಲಿ ಕಂಚಿನ ಪದಕ ಗೆದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಅತೀ ಹೆಚ್ಚು ಪದಕ ಗೆದ್ದ ಭಾರತದ ದಾಖಲೆ ಬೇಡಿ ಹೆಸರಲ್ಲಿದೆ.
ಜಾವೆಲಿನ್‌ನಲ್ಲಿ ಬೇಡಿ ಅವರನ್ನು ಮೀರಿಸಿದ ಮತ್ತೋರ್ವ ಸ್ಪರ್ಧಿ ಭೀಮರಾವ್ ಕೇಸರ್ಕರ್ ಬೆಳ್ಳಿ ಜಯಿಸಿದರು.
ಚಿನ್ನದ ಈಟಿಯ ಜಜಾರಿಯಾ:
ಭಾರತ ಮತ್ತೂಂದು ಪ್ಯಾರಾ ಲಿಂಪಿಕ್ಸ್ ಚಿನ್ನಕ್ಕಾಗಿ 32 ವರ್ಷ ಕಾಯಬೇಕಾಯಿತು. 2004ರ ಅಥೇನ್ಸ್ ಕೂಟದ ಜಾವೆಲಿನ್ ಎಸೆತದಲ್ಲಿ ದೇವೇಂದ್ರ ಜಜಾರಿಯಾ 62.15 ಮೀ. ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದರು. ಇದರೊಂದಿಗೆ ಭಾರತದ 20 ವರ್ಷಗಳ ಪದಕ ಬರಗಾಲ ನೀಗಿಸಿದರು.
ಇದೇ ಕೂಟದಲ್ಲಿ ರಾಜೀಂದರ್ ಸಿಂಗ್ ರಹೆಲು 56 ಕೆಜಿ ಪವರ್‌ಲಿಫ್ಟಿಂಗ್‌ನಲ್ಲಿ 157.5 ಕೆಜಿ ಸಾಧನೆಯೊಂದಿಗೆ ಕಂಚು ಗೆದ್ದರು.
2012: ಗಿರೀಶ್ ಏಕೈಕ ಸಾಧಕ:
ಲಂಡನ್‌ನಲ್ಲಿ ಗಿರೀಶ್ ನಾಗರಾಜೇ ಗೌಡ ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದು ದೇಶಕ್ಕೆ ಏಕೈಕ ಪದಕ ತಂದಿತ್ತರು. ಅಂದಿನ ಗಿರೀಶ್ ಸಾಧನೆ 1.74 ಮೀ. ಇವರು ಕರ್ನಾಟಕದವರೆಂಬುದು ಅಭಿಮಾನದ ಸಂಗತಿ.
ಜಜಾರಿಯಾ ಜತೆಗೆ ತಂಗವೇಲು:
2016ರ ರಿಯೋ ಗೇಮ್ಸ್‌ನಲ್ಲಿ ಭಾರತಕ್ಕೆ ಅವಳಿ ಬಂಗಾರದ ಸಂಭ್ರಮ. ಜಾವೆಲಿನ್‌ನಲ್ಲಿ ಮತ್ತೆ ದೇವೇಂದ್ರ ಜಜಾರಿಯಾ, ಹೈಜಂಪ್‌ನಲ್ಲಿ ಮರಿಯಪ್ಪನ್ ತಂಗವೇಲು ಹರುಷ ಉಕ್ಕಿಸಿದರು. ಜಜಾರಿಯಾ ಭಾರತಕ್ಕೆ ಎರಡು ಚಿನ್ನ ತಂದಿತ್ತ ಮೊದಲ ಕ್ರೀಡಾಪಟು ಎಂಬ ಹಿರಿಮೆಗೆ ಪಾತ್ರರಾದರು. ತಂಗವೇಲು 1.89 ಮೀ. ಎತ್ತರಕ್ಕೆ ನೆಗೆದು ಬಂಗಾರಕ್ಕೆ ಕೈಯೊಡ್ಡಿದರು. ಕಂಚಿನ ಪದಕ ಭಾರತದ ಮತ್ತೋರ್ವ ಹೈಜಂಪರ್ ವರುಣ್ ಸಿಂಗ್ ಭಾಟಿ ಪಾಲಾಯಿತು.
ದೀಪಾ ಮಲಿಕ್ ಶಾಟ್‌ಪುಟ್‌ನಲ್ಲಿ ಬೆಳ್ಳಿ ಗೆದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ವನಿತಾ ಕ್ರೀಡಾಪಟು ಎಂಬುದು ದೀಪಾ ಹೆಗ್ಗಳಿಕೆ.
ಸೈನಿಕನಿಂದ ಮೊದಲ ಚಿನ್ನ :
ಭಾರತಕ್ಕೆ ಮೊದಲ ಪ್ಯಾರಾಲಿಂಪಿಕ್ಸ್ ಪದಕ ತಂದಿತ್ತ ಹೆಗ್ಗಳಿಕೆ ಮುರಳೀಕಾಂತ್ ಪೇಟ್ಕರ್ ಅವರದು. 1972ರ ಹೈಡೆಲ್‌ಬರ್ಗ್ ಕೂಟದ 50 ಮೀ. ಫ್ರೀಸ್ಟೈಲ್ ಸ್ವಿಮ್ಮಿಂಗ್‌ನಲ್ಲಿ ಅವರು 37.33 ಸೆಕೆಂಡ್ಸ್ ಗಳ ದಾಖಲೆಯೊಂದಿಗೆ ಬಂಗಾರದೊಂದಿಗೆ ಮಿನುಗಿದರು. ಭಾರತೀಯ ಸೇನೆಯಲ್ಲಿದ್ದ ಪೇಟ್ಕರ್ ಆರಂಭದಲ್ಲಿ ಬಾಕ್ಸರ್ ಆಗಿದ್ದರು. 1965ರ ಭಾರತ-ಪಾಕಿಸ್ಥಾನ ಯುದ್ಧದ ವೇಳೆ ತೋಳಿಗೆ ಪೆಟ್ಟು ಬಿದ್ದ ಕಾರಣ ಬೇರೆ ಕ್ರೀಡೆಯತ್ತ ಹೊರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.