ಕಿವೀಸ್ ನೆಲದಲ್ಲಿ ಟೀಂ ಇಂಡಿಯಾಕ್ಕೆ ಒಲಿಯದ T20 ಸರಣಿ
Team Udayavani, Feb 10, 2019, 10:37 AM IST
ಹ್ಯಾಮಿಲ್ಟನ್ : ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ ಬಳಿಕ ನ್ಯೂಝಿಲ್ಯಾಂಡ್ ನೆಲದಲ್ಲೂ ಏಕದಿನ ಸರಣಿ ಗೆಲ್ಲುವ ಮೂಲಕ ತನ್ನ ಪರಾಕ್ರಮವನ್ನು ಮೆರೆದಿತ್ತು. ಆದರೆ ಚುಟುಕು ಕ್ರಿಕೆಟ್ ಸರಣಿಯಲ್ಲಿ ಮಾತ್ರ ಟ್ರೋಫಿ ಗೆಲ್ಲುವ ಬ್ಲೂ ಬಾಯ್ಸ್ ಕನಸು ನನಸಾಗಲೇ ಇಲ್ಲ. ಹ್ಯಾಮಿಲ್ಟನ್ ನಲ್ಲಿ ಇಂದು ನಡೆದ ಮೂರನೇ ಮತ್ತು ಅಂತಿಮ ಟಿ20 ಪಂದ್ಯಾಟದಲ್ಲಿ ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ನ್ಯೂಝಿಲ್ಯಾಂಡ್ 2-1ರಿಂದ ಟಿ20 ಸರಣಿ ಗೆದ್ದು ಬೀಗಿತು. ಆ ಮೂಲಕ ಬಹುದೀರ್ಘ ಆಸೀಸ್ – ಕಿವೀಸ್ ಪ್ರವಾಸವನ್ನು ಭಾರತವು ಸೋಲಿನೊಂದಿಗೆ ಕೊನೆಗೊಳಿಸುವಂತಾಯಿತು.
ನ್ಯೂಝಿಲ್ಯಾಂಡ್ ನೀಡಿದ 213 ರನ್ನುಗಳ ಬೃಹತ್ ಗುರಿಯನ್ನು ಬೆನ್ನತ್ತಲಾರಂಭಿಸಿದ ಭಾರತದ ಆರಂಭ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಅನುಭವಿ ಬ್ಯಾಟ್ಸ್ ಮನ್ ಶಿಖರ್ ಧವನ್ (5) ಸಿಡಿಯಲು ವಿಫಲರಾದರು. ನಾಯಕ ರೋಹಿತ್ ಶರ್ಮಾ (38) ಮತ್ತು ವಿಜಯ ಶಂಕರ್ (43) ಸೇರಿಕೊಂಡು ಬಿರುಸಿನ ಆಟಕ್ಕೆ ಮುಂದಾದರು. ಈ ಹಂತದಲ್ಲಿ 43 ರನ್ನುಗಳನ್ನು ಗಳಿಸಿದ್ದ ವಿಜಯ ಶಂಕರ್ ಔಟಾದರು. ಬಳಿಕ ಬಂದ ರಿಷಭ್ ಪಂತ್ ಹೊಡೆಬಡಿಯ ಆಟಕ್ಕೆ ಮುಂದಾದರು. ಆದರೆ 12 ಎಸೆತಗಳಲ್ಲಿ 28 ರನ್ನು ಗಳಿಸಿ ಅವರೂ ಔಟಾದರು. ಬೆನ್ನು ಬೆನ್ನಿಗೆ ರೋಹಿತ್ ಶರ್ಮಾ, ಹಾರ್ಧಿಕ್ ಪಾಂಡ್ಯ (11 ಎಸೆತಗಳಲ್ಲಿ 21 ರನ್) ಮತ್ತು ಧೋನಿ (2) ವಿಕೆಟ್ ಬಿತ್ತು. ಆಗ ಭಾರತದ ಗೆಲುವಿಗೆ 28 ಎಸೆತಗಳಲ್ಲಿ ಇನ್ನೂ 67 ರನ್ನುಗಳ ಅಗತ್ಯವಿತ್ತು.
ಈ ಹಂತದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಜೊತೆಯಾದ ಕುನಾಲ್ ಪಾಂಡ್ಯ ಬಿರುಸಿನ ಆಟವಾಡಲಾರಂಭಿಸಿದರು. ಕಾರ್ತಿಕ್ ಮತ್ತು ಕುನಾಲ್ ಪಾಂಡ್ಯ ಸೇರಿಕೊಂಡು ತಂಡದ ಗೆಲುವಿನ ಹೋರಾಟ ಮುಂದುವರೆಸಿದರಾದರೂ ಫೈನಲ್ ಓವರ್ ಟೆನ್ಷನ್ ಅನ್ನು ಗೆಲ್ಲಲು ಮಾತ್ರ ಅವರಿಬ್ಬರಿಗೂ ಸಾಧ್ಯವಾಗಲಿಲ್ಲ. ದಿನೇಶ್ ಕಾರ್ತಿಕ್ 16 ಎಸೆತಗಳಲ್ಲಿ 33 ರನ್ನುಗಳನ್ನು ಗಳಿಸಿದರೆ, ಪಾಂಡ್ಯ 13 ಎಸೆತಗಳಲ್ಲಿ 26 ರನ್ನುಗಳನ್ನು ಗಳಿಸಿದರು. ಇವರಿಬ್ಬರೂ ಅಜೇಯರಾಗಿ ಉಳಿದರು.
ಫೈನಲ್ ಓವರ್ ಟೆನ್ಷನ್
ಅಂತಿಮವಾಗಿ ಟೀಂ ಇಂಡಿಯಾ ಗೆಲುವಿಗೆ 6 ಎಸೆತಗಳಲ್ಲಿ 16 ರನ್ನುಗಳ ಅಗತ್ಯವಿತ್ತು. ಮೊದಲ ಎಸೆತದಲ್ಲಿ 2 ರನ್ ಬಂತು. ಎರಡನೇ ಎಸೆತ ಡಾಟ್ ಬಾಲ್, ಮೂರನೇ ಎಸೆತ ಮತ್ತೆ ಡಾಟ್ ಬಾಲ್ ಆಯಿತು. ನಾಲ್ಕನೇ ಎಸೆತದಲ್ಲಿ 1 ರನ್ ಬಂತು. ಐದನೇ ಎಸೆತವನ್ನು ಎದುರಿಸಿದ ಪಾಂಡ್ಯ 1 ರನ್ ಮಾತ್ರ ಗಳಿಸಿದರು. ಅಂತಿಮ ಎಸೆತದಲ್ಲಿ 12 ರನ್ನುಗಳ ಅಗತ್ಯವಿತ್ತು ಆದರೆ ಆ ಚೆಂಡನ್ನು ಅಂಪೈರ್ ವೈಡ್ ಎಂದು ಘೋಷಿಸಿದರು, ಅಂತಿಮ ಎಸೆತವನ್ನು ಕಾರ್ತಿಕ್ ಸಿಕ್ಸರ್ ಗೆ ತಳ್ಳಿದರಾದರೂ ಆ ಹೊತ್ತಿಗಾಗಲೇ ಭಾರತದ ಜಯದ ಕನಸು ಕಮರಿ ಹೋಗಿತ್ತು. ಅಂತಿಮವಾಗಿ 4 ರನ್ನುಗಳಿಂದ ಸೋಲುವ ಮೂಲಕ ಕಿವೀಸ್ ನೆಲದಲ್ಲಿ ಟಿ20 ಸರಣಿ ಗೆಲ್ಲುವ ಕನಸು ನನಸಾಗಲಿಲ್ಲ.
►1st Innings News►ಅಂತಿಮ T20 : ಮನ್ರೋ ಮಿಂಚು ; Team India ಟಾರ್ಗೆಟ್ 213: https://bit.ly/2MWv5mh
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್