Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
Team Udayavani, Apr 23, 2024, 4:14 PM IST
ಮುಂಬೈ: ಐಪಿಎಲ್ 2024 ನಡೆಯುತ್ತಿದ್ದಂತೆ ಮುಂದಿನ ಟಿ20 ವಿಶ್ವಕಪ್ ಗೆ ಭಾರತ ತಂಡದಲ್ಲಿ ಯಾರಿರಬೇಕು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ರೋಹಿತ್ ಜೊತೆ ವಿರಾಟ್ ಇನ್ನಿಂಗ್ಸ್ ಆರಂಭಿಸಬೇಕು, ಆಲ್ ರೌಂಡರ್ ಗಳು ಯಾರು? ವಿಕೆಟ್ ಕೀಪರ್ ಯಾರಾಗಬೇಕು ಎಂಬ ಚರ್ಚೆಗಳು ಜೋರಾಗಿದೆ. ಭಾರತ ಕಂಡ ಶ್ರೇಷ್ಠ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ಈ ಚರ್ಚೆಗೆ ಇಳಿದಿದ್ದು, ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ಟೀಂ ಇಂಡಿಯಾದ ವಿಕೆಟ್ ಕೀಪರ್ ಸ್ಥಾನಕ್ಕಾಗಿ ರಿಷಬ್ ಪಂತ್, ಕೆಎಲ್ ರಾಹುಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮತ್ತು ದಿನೇಶ್ ಕಾರ್ತಿಕ್ ಹೋರಾಡುತ್ತಿದ್ದಾರೆ. ಆದರೆ ಈ ಐದು ಜನರಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ರೇಸ್ ನಲ್ಲಿ ಉಳಿದವರಿಗಿಂತ ಮುಂದಿದ್ದಾರೆ ಎಂದು ಹರ್ಭಜನ್ ಭಾವಿಸುತ್ತಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಸೋಮವಾರದ ಪಂದ್ಯದಲ್ಲಿ ರಾಜಸ್ಥಾನ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಸಂಜು ಸ್ಯಾಮ್ಸನ್ ಅವರ ಹೆಸರನ್ನು ಕೇವಲ ವಿಕೆಟ್ ಕೀಪರ್ ಪಾತ್ರಕ್ಕೆ ಮಾತ್ರವಲ್ಲದೆ ರೋಹಿತ್ ಬಳಿಕ ತಂಡದ ನಾಯಕತ್ವಕ್ಕೂ ಹರ್ಭಜನ್ ಸಿಂಗ್ ಪ್ರತಿಪಾದಿಸಿದ್ದಾರೆ.
ಸದ್ಯ ಹಾರ್ದಿಕ್ ಪಾಂಡ್ಯ ಅವರು ಭಾರತದ ಟಿ20 ತಂಡದ ಉಪ ನಾಯಕರಾಗಿದ್ದಾರೆ, ರೋಹಿತ್ ಬಳಿಕ ಹಾರ್ದಿಕ್ ಅವರಿಗೆ ನಾಯಕತ್ವ ವಹಿಸಲಾಗುತ್ತದೆ ಎಂಬ ವರದಿಗಳಿವೆ. ಆದರೆ ಹರ್ಭಜನ್ ಅವರು ಬೇರೆಯದೇ ವಿಚಾರ ಉಲ್ಲೇಖಿಸಿದ್ದಾರೆ.
Yashasvi Jaiswal’s knock is a proof of class is permanent . Form is temporary @ybj_19 and there shouldn’t be any debate about Keepar batsman . @IamSanjuSamson should walks in to the Indian team for T20 worldcup and also groomed as a next T20 captain for india after rohit . koi…
— Harbhajan Turbanator (@harbhajan_singh) April 22, 2024
“ಯಶಸ್ವಿ ಜೈಸ್ವಾಲ್ ಅವರ ಆಟವು ಫಾರ್ಮ್ ತಾತ್ಕಾಲಿಕ, ಕ್ಲಾಸ್ ಖಾಯಂ ಎನ್ನುವುದಕ್ಕೆ ಪುರಾವೆಯಾಗಿದೆ. ಕೀಪರ್ ಬ್ಯಾಟ್ಸ್‌ಮನ್ ಬಗ್ಗೆ ಯಾವುದೇ ಚರ್ಚೆ ನಡೆಯಬಾರದು. ಸಂಜು ಸ್ಯಾಮ್ಸನ್ ಅವರು ಟಿ20 ವಿಶ್ವಕಪ್ ಗಾಗಿ ಭಾರತೀಯ ತಂಡಕ್ಕೆ ಕಾಲಿಡಬೇಕು. ಅಲ್ಲದೆ ರೋಹಿತ್ ನಂತರ ಭಾರತದ ಮುಂದಿನ ಟಿ20 ನಾಯಕನಾಗಿಯೂ ಅವರನ್ನು ಅಣಿಗೊಳಿಸಬೇಕು, ಯಾವುದೇ ಅನುಮಾನವಿದೆಯೇ” ಎಂದು ಭಜ್ಜಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi; ವಿಜಯ್ ಮಲಿಕ್ ಅಮೋಘ ಆಟ: ತೆಲುಗು ಟೈಟಾನ್ಸ್ ಗೆ ಗೆಲುವು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.