ಮೆಕ್ಗ್ರಾತ್ ಸಂಸ್ಥೆಗೆ ಪಿಂಕ್ ಕ್ಯಾಪ್ ನೀಡಿದ ಟೀಮ್ ಇಂಡಿಯಾ
Team Udayavani, Jan 5, 2019, 1:20 PM IST
ಸಿಡ್ನಿ: ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಗ್ಲೆನ್ ಮೆಕ್ಗ್ರಾತ್ ತಮ್ಮ ಅಗಲಿದ ಪತ್ನಿ ಜೇನ್ ಮೆಕ್ಗ್ರಾತ್ ಹೆಸರಲ್ಲಿ ನಡೆಸುವ ಸಂಸ್ಥೆಯೊಂದಕ್ಕೆ ಭಾರತೀಯ ಕ್ರಿಕೆಟಿಗರು ತಮ್ಮ ಹಸ್ತಾಕ್ಷರವುಳ್ಳ ಕ್ಯಾಪ್ಗ್ಳನ್ನು ನೀಡಿದ್ದಾರೆ.
3ನೇ ದಿನದಾಟದ ಆರಂಭಕ್ಕೂ ಮುನ್ನ ಮೈದಾನದಲ್ಲಿ ಮೆಕ್ಗ್ರಾತ್ ಭಾರತೀಯ ಆಟಗಾರರೊಂದಿಗೆ ಕಾಣಿಸಿಕೊಂಡು ಈ ಟೋಪಿಗಳನ್ನು ಪಡೆದರು. ಪತ್ನಿ ಜೇನ್ ನಿಧನದ ಬಳಿಕ ಅವರ ಹೆಸರಲ್ಲಿ ಸಂಸ್ಥೆಯೊಂದನ್ನು ಆರಂಭಸಿದ್ದು, ಆಸ್ಟ್ರೇಲಿಯದಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗಾಗಿ ಟೆಸ್ಟ್ನ 3ನೇ ದಿನವನ್ನು ಪಿಂಕ್ ಡೇ ಎಂದು ಪರಿಗಣಿಸಲಾಗಿತ್ತು. ಸ್ಟೇಡಿಯಂ ಸಂಪೂರ್ಣವಾಗಿ ಗುಲಾಲಿ ಬಣ್ಣಕ್ಕೆ ತಿರುಗಿತ್ತು.
ಗ್ಲೆನ್ ಮೆಕ್ಗ್ರಾತ್ ಅವರ ಚಾರಿಟಿಗೆ ನೆರವಾಗಲು ವಿರಾಟ್ ಕೊಹ್ಲಿ 4ನೇ ಟೆಸ್ಟ್ ಮೊದಲ ದಿನ ಪಿಂಕ್ ಗ್ಲೌಸ್, ಪಿಂಕ್ ಬ್ಯಾಟ್ ಗ್ರಿಪ್ ಹಾಗೂ ಸ್ಟ್ರೀಕರ್ ಧರಿಸಿ ಮೈದಾನಕ್ಕಿಳಿದು ಗಮನ ಸೆಳೆದಿದ್ದರು. ಕೊಹ್ಲಿ ಅವರ ಈ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ
INDvsSA: ಸೆಂಚುರಿಯನ್ನಲ್ಲೂ ಕ್ವಿಕ್, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.