Team India; ಏಕದಿನದಿಂದ ರವೀಂದ್ರ ಜಡೇಜಾ ಔಟ್?: ಸ್ಪಷ್ಟನೆ ನೀಡಿದ ಗಂಭೀರ್, ಅಗರ್ಕರ್
Team Udayavani, Jul 22, 2024, 2:10 PM IST
ಮುಂಬೈ: ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ನೂತನ ಕೋಚ್ ಗೌತಮ್ ಗಂಭೀರ್ (Gautam Gambhir) ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ (Ajit Agarkar) ಕೆಲವು ಮಹತ್ವದ ಪ್ರಶ್ನೆಗಳಿಗೆ ಉತ್ತರಿಸಿದರು. ಅದರಲ್ಲಿ ಪ್ರಮುಖವಾದದ್ದು ಏಕದಿನ ಕ್ರಿಕೆಟ್ ನಿಂದ ರವೀಂದ್ರ ಜಡೇಜಾ (Ravindra Jadeja) ಕಡೆಗಣನೆ.
ಟಿ20 ವಿಶ್ವಕಪ್ ಗೆಲುವಿನ ಬಳಿಕ ವಿರಾಟ್, ರೋಹಿತ್ ರಂತೆ ರವೀಂದ್ರ ಜಡೇಜಾ ಕೂಡಾ ಟಿ20 ಮಾದರಿಗೆ ವಿದಾಯ ಹೇಳಿದ್ದರು. ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದರು. ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ಜಡೇಜಾ ಸ್ಪಿನ್ ಬೌಲಿಂಗ್ ನ ಮುಂದಾಳತ್ವ ವಹಿಸಿದ್ದರು. ಆದರೆ ಲಂಕಾ ಸರಣಿಯಿಂದ ಅವರನ್ನು ಕೈ ಬಿಡಲಾಗಿದೆ. ಆಲ್ ರೌಂಡರ್ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಭಾರತ ಕೇವಲ ಆರು ಏಕದಿನ ಪಂದ್ಯಗಳನ್ನು ಆಡಲಿದೆ. ಅದರಲ್ಲಿ ಮೂರು ಲಂಕಾ ವಿರುದ್ದ ಆಡುತ್ತಿದೆ. ಹೀಗಾಗಿ ಇದು ಮಹತ್ವ ಪಡೆದಿದೆ. ಜಡೇಜಾ ಅವರ ಕಡೆಗಣನೆ ಅವರನ್ನು ಏಕದಿನ ಭವಿಷ್ಯದ ಅಂತ್ಯ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಜಡೇಜಾ ಕೇವಲ ಟೆಸ್ಟ್ ಮಾದರಿಯಲ್ಲಿ ಆಡಲಿದ್ದಾರೆ ಎನ್ನುತ್ತಿದೆ ವರದಿ.
ರವೀಂದ್ರ ಜಡೇಜಾ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಇಂದು ಅಜಿತ್ ಅಗರ್ಕರ್ ಮಾತನಾಡಿದ್ದಾರೆ. “15 ಜನರ ತಂಡವನ್ನು ಆಯ್ಕೆ ಮಾಡುವಾಗ ಕೆಲವರು ತಪ್ಪಿಸಿಕೊಳ್ಳುವುದು ಸಹಜ. ಇದು ಅವಕಾಶಗಳನ್ನು ಹೆಚ್ಚು ಬಳಸಿಕೊಳ್ಳುವ ಬಗ್ಗೆ. ರಿಂಕು ತನ್ನ ಯಾವುದೇ ತಪ್ಪಿಲ್ಲದೆ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಒಂದೇ ಕಿರು ಸರಣಿಯಲ್ಲಿ ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಇಬ್ಬರನ್ನೂ ತೆಗೆದು ಕೊಳ್ಳುವುದರಲ್ಲಿ ಅರ್ಥವಿಲ್ಲ. ಅವನನ್ನು ಕೈಬಿಡಲಿಲ್ಲ. ಅವರು ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅವರು ಇನ್ನೂ ನಮ್ಮ ಯೋಜನೆಯಲ್ಲಿದ್ದಾರೆ. ಅವರು ಪ್ರಮುಖ ಆಟಗಾರರಾಗಿದ್ದಾರೆ” ಎಂದು ಅಜಿತ್ ಹೇಳಿದರು.
ಇದೇ ವೇಳೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯದ ಬಗ್ಗೆಯೂ ಗಂಭೀರ್ ಮಾತನಾಡಿದರು.
“ಏಕದಿನ ವಿಶ್ವಕಪ್ ಇರಲಿ ಅಥವಾ ಟಿ20 ವಿಶ್ವಕಪ್ ಆಗಿರಲಿ, ದೊಡ್ಡ ವೇದಿಕೆಯಲ್ಲಿ ಏನು ಮಾಡಬೇಕು ಎಂದು ಇಬ್ಬರೂ ತೋರಿಸಿಕೊಟ್ಟಿದ್ದಾರೆ. ಇಬ್ಬರಲ್ಲೂ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಆಸ್ಟ್ರೇಲಿಯಾ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದೆ. ಅವರು ತಮ್ಮ ಫಿಟ್ನೆಸ್ ಉಳಿಸಿಕೊಂಡರೆ 2027ರ ಏಕದಿನ ವಿಶ್ವಕಪ್ ಕೂಡಾ ಆಡಬಹುದು ಎಂಬ ವಿಶ್ವಾಸವಿದೆ” ಎಂದು ಗಂಭೀರ್ ಹೇಳಿದರು.
“ಅವರು ಎಷ್ಟು ಸಮಯ ಆಡಬಲ್ಲರು ಎನ್ನುವುದು ತೀರಾ ವೈಯಕ್ತಿಕ ವಿಚಾರ. ಅವರಲ್ಲಿ ಎಷ್ಟು ಕ್ರಿಕೆಟ್ ಉಳಿದಿದೆ ಎಂದು ನಾನು ಹೇಳುವುದು ಅಸಾಧ್ಯ. ತಂಡದ ಯಶಸ್ಸಿಗಾಗಿ ಅವರು ಎಷ್ಟು ಕೊಡುಗೆ ನೀಡಬಹುದು ಎಂದು ಆಟಗಾರರೇ ನಿರ್ಧರಿಸಬೇಕು. ಮುಖ್ಯವಾಗಿ ತಂಡವಷ್ಟೇ ಮುಖ್ಯ. ವಿರಾಟ್ ಮತ್ತು ರೋಹಿತ್ ರಲ್ಲಿ ತುಂಬಾ ಕ್ರಿಕೆಟ್ ಉಳಿದಿದೆ. ಅವರು ಇನ್ನೂ ವಿಶ್ವದರ್ಜೆ ಕ್ರಿಕೆಟಿಗರು. ಅವರನ್ನು ಆದಷ್ಟು ಉಳಿಸಿಕೊಳ್ಳಲು ಯಾವುದೇ ತಂಡವು ಬಯಸುತ್ತದೆ” ಎಂದು ಗಂಭೀರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.