Victory parade; ಮುಂಬೈ ನಲ್ಲಿ T20 ಚಾಂಪಿಯನ್ನರಿಗೆ ಸಂಭ್ರಮೋಲ್ಲಾಸದ ಸ್ವಾಗತ
ಲಕ್ಷಾಂತರ ಜನರ ಪರೇಡ್.. ತುಂಬಿ ತುಳುಕಿದ ವಾಂಖೆಡೆ... ಮಳೆಯಲ್ಲೂ ಮೇರೆ ಮೀರಿದ ಉತ್ಸಾಹ!!
Team Udayavani, Jul 4, 2024, 6:43 PM IST
ಮುಂಬೈ: ಟಿ20 (T20WorldCup2024) ವಿಶ್ವಕಪ್ ಗೆದ್ದು ತವರಿಗೆ ಮರಳಿದ ಟೀಮ್ ಇಂಡಿಯಾಕ್ಕೆ ದೆಹಲಿಯಲ್ಲಿ ಬೆಳಗ್ಗೆ ಭವ್ಯ ಸ್ವಾಗತ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ ಬಳಿಕ ಸಂಜೆ ಮುಂಬೈನಲ್ಲಿ ಅಭೂತಪೂರ್ವ ಸ್ವಾಗತ ನೀಡಲಾಗಿದೆ.
ಲಕ್ಷಾಂತರ ಜನರು ಮರೀನ್ ಡ್ರೈವ್ ನಿಂದ ವಾಂಖಡೆ ಕ್ರೀಡಾಂಗಣದ ವರೆಗೆ ಅದ್ದೂರಿ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಟ್ರೋಫಿ ಪರೇಡ್ ನಡೆಸಿದ ಬಳಿಕ ಕ್ರೀಡಾಂಗಣದಲ್ಲಿ ವಿಶ್ವಕಪ್ ವಿಜೇತ ತಂಡಕ್ಕೆ ಬಿಸಿಸಿಐ ಅಭಿನಂದನೆ ಸಲ್ಲಿಸಲಿದೆ.
ತುಂಬಿ ತುಳುಕಿದ ವಾಂಖೆಡೆ
ಕ್ರಿಕೆಟ್ ಅಲ್ಲದ ದಿನದಂದು ಮಳೆ ಸುರಿಯುತ್ತಿದ್ದರೂ ತುಂಬಿದ ವಾಂಖೆಡೆ ಕ್ರೀಡಾಂಗಣದಲ್ಲಿ ವಿಶೇಷ ಸಂಭ್ರಮ ಕಂಡು ಬಂದಿದ್ದು, ಸಾವಿರಾರು ಜನರು ಟೀಮ್ ಇಂಡಿಯಾ ಪರ, ಆಟಗಾರರ ಪರ ಜಯಘೋಷಗಳನ್ನು ಮೊಳಗಿಸುತ್ತಿದ್ದಾರೆ. 2007 ರ ಟಿ 20 ವಿಶ್ವಕಪ್‌ನ ವಿಜಯೋತ್ಸವದ ಮೆರವಣಿಗೆ, 2011 ರಲ್ಲಿ ಭಾರತದ ODI ವಿಶ್ವಕಪ್ ವಿಜಯೋತ್ಸವ ನಡೆಸಿದ ಬಳಿಕ ಈಗ T20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆಯನ್ನು ಆಚರಿಸುತ್ತಿರುವುದು ಮುಂಬೈಗೆ ಹೊಸ ಉತ್ಸವವಾಗಿ ಪರಿಣಮಿಸಿದೆ.
ಟಿ20 ವಿಶ್ವಕಪ್ ವಿಜೇತ ತಂಡದ ರೋಡ್ ಶೋಗೆ ಮುಂಚಿತವಾಗಿ ಮುಂಬೈ ಪೊಲೀಸರು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದ್ದುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ನಾರಿಮನ್ ಪಾಯಿಂಟ್ ಮತ್ತು ವಾಂಖೆಡೆ ಸ್ಟೇಡಿಯಂ ನಡುವಿನ ಮರೀನ್ ಡ್ರೈವ್‌ನಲ್ಲಿ ಸಾಕಷ್ಟು ಭದ್ರತೆಯನ್ನು ಕೈಗೊಳ್ಳಲಾಗಿದೆ” ಎಂದು ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ಎಚ್ಚರಿಕೆಗಳನ್ನು ನೀಡಲಾಗಿದ್ದು ಭದ್ರತಾ ಸಿಬಂದಿಗಳನ್ನೂ ನಿಯೋಜಿಸಲಾಗಿದೆ.ಹಲವೆಡೆ ಪಾರ್ಕಿಂಗ್ ಮಾಡದಂತೆ ಬೆಳಗ್ಗಿನಿಂದಲೂ ನಿಷೇಧ ಹೇರಲಾಗಿದೆ. ಭಾರೀ ಸಂಖ್ಯೆಯ ಪೊಲೀಸರು ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
#WATCH | Mumbai: A massive sea of people covers every inch of Marine Drive as fans cheer on and await Team India’s arrival.
The team will have a victory parade shortly, to celebrate their #T20WorldCup2024 victory. pic.twitter.com/oibKAzzhZc
— ANI (@ANI) July 4, 2024
ಆಂಬ್ಯುಲೆನ್ಸ್‌ಗೆ ದಾರಿ
ಜಮಾಯಿಸಿದ ಕ್ರಿಕೆಟ್ ಅಭಿಮಾನಿಗಳು ಆಂಬ್ಯುಲೆನ್ಸ್‌ಗೆ ಭಾರೀ ಜನಸಂದಣಿಯ ಮೂಲಕ ಹಾದುಹೋಗಲು ದಾರಿ ಮಾಡಿಕೊಟ್ಟರು.
ಮುಂಬೈ ವಿಮಾನನಿಲ್ದಾಣದಲ್ಲಿ ಟೀಮ್ ಇಂಡಿಯಾ ಬಂದಿಳಿಯುವ ವೇಳೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಹಾರ್ದಿಕ್ ಪಾಂಡ್ಯ ಅವರು ಟ್ರೋಫಿ ಕೈಯಲ್ಲಿ ಹಿಡಿದುಕೊಂಡು ಬಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.