ಸ್ವಿಟೋಲಿನಾಗೆ ಶರಣಾದ ಟೀನೇಜ್ ಮಾರ್ಟಾ
Team Udayavani, Jan 20, 2018, 3:35 PM IST
ಮೆಲ್ಬರ್ನ್: “ಆಲ್ ಉಕ್ರೇನಿಯನ್’ ರ್ಯಾಕೆಟ್ ಸಮರವೊಂದರಲ್ಲಿ ಎಲಿನಾ ಸ್ವಿಟೋಲಿನಾ ಕೂಟದ ಕಿರಿಯ ಆಟಗಾರ್ತಿ, 15ರ ಹರೆಯದ ಮಾರ್ಟಾ ಕೊಸ್ಟುéಕ್ ಅವರ ಆಸ್ಟ್ರೇಲಿಯನ್ ಓಪನ್ ಓಟಕ್ಕೆ 3ನೇ ಸುತ್ತಿನಲ್ಲಿ ಬ್ರೇಕ್ ಹಾಕಿದ್ದಾರೆ. ಸ್ವಿಟೋಲಿನಾ 6-2, 6-2 ಅಂತರದಿಂದ ಗೆದ್ದು ಪ್ರೀ-ಕ್ವಾರ್ಟರ್ ಫೈನಲ್ ತಲಪಿದರು.
ಮಾರ್ಟಾ ಕೊಸ್ಟುéಕ್ 1996ರ ಬಳಿಕ ಮೆಲ್ಬರ್ನ್ ಕೂಟದ 3ನೇ ಸುತ್ತಿಗೆ ಬಂದ ಕಿರಿಯ ಆಟಗಾರ್ತಿ ಎನಿಸಿದ್ದರು. “ಆಕೆಗೆ ಖಂಡಿತವಾಗಿಯೂ ಉಜ್ವಲ ಭವಿಷ್ಯವಿದೆ’ ಎಂದು ಸ್ವಿಟೋಲಿನಾ ಹಾರೈಸಿದರೆ, “ತೃತೀಯ ಸುತ್ತಿಗೆ ಏರಿದ್ದು ನನ್ನ ಪಾಲಿಗೆ ನಿಜಕ್ಕೂ ವಿಶೇಷ’ ಎಂದು ಕೊಸ್ಟುéಕ್ ಪ್ರತಿಕ್ರಿಯಿಸಿದರು.
ಸ್ವಿಟೋಲಿನಾ ಮುಂದಿನ ಸುತ್ತಿನಲ್ಲಿ ಮತ್ತೋರ್ವ ಅರ್ಹತಾ ಆಟಗಾರ್ತಿ ಡೆನಿಸಾ ಅಲಟೋìವಾ ವಿರುದ್ಧ ಆಡಲಿದ್ದಾರೆ. ಈ ಜೆಕ್ ಆಟಗಾರ್ತಿ ಪೋಲೆಂಡಿನ ಮಾಗಾx ಲಿನೆಟ್ ಅವರನ್ನು 6-1, 6-4ರಿಂದ ಹಿಮ್ಮೆಟ್ಟಿಸಿದರು. ಕ್ರೊವೇಶಿಯಾದ ಪೆಟ್ರಾ ಮಾರ್ಟಿಕ್ ಥಾಯ್ಲೆಂಡಿನ ಲುಕ್ಸಿಕಾ ಕುಂಖುಮ್ ವಿರುದ್ಧ 6-3, 3-6, 7-5ರಿಂದ ಗೆದ್ದು 27ನೇ ಜನ್ಮದಿನದ ಸಂಭ್ರಮ ಆಚರಿಸಿದರು.
ಓಟ ಮುಗಿಸಿದ ಒಸ್ಟಾಪೆಂಕೊ
ಕಳೆದ ವರ್ಷದ ಫ್ರೆಂಚ್ ಓಪನ್ ಚಾಂಪಿಯನ್, ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಅವರ ಸೋಲು ಶುಕ್ರವಾರದ ಅಚ್ಚರಿ ಎನಿಸಿತು. ಒಸ್ಟಾಪೆಂಕೊ ಅವರನ್ನು ಎಸ್ತೋನಿಯಾದ ಅನೆಟ್ ಕೊಂಟವೀಟ್ 6-3, 1-6, 6-3 ಅಂತರದಿಂದ ಕೆಡವಿದರು.
ಸ್ಲೊವಾಕಿಯಾದ ರಿಬರಿಕೋವಾ ಉಕ್ರೇನಿನ ಕ್ಯಾಥರಿನಾ ಬೊಂಡಾರೆಂಕೊ ಅವರನ್ನು 7-5, 3-6, 6-1ರಿಂದ; ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್ ಫ್ರಾನ್ಸ್‌ನ ಅಲಿಜೆ ಕಾರ್ನೆಟ್ ಅವರನ್ನು 7-5, 6-4ರಿಂದ; ಸ್ಪೇನಿನ ಕಾರ್ಲಾ ಸೂರೆಜ್ ನವಾರೊ ಎಸ್ತೋನಿಯಾದ ಕಯಾ ಕನೆಪಿ ಅವರನ್ನು 3-6, 6-1, 6-3ರಿಂದ ಸೋಲಿಸಿ 4ನೇ ಸುತ್ತಿಗೆ ಏರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.