ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಅಮಾನತಿಗೆ ತಾತ್ಕಾಲಿಕ ತಡೆ
Team Udayavani, Feb 22, 2017, 12:48 PM IST
ಬೆಂಗಳೂರು: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅಮಾನತು ಗೊಂಡಿದ್ದ ಸಹಾಯಕ ನಿರ್ದೇಶಕಿ ಕೆ. ಶಶಿಕಲಾ ಅಮಾನತನ್ನು ಕರ್ನಾಟಕ ಆಡಳಿತ ನ್ಯಾಯ ಮಂಡಳಿ (ಕೆಎಟಿ) ತಾತ್ಕಾಲಿಕವಾಗಿ ತಡೆ ಹಿಡಿದಿದೆ.
ಫೆ. 14ರಂದು ಕಂಠೀರವ ಕ್ರೀಡಾಂಗಣ ದಲ್ಲಿನ ಸ್ವತ್ಛತೆ ಕಾರ್ಯಕ್ಕೆ ಸಂಬಂಧಪಟ್ಟಂತೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ಶಶಿಕಲಾ ಅವರನ್ನು ಕ್ರೀಡಾ ಇಲಾಖೆ ನಿರ್ದೇ ಶಕ ಅನುಪಮ್ ಅಗರ್ವಾಲ್ ಅಮಾನತು ಮಾಡಿದ್ದರು. ಇದರ ವಿರುದ್ಧ ಶಶಿಕಲಾ ಮೇಲ್ಮನವಿ ಸಲ್ಲಿಸಿದ್ದರು. ಈ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾ ಲಯ ಕ್ರೀಡಾ ಇಲಾಖೆ ಶಶಿಕಲಾ ಅಮಾನತಿಗೆ ಸೂಕ್ತ ಕಾರಣಗಳನ್ನು ನೀಡಿಲ್ಲ. ಮೇಲ್ನೋಟಕ್ಕೆ ಕ್ಷುಲ್ಲಕ ಕಾರಣಕ್ಕೆ ಶಶಿಕಲಾ ವಿರುದ್ಧ ಕ್ರಮ ಕೈಗೊಂಡಂತೆ ಕಂಡುಬರುತ್ತಿದೆ. ಮುಂದಿನ ಆದೇಶ ಬರುವ ತನಕ ಶಶಿಕಲಾ ಮೇಲಿನ ಅಮಾನತನ್ನು ತಾತ್ಕಾಲಿಕವಾಗಿ ತಡೆ ಹಿಡಿಯ ಲಾಗಿದೆ ಎಂದು ತಿಳಿಸಿದೆ. ಜತೆಗೆ ಶಶಿಕಲಾ ವಿರುದ್ಧ ಕ್ರಮ ಹೊರಡಿಸಿದ ಕ್ರೀಡಾ ಇಲಾಖೆ ನಿರ್ದೇಶಕರಿಗೆ ಸೂಕ್ತ ಉತ್ತರ ನೀಡುವಂತೆ ತಿಳಿಸಿದೆ.
ಏನಿದು ಘಟನೆ?
ಫೆ. 4ರಂದು ಕಂಠೀರವ ಕ್ರೀಡಾಂಗಣಕ್ಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭ ಕ್ರೀಡಾಂಗಣದ ಸುತ್ತಮುತ್ತ ಅಲ್ಲಲ್ಲಿ ಕಸ ತುಂಬಿಕೊಂಡಿತ್ತು ಎನ್ನಲಾಗಿದೆ. ಇದನ್ನು ವಿಲೇವಾರಿ ಮಾಡಿಸುವ ಜವಾಬ್ದಾರಿ ಹೊತ್ತಿದ್ದ ಶಶಿಕಲಾ ಜವಾಬ್ದಾರಿಯನ್ನು ಸರಿ ಯಾಗಿ ನಿಭಾಯಿಸಿಲ್ಲ. ಹಲವಾರು ಬಾರಿ ಅವರು ಎಚ್ಚರಿಕೆಯನ್ನೂ ಗಂಭೀರವಾಗಿ ಪರಿ ಗಣಿಸಿಲ್ಲ. ಹೀಗಾಗಿ ಅವರನ್ನು ಅಮಾನತು ಮಾಡಲಾಗುತ್ತಿದೆ ಎಂದು ಕ್ರೀಡಾ ಇಲಾಖೆ ಫೆ.14ರಂದು ಅಮಾನತು ನೊಟೀಸ್ ಜಾರಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.