ತೆಂಡುಲ್ಕರ್ ಕೂಡ ಚೆಂಡಿನರೂಪ ಕೆಡಿಸಿದ್ದಾರೆ: ಯೂನಿಸ್
Team Udayavani, Jun 30, 2017, 3:35 AM IST
ಲಾಹೋರ್: ಕ್ರಿಕೆಟ್ನಲ್ಲಿ ಚೆಂಡನ್ನು ವಿರೂಪಗೊಳಿಸುವುದು ಮಾಮೂಲು, ಇದಕ್ಕೆ ನಾನಾ ವಿಧಾನವನ್ನು ಬಳಸಲಾಗುತ್ತದೆ, ಸಚಿನ್ ತೆಂಡುಲ್ಕರ್ ಕೂಡ “ಬಾಲ್ ಟ್ಯಾಂಪರಿಂಗ್’ ಮಾಡಿದ್ದಾರೆ! ಇಂಥದೊಂದು ಹೇಳಿಕೆ ಮೂಲಕ ಚರ್ಚೆಗೆ ಹಾದಿ ಮಾಡಿಕೊಟ್ಟಿದ್ದಾರೆ, ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ ಪಾಕಿಸ್ಥಾನಿ ಕ್ರಿಕೆಟಿಗ ಯೂನಿಸ್ ಖಾನ್.
ಪಾಕಿಸ್ಥಾನದ ವಾರ್ತಾ ವಾಹಿನಿಯೊಂದರ ಜತೆ ತಮ್ಮ ಕ್ರಿಕೆಟ್ ಬದುಕಿನ ಸುದೀರ್ಘ ಹಿನ್ನೋಟವನ್ನು ತೆರೆದಿಡುವಾಗ ಯೂನಿಸ್ ಖಾನ್ ಚೆಂಡನ್ನು ವಿರೂಪಗೊಳಿಸುವ ಕುರಿತೂ ಮಾತಾಡಿದ್ದಾರೆ. “ಚೆಂಡಿನ ರೂಪ ಕೆಡಿಸುವುದು ಕ್ರಿಕೆಟ್ನಲ್ಲಿ ಮಾಮೂಲು. ಆಟಗಾರರು ಇದಕ್ಕೆ ವಿಭಿನ್ನ ಮಾರ್ಗಗಳನ್ನು ಬಳಸುತ್ತಾರೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯನ್ನರು ಅಂಟು ಅಥವಾ ಸಿಹಿ ಪದಾರ್ಥವನ್ನು ಬಳಸಿ ಚೆಂಡನ್ನು ಹೊಳೆಯುವಂತೆ ಮಾಡುತ್ತಾರೆ. ದಕ್ಷಿಣ ಆಫ್ರಿಕಾದ ಡು ಪ್ಲೆಸಿಸ್ ತಮ್ಮ ಉಡುಗೆಯ ಜಿಪ್ ಬಳಸುತ್ತಾರೆ. ಅಷ್ಟೇಕೆ, ಒಮ್ಮೆ ಸಚಿನ್ ತೆಂಡುಲ್ಕರ್ ಕೈ ಉಗುರಿನಿಂದ ಈ ಕೆಲಸ ಮಾಡಿದ್ದಾರೆ. ಆದರೆ ಬಲಿಷ್ಠ ಕ್ರಿಕೆಟ್ ಮಂಡಳಿಗಳಿಂದಾಗಿ ಈ ವಿದ್ಯಮಾನಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲಿಲ್ಲ…’ ಎಂಬುದಾಗಿ ಯೂನಿಸ್ ಖಾನ್ ಹೇಳಿದ್ದಾರೆ.
“ಆದರೆ ದೊಡ್ಡ ಮಟ್ಟದಲ್ಲಿ ಹಾಗೂ ಉದ್ದೇಶಪೂರ್ವಕವಾಗಿ ಚೆಂಡಿನ ರೂಪ ಕೆಡಿಸಲು ಪ್ರಯತ್ನಿಸಿದ್ದೇ ಆದರೆ ಇದು ಕೂಡಲೇ ನಿಲ್ಲಬೇಕು. ಮುಂದಿನ ಕ್ರಿಕೆಟ್ ಜನಾಂಗಕ್ಕೆ, ಈಗಿನ ಮಕ್ಕಳಿಗೆ ಇದು ತಪ್ಪು ಎಂಬುದರ ಸ್ಪಷ್ಟ ಅರಿವಾಗಬೇಕಿದೆ…’ ಎಂದೂ ಯೂನಿಸ್ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.