ಟೆನಿಸ್ ರಾಂಕಿಂಗ್ ಸೋಂಗ, ಸ್ವಿಟೋಲಿನಾ ಟಾಪ್-10
Team Udayavani, Feb 28, 2017, 11:33 AM IST
ಪ್ಯಾರಿಸ್: ಮಾರ್ಸೆಲಿ ಟೆನಿಸ್ ಪ್ರಶಸ್ತಿ ವಿಜೇತ ಫ್ರಾನ್ಸ್‌ನ ಜೋ ವಿಲ್‌ಫ್ರೆಡ್ ಸೋಂಗ ನೂತನ ಎಟಿಪಿ ರಾಂಕಿಂಗ್ನಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದಾರೆ. ಮರಳಿ ಟಾಪ್-10 ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಮಾರ್ಸೆಲಿ ಪ್ರಶಸ್ತಿ ಸಾಧನೆಯಿಂದ ರಾಂಕಿಂಗ್ನಲ್ಲಿ 4 ಸ್ಥಾನಗಳ ಪ್ರಗತಿ ಸಾಧಿಸಿದ ಸೋಂಗ 7ನೇ ಸ್ಥಾನಕ್ಕೆ ಲಗ್ಗೆ ಇರಿಸಿದರು. ಇದು ಕಳೆದ ಜೂನ್ ಬಳಿಕ ಸೋಂಗ ಕಂಡ ಅತ್ಯುತ್ತಮ ರಾಂಕಿಂಗ್ ಆಗಿದೆ. ಸೋಂಗ ಕೈಲಿ ಪರಾಜಯ ಅನು ಭವಿಸಿದ ಮಾರ್ಸೆಲ್ ಪೌಲಿ ಕೂಡ 2 ಸ್ಥಾನ ಮೇಲೇರಿ ರ್‍ಯಾಂಕಿಂಗ್ ಯಾದಿಯಲ್ಲಿ 15ನೇ ಸ್ಥಾನ ಪಡೆದಿದ್ದಾರೆ.
ಇನ್ನೊಂದೆಡೆ, ರಿಯೋ ಡಿ ಜನೈರೊ ಟೆನಿಸ್ ಪ್ರಶಸ್ತಿ ಗೆದ್ದರೂ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಒಂದು ಸ್ಥಾನ ಕುಸಿದಿದ್ದಾರೆ. ಅವರೀಗ 9ನೇ ಸ್ಥಾನದಲ್ಲಿದ್ದಾರೆ. ಡೆಲ್ರೆ ಬೀಚ್ ಟೆನಿಸ್ ಚಾಂಪಿಯನ್ ಅಮೆರಿಕದ ಜಾಕ್ ಸೋಕ್ 3 ಸ್ಥಾನ ಮೇಲೇರಿ ಟಾಪ್-20 ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರಿಟನ್ನಿನ ಆ್ಯಂಡಿ ಮರ್ರೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಟಾಪ್-10 ರಾಂಕಿಂಗ್ :
1. ಆ್ಯಂಡಿ ಮರ್ರೆ (11, 540), 2. ನೊವಾಕ್ ಜೊಕೋವಿಕ್ (9,735), 3. ಸ್ಟಾನಿಸ್ಲಾಸ್ ವಾವ್ರಿಂಕ (5,195), 4. ಮಿಲೋಸ್ ರಾನಿಕ್ (5,080), 5. ಕೀ ನಿಶಿಕೊರಿ (4,730), 6. ರಫೆಲ್ ನಡಾಲ್ (4,115), 7. ಜೋ ವಿಲ್‌ಫ್ರೆಡ್ ಸೋಂಗ (3,480), 8. ಮರಿನ್ ಸಿಲಿಕ್ (3,410), 9. ಡೊಮಿನಿಕ್ ಥೀಮ್ (3,375), 10. ರೋಜರ್ ಫೆಡರರ್ (3,260).
ವನಿತಾ ವಿಭಾಗದಲ್ಲಿ ದುಬಾೖ ಡಬ್ಲ್ಯುಟಿಎ ಪ್ರಶಸ್ತಿ ಗೆದ್ದ ಉಕ್ರೇನಿನ ಎಲಿನಾ ಸ್ವಿಟೋಲಿನಾ ಮೊದಲ ಬಾರಿಗೆ ಟಾಪ್-10 ಯಾದಿಯನ್ನು ಅಲಂಕರಿಸಿದ ಖುಷಿಯಲ್ಲಿದ್ದಾರೆ. 22ರ ಹರೆಯದ ಸ್ವಿಟೋಲಿನಾ 3 ಸ್ಥಾನ ಮೇಲೇರಿದ್ದು, ರಾಂಕಿಂಗ್ ಯಾದಿಯ 10ನೇ ಸ್ಥಾನದಲ್ಲಿದ್ದಾರೆ.
10ನೇ ಸ್ಥಾನದಲ್ಲಿದ್ದ ಬ್ರಿಟನ್ನಿನ ಜೊಹಾನ್ನಾ ಕೊಂಟಾ 11ಕ್ಕೆ ಇಳಿದರು. ಡೆನ್ಮಾರ್ಕ್‌ನ ಕ್ಯಾರೋಲಿನ್ ವೋಜ್ನಿಯಾಕಿ ಒಂದು ಸ್ಥಾನ ಮೇಲೇರಿದ್ದು, 14ನೇ ರಾಂಕಿಂಗ್ ಹೊಂದಿದ್ದಾರೆ.
ಸೆರೆನಾ ವಿಲಿಯಮ್ಸ್ ರಾಂಕಿಂಗ್ ಯಾದಿಯ ಅಗ್ರಸ್ಥಾನದಲ್ಲಿ ಮುಂದು ವರಿದಿದ್ದು, ಆ್ಯಂಜೆಲಿಕ್ ಕೆರ್ಬರ್ ದ್ವಿತೀಯ ಸ್ಥಾನ ದಲ್ಲಿದ್ದಾರೆ. ದುಬಾೖ ಟೆನಿಸ್ ಪ್ರಶಸ್ತಿ ಜಯಿಸಿದ್ದೇ ಆದರೆ ಕೆರ್ಬರ್ ಮತ್ತೆ ನಂಬರ್ ವನ್ ಆಗಿ ಮೂಡಿ ಬರುತ್ತಿದ್ದರು. ಆದರೆ ಅವರು ಸೆಮಿಫೈನಲ್‌ನಲ್ಲಿ ಸ್ವಿಟೋಲಿನಾಗೆ ಶರಣಾಗಿ ಈ ಅವಕಾಶ ಕಳೆದುಕೊಂಡರು.
ಟಾಪ್-10 ಆಟಗಾರ್ತಿಯರು
1. ಸೆರೆನಾ ವಿಲಿಯಮ್ಸ್ (7,780), 2. ಆ್ಯಂಜೆಲಿಕ್ ಕೆರ್ಬರ್ (7,405), 3. ಕ್ಯಾರೋಲಿನಾ ಪ್ಲಿಸ್ಕೋವಾ (5,640), 4.ಸಿಮೋನಾ ಹಾಲೆಪ್ (5,172), 5. ಡೊಮಿನಿಕಾ ಸಿಬುಲ್ಕೋವಾ (5,075), 6. ಅಗ್ನಿàಸ್ಕಾ ರಾದ್ವಂಸ್ಕಾ (4,670), 7. ಗಾರ್ಬಿನ್ ಮುಗುರುಜಾ (4,585), 8. ಸ್ವೆತ್ಲಾನಾ ಕುಜ್ನೆತ್ಸೋವಾ (3,915), 9. ಮ್ಯಾಡಿಸನ್ ಕೇಯ್ಸ (3,897), 10. ಎಲಿನಾ ಸ್ವಿಟೋಲಿನಾ (3,890).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.