ಬೆಥನಿ ಮಾಟೆಕ್ಗೆ ಗಂಭೀರ ಗಾಯ
Team Udayavani, Jul 8, 2017, 3:45 AM IST
ಲಂಡನ್: ವಿಂಬಲ್ಡನ್ ಟೆನಿಸ್ ಕೂಟದ ಪಂದ್ಯದ ವೇಳೆ ಅಮೆರಿಕದ ಬೆಥನಿ ಮಾಟೆಕ್ ಸ್ಯಾಂಡ್ಸ್ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿದೆ. ಗಾಯದಿಂದ ಅಂಗಣಕ್ಕೆ ಕುಸಿದ ಅವರು ನೋವು ತಡೆಯಲಾಗದೇ ಜೋರಾಗಿ ಕಿರುಚಿಕೊಂಡರು.
ರೊಮಾನಿಯಾದ ಸೋರಾನಾ ಸಿಸ್ಟಿìಯಾ ವಿರುದ್ಧ ನಿರ್ಣಾಯಕ ಸೆಟ್ನ ಮೊದಲ ಗೇಮ್ನಲ್ಲಿ 32ರ ಹರೆಯದ ಸ್ಯಾಂಡ್ಸ್ ಅವರು ನೆಟ್ ಕಡೆ ಆಗಮಿಸಿದ ವೇಳೆ ಬಲ ಮೊಣಕಾಲಿಗೆ ಗಂಭೀರ ಗಾಯವಾಗಿ ನೆಲಕ್ಕೆ ಕುಸಿದರು. “ಪ್ಲೀಸ್ ಹೆಲ್ಪ್ ಮಿ, ಪ್ಲೀಸ್, ಪ್ಲೀಸ್’ ಎಂದು ನೋವಿನಿಂದ ಕಿರುಚಿಗೊಂಡರು. ತತ್ಕ್ಷಣವೇ ಸ್ಯಾಂಡ್ಸ್ ಅವರ ಪತಿ ಜಸ್ಟಿನ್ ಅಂಗಣಕ್ಕೆ ಆಗಮಿಸಿ ಪತ್ನಿಯನ್ನು ಸಮಾಧಾನಪಡಿಸಿದರು. ವೈದ್ಯರು ಬಂದು ಪರೀಕ್ಷಿಸಿದರು. ಆಘಾತಗೊಂಡ ಸಿಸ್ಟಿìಯಾ ಅವರ ಕಣ್ಣಲ್ಲಿ ನೀರು ಬಂದಿತ್ತು.
ಸುಮಾರು 20 ನಿಮಿಷ ಅಂಗಣದಲ್ಲಿ ಮಲಗಿದ್ದ ಮಾಟೆಕ್ ಸ್ಯಾಂಡ್ಸ್ ಅವರನ್ನು ಆಬಳಿಕ ಸ್ಟ್ರೇಚರ್ನಲ್ಲಿ ಹೊರಗಡೆ ಕೊಂಡೊಯ್ಯಲಾಯಿತು. ಸ್ಯಾಂಡ್ಸ್ ಅವರ ಡಬಲ್ಸ್ ಜತೆಗಾರ್ತಿ ಲೂಸಿ ಸಫರೋವಾ ಕೂಡ ಸ್ಥಳಕ್ಕೆ ಆಗಮಿಸಿದರು. ಅವರ ಕಣ್ಣಲ್ಲಿ ಕೂಡ ನೀರು ಬಂದಿತ್ತು. ಅವರಿಬ್ಬರು ಜತೆಯಾಗಿ ನಾಲ್ಕು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದು ವಿಶ್ವದ ನಂಬರ್ ವನ್ ರ್ಯಾಂಕಿಂಗ್ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.