England ವಿರುದ್ಧ ಟೆಸ್ಟ್ ; ಮೊದಲ ದಿನ ಭಾರತದ ವನಿತೆಯರ ಅಮೋಘ ಆಟ
ಪದಾರ್ಪಣೆ ಪಂದ್ಯದಲ್ಲೇ ಗಮನ ಸೆಳೆದ ಕರ್ನಾಟಕದ ಶುಭಾ ಸತೀಶ್
Team Udayavani, Dec 14, 2023, 5:31 PM IST
ನವೀ ಮುಂಬಯಿ: ಭಾರತ-ಇಂಗ್ಲೆಂಡ್ ನಡುವಿನ ಏಕೈಕ ವನಿತಾ ಟೆಸ್ಟ್ ಪಂದ್ಯ ಗುರುವಾರ “ಡಿ.ವೈ. ಪಾಟೀಲ್ ಸ್ಟೇಡಿಯಂ’ ನಲ್ಲಿ ಆರಂಭವಾಗಿದ್ದು, ಮೊದಲ ಸಲ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿರುವ ಹರ್ಮನ್‌ಪ್ರೀತ್ ಕೌರ್ ಬಳಗ ಮೊದಲ ದಿನ ಅಮೋಘ ಬ್ಯಾಟಿಂಗ್ ವೈಭವ ತೋರಿದೆ.
ನಾಲ್ವರ ಅರ್ಧ ಶತಕಗಳೊಂದಿಗೆ ಮೊದಲ ದಿನದಾಟದಂತ್ಯಕ್ಕೆ94 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿದೆ. ಸ್ಮೃತಿ ಮಂಧಾನ 17, ಶಫಾಲಿ ವರ್ಮ 19, ಶುಭಾ ಸತೀಶ್ 69, ಜೆಮಿಮಾ ರೋಡ್ರಿಗಸ್ 68, ನಾಯಕಿ ಹರ್ಮನ್‌ಪ್ರೀತ್ ಕೌರ್ 49 ರನ್ ಗಳಿಸಿ ಔಟಾದರು. ಯಾಸ್ತಿಕಾ ಭಾಟಿಯಾ 66 ರನ್ , ದೀಪ್ತಿ ಶರ್ಮಾ 60 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸ್ನೇಹ ರಾಣಾ 30, ಪೂಜಾ ವಸ್ತ್ರಾಕರ್ 4 ರನ್ ಗಳಿಸಿ ಆಟವಾಡುತ್ತಿದ್ದಾರೆ.
ಟೆಸ್ಟ್ ಪದಾರ್ಪಣೆ ಮಾಡಿದ ಕರ್ನಾಟಕದ ಎಡಗೈ ಆಟಗಾರ್ತಿ ಶುಭಾ ಸತೀಶ್ ಒನ್ ಡೌನ್ ಆಟಗಾರ್ತಿಯಾಗಿ ಬ್ಯಾಟಿಂಗ್ ಗೆ ಬಂದು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.76 ಎಸೆತಗಳಲ್ಲಿ 69 ರನ್ ಗಳಿಸಿ ಔಟಾದರು. ಜೆಮಿಮಾ ರೋಡ್ರಿಗಸ್ ಅವರೊಂದಿಗೆ ಅಮೋಘ ಜತೆಯಾಟವಾಡಿದರು.