Test: ಐರ್ಲೆಂಡ್ಗೆ ಮೊದಲ ಗೆಲುವು
Team Udayavani, Mar 2, 2024, 12:31 AM IST
ಅಬುಧಾಬಿ: ಐರ್ಲೆಂಡ್ ತನ್ನ ಟೆಸ್ಟ್ ಇತಿಹಾಸದ ಮೊದಲ ಗೆಲುವನ್ನು ದಾಖಲಿಸಿದೆ. ಅಬುಧಾಬಿಯಲ್ಲಿ ನಡೆದ ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದು ಸಂಭ್ರಮಿಸಿದೆ.
111 ರನ್ ಗೆಲುವಿನ ಗುರಿ ಪಡೆದ ಐರ್ಲೆಂಡ್, 4 ವಿಕೆಟ್ ನಷ್ಟದಲ್ಲಿ ಇದನ್ನು ಸಾಧಿಸಿತು. 13 ರನ್ನಿಗೆ 3 ವಿಕೆಟ್ ಬಿದ್ದಾಗ ಐರ್ಲೆಂಡ್ ಆತಂಕಕ್ಕೆ ಸಿಲುಕಿತ್ತು. ಆದರೆ ಕಪ್ತಾನನ ಆಟವಾಡಿದ ಆರಂಭಕಾರ ಆ್ಯಂಡ್ರೂé ಬಾಲ್ಬಿರ್ನಿ ಅಜೇಯ 58 ರನ್ ಬಾರಿಸಿ ತಂಡವನ್ನು ದಡ ಸೇರಿಸಿದರು. ಇವರೊಂದಿಗೆ ಲೋರ್ಕಾನ್ ಟ್ಯುಕರ್ 27 ರನ್ ಗಳಿಸಿ ಅಜೇಯರಾಗಿದ್ದರು. ಇವರಿಬ್ಬರ ನಡುವೆ 72 ರನ್ ಜತೆಯಾಟ ನಡೆಯಿತು.
ಅಫ್ಘಾನಿಸ್ಥಾನ ಮತ್ತು ಐರ್ಲೆಂಡ್ 2017ರಲ್ಲಿ ಒಟ್ಟಿಗೇ ಟೆಸ್ಟ್ ಮಾನ್ಯತೆ ಪಡೆದಿದ್ದವು. ಐರ್ಲೆಂಡ್ ಇಂದಿನ ಗೆಲುವಿಗೂ ಮುನ್ನ ಸತತ 7 ಸೋಲು ಅನುಭವಿಸಿತ್ತು.
ಸಂಕ್ಷಿಪ್ತ ಸ್ಕೋರ್: ಅಫ್ಘಾನಿಸ್ಥಾನ-155 ಮತ್ತು 218. ಐರ್ಲೆಂಡ್-263 ಮತ್ತು 4 ವಿಕೆಟಿಗೆ 111. ಪಂದ್ಯಶ್ರೇಷ್ಠ: ಮಾರ್ಕ್ ಅಡೈರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.