ಟೆಸ್ಟ್ : ಭಾರತ “ಎ’ ಇನ್ನಿಂಗ್ಸ್ ಜಯಭೇರಿ
ಚತುರ್ದಿನ ಪಂದ್ಯ ಮೂರೇ ದಿನಕ್ಕೆ ಮುಕ್ತಾಯ
Team Udayavani, May 28, 2019, 6:00 AM IST
ಬೆಳಗಾವಿ: ಇಲ್ಲಿನ ಆಟೋ ನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಭಾರತ “ಎ’ ಮತ್ತು ಶ್ರೀಲಂಕಾ “ಎ’ ತಂಡಗಳ ನಡುವಿನ ಚತುರ್ದಿನ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಗಿದಿದೆ. ಭಾರತ “ಎ’ ಇನ್ನಿಂಗ್ಸ್ ಹಾಗೂ 205 ರನ್ನುಗಳ ಭರ್ಜರಿ ಜಯ ಸಾಧಿಸಿದೆ.
ಸೋಮವಾರ ಭಾರತದ ಮಾರಕ ಬೌಲಿಂಗ್‌ಗೆ ತತ್ತರಿಸಿದ ಶ್ರೀಲಂಕಾ “ಎ’ ತಂಡದ ಆಟಗಾರರು ಪೆವಿಲಿಯನ್ ಹಾದಿ ಹಿಡಿದರು. ಮೂರನೇ ದಿನದಾಟದಲ್ಲಿ ಭಾರತ ಒಟ್ಟು 17 ವಿಕೆಟ್‌ಗಳನ್ನು ಕಬಳಿಸಿ ವಿಜಯದ ನಗೆ ಬೀರಿತು. ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ್ದ ಅಭಿಮನ್ಯು ಈಶ್ವರನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಾರತ ಮೊದಲನೇ ಇನಿಂಗ್ಸ್ ನಲ್ಲಿ ಗಳಿಸಿದ್ದ ಬೃಹತ್ 622 ರನ್ (5 ವಿಕೆಟಿಗೆ ಡಿಕ್ಲೇರ್) ಬೆನ್ನತ್ತಿದ್ದ ಶ್ರೀಲಂಕಾ ಮೊದಲನೇ ಇನ್ನಿಂಗ್ಸ್‌ನಲ್ಲಿ 232 ರನ್ನುಗಳಿಗೆ ಆಲೌಟ್ ಆಯಿತು. ಫಾಲೋಆನ್‌ಗೆ ತುತ್ತಾಗಿ ಮತ್ತೆ ಬ್ಯಾಟಿಂಗಿಗೆ ಇಳಿದು 185ಕ್ಕೆ ಕುಸಿಯಿತು.
ರಾಹುಲ್ ಚಹರ್ ಮತ್ತೆ 4 ವಿಕೆಟ್ ಕಬಳಿಸಿದರು. ಮೊದಲ ಪಂದ್ಯದಲ್ಲೂ ಅವರಿಗೆ 4 ವಿಕೆಟ್ ಸಿಕ್ಕಿತ್ತು. ಅಂಕಿತ್ ರಜಪೂತ್, ಸಂದೀಪ್ ವಾರಿಯರ್, ಸ್ಪಿನ್ನರ್ ಜಯಂತ್ ಯಾದವ್ ತಲಾ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಭಾರತ “ಎ’-5 ವಿಕೆಟಿಗೆ 622 ಡಿಕ್ಲೇರ್. ಶ್ರೀಲಂಕಾ “ಎ’-232 ಮತ್ತು 185.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru; ಮದ್ಯ ಕುಡಿಸಿ ಅತ್ಯಾಚಾ*ರ: ಬಿಜೆಪಿ ಮುಖಂಡ ಜಿಮ್ ಸೋಮನ ವಿರುದ್ಧ ಕೇಸ್
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.