Test; ಬ್ರಾಡ್ಮನ್ ದಾಖಲೆ ಸರಿದೂಗಿಸಿದ ಮೆಂಡಿಸ್
Team Udayavani, Sep 28, 2024, 1:35 AM IST
ಗಾಲೆ: ಶ್ರೀಲಂಕಾದ ಕಮಿಂಡು ಮೆಂಡಿಸ್ ಕ್ರಿಕೆಟ್ ದಂತಕತೆ ಡೊನಾಲ್ಡ್ ಬ್ರಾಡ್ಮನ್ ಅವರ ದಾಖಲೆ ಯೊಂದನ್ನು ಸರಿದೂಗಿಸಿದ್ದಾರೆ. ಕೇವಲ 13 ಇನ್ನಿಂಗ್ಸ್ ಗಳಲ್ಲಿ ಸಾವಿರ ರನ್ ಪೂರ್ತಿಗೊಳಿಸಿ ಬ್ರಾಡ್ಮನ್ ಅವರೊಂದಿಗೆ ಜಂಟಿ ದ್ವಿತೀಯ ಸ್ಥಾನಿಯಾಗಿದ್ದಾರೆ.
ಬ್ರಾಡ್ಮನ್ 1930ರ ಆ್ಯಶಸ್ ಸರಣಿಯ ಹೇಡಿಂಗ್ಲೆ ಟೆಸ್ಟ್ನಲ್ಲಿ ಈ ಸಾಧನೆಗೈದಿದ್ದರು. ಇಂಗ್ಲೆಂಡ್ನ ಹರ್ಬಟ್ ಸಟ್ಕ್ಲಿಫ್ ಮತ್ತು ವೆಸ್ಟ್ ಇಂಡೀಸ್ನ ಎವರ್ಟನ್ ವೀಕ್ಸ್ ಜಂಟಿ ಅಗ್ರಸ್ಥಾನದಲ್ಲಿದ್ದಾರೆ (12 ಇನ್ನಿಂಗ್ಸ್).
ನ್ಯೂಜಿಲ್ಯಾಂಡ್ ಎದುರಿನ ಗಾಲೆ ಟೆಸ್ಟ್ ಪಂದ್ಯದ 2ನೇ ದಿನ ಈ ದಾಖಲೆ ನಿರ್ಮಾಣಗೊಂಡಿತು. ಶ್ರೀಲಂಕಾ 5 ವಿಕೆಟಿಗೆ 602 ರನ್ ಪೇರಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ. ಕಮಿಂಡು ಮೆಂಡಿಸ್ 182 ರನ್ ಬಾರಿಸಿ ಅಜೇಯರಾಗಿ ಉಳಿದರು (250 ಎಸೆತ, 16 ಬೌಂಡರಿ, 4 ಸಿಕ್ಸರ್). ಕುಸಲ್ ಮೆಂಡಿಸ್ ಅಜೇಯ 106 ರನ್ ಹೊಡೆದರು. ಇವರ ಶತಕ ಪೂರ್ತಿಯಾದೊಡನೆ ಲಂಕಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು.
ಲಂಕಾ ಸರದಿಯಲ್ಲಿ ಒಟ್ಟು ಮೂವ ರಿಂದ ಸೆಂಚುರಿ ದಾಖಲಾಯಿತು. ಮೊದಲ ದಿನ ದಿನೇಶ್ ಚಂಡಿಮಾಲ್ 116 ರನ್ ಹೊಡೆದಿದ್ದರು. ನಿನ್ನೆಯ ಮತ್ತೋರ್ವ ನಾಟೌಟ್ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ ಅವರಿಗೆ ಸೆಂಚುರಿ ತಪ್ಪಿತು (88). ನ್ಯೂಜಿಲ್ಯಾಂಡ್ 22 ರನ್ನಿಗೆ 2 ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.