ಟೆಸ್ಟ್ ರ್‍ಯಾಂಕಿಂಗ್: ಕೊಹ್ಲಿಯೇ ನಂ.1
Team Udayavani, Dec 17, 2019, 6:15 AM IST
ದುಬಾೖ: ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ನಡುವಿನ ಪರ್ತ್ ಡೇ-ನೈಟ್ ಟೆಸ್ಟ್ ಪಂದ್ಯದ ಬಳಿಕ ಬಿಡುಗಡೆ ಮಾಡಲಾದ ಐಸಿಸಿ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ (928). ಸ್ಟೀವನ್ ಸ್ಮಿತ್ ದ್ವಿತೀಯ ಸ್ಥಾನದಲ್ಲಿದ್ದಾರೆ (911). ಇವರಿಬ್ಬರ ನಡುವೆ 17 ಅಂಕಗಳ ಅಂತರವಿದೆ.
ಅಗ್ರ ಹತ್ತರಲ್ಲಿರುವ ಭಾರತದ ಮತ್ತಿಬ್ಬರು ಬ್ಯಾಟ್ಸ್‌ಮನ್‌ಗಳೆಂದರೆ ಚೇತೇಶ್ವರ್ ಪೂಜಾರ (4) ಮತ್ತು ಅಜಿಂಕ್ಯ ರಹಾನೆ (6). ಪ್ರಚಂಡ ಫಾರ್ಮ್ನಲ್ಲಿರುವ ಆಸ್ಟ್ರೇಲಿಯದ ಮಾರ್ನಸ್ ಲಬುಶೇನ್ ಇನ್ನಷ್ಟು ಮೇಲೇರಿದ್ದು, ಮೊದಲ ಸಲ ಅಗ್ರ ಐದ ರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾದಿಯಲ್ಲಿ ಅವರು ತಮ್ಮದೇ ನಾಡಿನ ಡೇವಿಡ್ ವಾರ್ನರ್ ಅವರನ್ನು ಕೆಳಕ್ಕೆ ತಳ್ಳಿದರು.
ಪಾಕಿಸ್ಥಾನದ ಬಾಬರ್ ಆಜಂ ಮೊದಲ ಸಲ ಟಾಪ್-10 ಯಾದಿಯಲ್ಲಿ ಗೋಚರಿಸಿದ್ದಾರೆ. ಅವರು 13ರಿಂದ 10ನೇ ಸ್ಥಾನಕ್ಕೆ ಏರಿದರು.
ಪ್ಯಾಟ್ ಕಮಿನ್ಸ್ ನಂ.1
ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಅಗ್ರಸ್ಥಾನಲ್ಲಿ ಮುಂದುವರಿದಿದ್ದಾರೆ. ಸದ್ಯ ಟೀಮ್ ಇಂಡಿಯಾದಿಂದ ಬೇರ್ಪಟ್ಟಿರುವ ಜಸ್‌ಪ್ರೀತ್ ಬುಮ್ರಾ 6ನೇ ಸ್ಥಾನಕ್ಕೆ ಜಾರಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಪರ್ತ್‌ನಲ್ಲಿ 7 ವಿಕೆಟ್ ಉರುಳಿಸಿದ ನ್ಯೂಜಿಲ್ಯಾಂಡಿನ ನೀಲ್ ವ್ಯಾಗ್ನರ್ 3ನೇ ಸ್ಥಾನಕ್ಕೆ ನೆಗೆದರೆ, ಇದೇ ಪಂದ್ಯದಲ್ಲಿ 9 ವಿಕೆಟ್ ಕಿತ್ತ ಟಿಮ್ ಸೌಥಿ ಪುನಃ ಅಗ್ರ ಹತ್ತಕ್ಕೆ ಬಂದಿದ್ದಾರೆ. 9 ವಿಕೆಟ್ ಉರುಳಿಸಿ ಮಿಂಚಿದ ಮಿಚೆಲ್ ಸ್ಟಾರ್ಕ್ ಜೀವನಶ್ರೇಷ್ಠ 5ನೇ ಸ್ಥಾನ ಪಡೆದಿದ್ದಾರೆ.
ಆಲ್‌ರೌಂಡರ್‌ಗಳ ಯಾದಿಯಲ್ಲಿ ಜಾಸನ್ ಹೋಲ್ಡರ್, ರವೀಂದ್ರ ಜಡೇಜ ಮೊದಲೆರಡು ಸ್ಥಾನ ಉಳಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.