Test; ಬೇರೂರಿ ನಿಂತ ಜೋ ರೂಟ್: ಲಂಕೆಯನ್ನು ಮಣಿಸಿದ ಇಂಗ್ಲೆಂಡ್
Team Udayavani, Aug 26, 2024, 1:07 AM IST
ಮ್ಯಾಂಚೆಸ್ಟರ್: ಅನುಭವಿ ಬ್ಯಾಟರ್ ಜೋ ರೂಟ್ ಅವರ 64ನೇ ಅರ್ಧ ಶತಕದ ನೆರವಿನಿಂದ ಪ್ರವಾಸಿ ಶ್ರೀಲಂಕಾ ಎದುರಿನ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ 5 ವಿಕೆಟ್‌ಗಳಿಂದ ಗೆದ್ದು 1-0 ಮುನ್ನಡೆ ಸಾಧಿಸಿದೆ.
ಗೆಲುವಿಗೆ 205 ರನ್ನುಗಳ ಸಾಮಾನ್ಯ ಗುರಿ ಪಡೆದಿದ್ದ ಇಂಗ್ಲೆಂಡ್, ಇದನ್ನು ಬೆನ್ನಟ್ಟುವ ವೇಳೆ ಒಂದಿಷ್ಟು ಆತಂಕಕ್ಕೆ ಸಿಲುಕಿತು. ಆದರೆ ರೂಟ್ ಬೇರೂರಿ ನಿಂತು ತಂಡವನ್ನು ದಡ ಸೇರಿಸುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್ 5ಕ್ಕೆ 205 ರನ್ ಗಳಿಸಿದ ವೇಳೆ ರೂಟ್ 62 ರನ್ ಮಾಡಿ ಅಜೇಯರಾಗಿದ್ದರು.
ಇದರೊಂದಿಗೆ ಟೆಸ್ಟ್ ಇತಿಹಾಸದಲ್ಲಿ ಅತ್ಯಧಿಕ ಅರ್ಧ ಶತಕ ಬಾರಿಸಿದವರ ಯಾದಿಯಲ್ಲಿ ಜೋ ರೂಟ್ 3ನೇ ಸ್ಥಾನಕ್ಕೇರಿದರು (64). ಮೊದಲೆರಡು ಸ್ಥಾನದಲ್ಲಿರುವವರು ಸಚಿನ್ ತೆಂಡುಲ್ಕರ್ (68) ಮತ್ತು ಶಿವನಾರಾಯಣ್ ಚಂದರ್‌ಪಾಲ್ (66). ಅಲನ್ ಬೋರ್ಡರ್ ಮತ್ತು ರಾಹುಲ್ ದ್ರಾವಿಡ್ ತಲಾ 63 ಫಿಫ್ಟಿ ಹೊಡೆದಿದ್ದಾರೆ. ರಿಕಿ ಪಾಂಟಿಂಗ್ (62) ಅನಂತರದ ಸ್ಥಾನದಲ್ಲಿದ್ದಾರೆ.
ಇದು ಇಂಗ್ಲೆಂಡ್‌ನ ಸತತ 4ನೇ ಟೆಸ್ಟ್ ಗೆಲುವು. ಜುಲೈಯಲ್ಲಿ ಅದು ವೆಸ್ಟ್ ಇಂಡೀಸ್ ವಿರುದ್ಧ 3-0 ಕ್ಲೀನ್‌ಸಿÌàಪ್ ಸಾಧಿಸಿತ್ತು.
ಎರಡೂ ಇನ್ನಿಂಗ್ಸ್‌ನಲ್ಲಿ ಮಿಂಚಿದ ಇಂಗ್ಲೆಂಡ್‌ನ ವಿಕೆಟ್ ಕೀಪರ್ ಜೇಮಿ ಸ್ಮಿತ್ (111 ಮತ್ತು 39 ರನ್, 4 ಕ್ಯಾಚ್, 1 ರನೌಟ್)ಪಂದ್ಯಶ್ರೇಷ್ಠರೆನಿಸಿದರು. ಸರಣಿಯ ದ್ವಿತೀಯ ಟೆಸ್ಟ್ ಗುರುವಾರ ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-236 ಮತ್ತು 326. ಇಂಗ್ಲೆಂಡ್-358 ಮತ್ತು 5 ವಿಕೆಟಿಗೆ 205 (ರೂಟ್ ಔಟಾಗದೆ 62, ಜೇಮಿ ಸ್ಮಿತ್ 39, ಡೇನಿಯಲ್ ಲಾರೆನ್ಸ್ 34, ಹ್ಯಾರಿ ಬ್ರೂಕ್ 32, ಅಸಿತ ಫೆರ್ನಾಂಡೊ 25ಕ್ಕೆ 2, ಪ್ರಭಾತ್ ಜಯಸೂರ್ಯ 98ಕ್ಕೆ 2). ಪಂದ್ಯಶ್ರೇಷ್ಠ: ಜೇಮಿ ಸ್ಮಿತ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.