Test: ನ್ಯೂಜಿಲ್ಯಾಂಡ್ ಎದುರು 63 ರನ್ನುಗಳಿಂದ ಗೆದ್ದ ಶ್ರೀಲಂಕಾ
Team Udayavani, Sep 23, 2024, 10:58 PM IST
ಗಾಲೆ: ಪ್ರವಾಸಿ ನ್ಯೂಜಿಲ್ಯಾಂಡ್ ಎದುರಿನ ಗಾಲೆ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ 63 ರನ್ನುಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಗೆಲುವಿಗೆ 275 ರನ್ ಗುರಿ ಪಡೆದ ಕಿವೀಸ್, ಅಂತಿಮ ದಿನದಾಟದಲ್ಲಿ 211ಕ್ಕೆ ಸರ್ವಪತನ ಕಂಡಿತು.
4ನೇ ದಿನದ ಅಂತ್ಯಕ್ಕೆ ನ್ಯೂಜಿಲ್ಯಾಂಡ್ 8 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತ್ತು. ರಚಿನ್ ರವೀಂದ್ರ 91 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡ ಕಾರಣ ಫಲಿತಾಂಶ ತೀವ್ರ ಕುತೂಹಲ ಮೂಡಿಸಿತ್ತು. ಆದರೆ ರಚಿನ್ ಸೋಮವಾರದ ಆಟದಲ್ಲಿ ತನ್ನ ಮೊತ್ತಕ್ಕೆ ಕೇವಲ ಒಂದು ರನ್ ಸೇರಿಸಿ ಔಟಾಗುವುದರೊಂದಿಗೆ ಕುತೂಹಲವೆಲ್ಲ ತಣಿಯಿತು (168 ಎಸೆತ, 92 ರನ್, 9 ಬೌಂಡರಿ, 1 ಸಿಕ್ಸರ್).
ಒಟ್ಟು 9 ವಿಕೆಟ್ ಉರುಳಿಸಿದ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ದ್ವಿತೀಯ ಟೆಸ್ಟ್ ಸೆ. 26ರಂದು ಇದೇ ಅಂಗಳದಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-305 ಮತ್ತು 309. ನ್ಯೂಜಿಲ್ಯಾಂಡ್-340 ಮತ್ತು 211 (ರಚಿನ್ 92, ವಿಲಿಯಮ್ಸನ್ 30, ಬ್ಲಿಂಡೆಲ್ 30, ಲ್ಯಾಥಂ 28, ಪ್ರಭಾತ್ ಜಯಸೂರ್ಯ 68ಕ್ಕೆ 5, ರಮೇಶ್ ಮೆಂಡಿಸ್ 83ಕ್ಕೆ 3).
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್: ಮೂರನೇ ಸ್ಥಾನಕ್ಕೇರಿದ ಲಂಕಾ
ದುಬಾೖ: ನಿರೀಕ್ಷೆಯಂತೆ ಶ್ರೀಲಂಕಾ- ನ್ಯೂಜಿಲ್ಯಾಂಡ್ ನಡುವಿನ ಗಾಲೆ ಟೆಸ್ಟ್ ಪಂದ್ಯದ ಫಲಿತಾಂಶದ ಬಳಿಕ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಬದಲಾವಣೆ ಸಂಭವಿಸಿದೆ. ಈ ಪಂದ್ಯವನ್ನು ಜಯಿಸಿದ ಶ್ರೀಲಂಕಾ 4ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಏರಿದೆ.
2023-25ರ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯ 8 ಟೆಸ್ಟ್‌ಗಳಲ್ಲಿ ಶ್ರೀಲಂಕಾ ಸಾಧಿಸಿದ 4ನೇ ಜಯ ಇದಾಗಿದೆ. ಅದೀಗ 48 ಅಂಕಗಳೊಂದಿಗೆ 50.00 ಗೆಲುವಿನ ಪ್ರತಿಶತ ದಾಖಲೆ (ಪಿಸಿಟಿ) ಹೊಂದಿದೆ. ಇನ್ನೊಂದೆಡೆ 3ನೇ ಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್ 4ಕ್ಕೆ ಕುಸಿದಿದೆ (42.86). ಅದು 7 ಟೆಸ್ಟ್ ಗಳಲ್ಲಿ 3ನೇ ಸೋಲನುಭವಿಸಿತು. ಭಾರತ ಅಗ್ರಸ್ಥಾನ ಉಳಿಸಿಕೊಂಡಿದ್ದು (71.67), ಆಸ್ಟ್ರೇಲಿಯ 2ನೇ (62.50) ಸ್ಥಾನಿಯಾಗಿದೆ.
ಶ್ರೀಲಂಕಾಕ್ಕೆ ಫೈನಲ್ ಪ್ರವೇಶ ಸಾಧ್ಯವೇ ಎಂಬುದು ಮುಂದಿನ ಕುತೂಹಲ. ಅದು ನ್ಯೂಜಿಲ್ಯಾಂಡ್ ವಿರುದ್ಧ 2-0, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯ ಎದುರಿನ ತವರಿನ ಸರಣಿಯ ಎಲ್ಲ ಪಂದ್ಯಗಳನ್ನು ಗೆದ್ದರೆ ಇದು ಸಾಧ್ಯವಾಗಲಿದೆ. ಆಗ 69.23 ಪ್ರತಿಶತ ಗೆಲುವಿನ ಸಾಧನೆಯೊಂದಿಗೆ ಶ್ರೀಲಂಕಾ ಫೈನಲ್ ತಲುಪಲಿದೆ ಎಂಬುದೊಂದು ಲೆಕ್ಕಾಚಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.