Test ಟೀಮ್ ರ್‍ಯಾಂಕಿಂಗ್: ಆಸ್ಟ್ರೇಲಿಯ ನಂ.1; ಎರಡಕ್ಕಿಳಿದ ಭಾರತ
Team Udayavani, Jan 6, 2024, 5:27 AM IST
![1-dffsfsdf](https://www.udayavani.com/wp-content/uploads/2024/01/1-dffsfsdf-620x324.jpg)
![1-dffsfsdf](https://www.udayavani.com/wp-content/uploads/2024/01/1-dffsfsdf-620x324.jpg)
ದುಬಾೖ: ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್‌ಟೌನ್ ಟೆಸ್ಟ್ ಪಂದ್ಯವನ್ನು ಎರಡೇ ದಿನಗಳಲ್ಲಿ ಗೆದ್ದು, ಸರಣಿಯನ್ನು ಸಮಬಲದಲ್ಲಿ ಮುಗಿಸಿದ ಹೊರತಾಗಿಯೂ ಭಾರತ ನೂತನ ಟೆಸ್ಟ್ ಟೀಮ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಕಳೆದುಕೊಂಡಿದೆ. ಆಸ್ಟ್ರೇಲಿಯ ನಂ.1 ತಂಡವಾಗಿ ಮೂಡಿಬಂದಿದೆ.
ಪಾಕಿಸ್ಥಾನ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವುದೇ ಆಸ್ಟ್ರೇಲಿಯದ ಪ್ರಗತಿಗೆ ಕಾರಣ. ಅದೀಗ 2-0 ಮುನ್ನಡೆಯಲ್ಲಿದೆ. 3ನೇ ಪಂದ್ಯವನ್ನೂ ಗೆಲ್ಲುವ ಹಾದಿಯಲ್ಲಿದೆ. ಆಗ ಆಸ್ಟ್ರೇಲಿಯದ ಅಗ್ರಸ್ಥಾನ ಇನ್ನಷ್ಟು ಗಟ್ಟಿಯಾಗಲಿದೆ. ಸದ್ಯ ಆಸ್ಟ್ರೇಲಿಯ ಮತ್ತು ಭಾರತ ನಡುವೆ ಇರುವುದು ಒಂದೇ ಅಂಕದ ವ್ಯತ್ಯಾಸ. ಉಳಿದಂತೆ ಯಾವ ತಂಡಗಳ ರ್‍ಯಾಂಕಿಂಗ್‌ನಲ್ಲೂ ಬದಲಾವಣೆ ಆಗಿಲ್ಲ.
ಹಿಂದಿನ ರ್‍ಯಾಂಕಿಂಗ್ ಪರಿಷ್ಕರಣೆಯ ವೇಳೆ ಭಾರತ ಮತ್ತು ಆಸ್ಟ್ರೇಲಿಯ ಸಮಾನ 118 ಅಂಕಗಳನ್ನು ಹೊಂದಿದ್ದವು. ದಶಮಾಂಶ ಲೆಕ್ಕಾಚಾರದಲ್ಲಿ ಭಾರತ ಮುಂದಿತ್ತು. ಸೆಂಚುರಿಯನ್‌ನಲ್ಲಿ ಅನುಭವಿಸಿದ ಸೋಲು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.
ಮುಂಬರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮತ್ತೆ ಅಗ್ರಸ್ಥಾನಕ್ಕೆ ಏರುವ ಅವಕಾಶ ಭಾರತಕ್ಕೆ ಎದುರಾಗಲಿದೆ.
ಟೆಸ್ಟ್ ಚಾಂಪಿಯನ್‌ಶಿಪ್
ಕೇಪ್‌ಟೌನ್ ಗೆಲುವಿನ ಬಳಿಕ ಭಾರತ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನಕ್ಕೆ ಬಂದಿದೆ. 4 ಟೆಸ್ಟ್‌ಗಳಲ್ಲಿ 2 ಗೆಲುವು ಸಾಧಿಸಿದ ಭಾರತ 54.16 ಸರಾಸರಿ ಅಂಕಗಳನ್ನು ಹೊಂದಿದೆ. ದಕ್ಷಿಣ ಆಫ್ರಿಕಾ 2ನೇ, ನ್ಯೂಜಿಲ್ಯಾಂಡ್ 3ನೇ ಮತ್ತು ಆಸ್ಟ್ರೇಲಿಯ 4ನೇ ಸ್ಥಾನದಲ್ಲಿವೆ.
ಆದರೆ ಭಾರತದ ಈ ಅಗ್ರಸ್ಥಾನ ಹೆಚ್ಚು ಕಾಲ ಉಳಿಯದು. ಕಾರಣ, ಪಾಕಿಸ್ಥಾನ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ಮೇಲುಗೈ ಸಾಧಿಸಿದೆ. ಅದು ಈ ಪಂದ್ಯವನ್ನು ಗೆದ್ದು ಸರಣಿಯನ್ನು 3-0 ಕ್ಲೀನ್‌ಸಿÌàಪ್ ಆಗಿ ವಶಪಡಿಸಿಕೊಳ್ಳುವುದು ಬಹುತೇಕ ಖಚಿತ. ಆಗ ಆಸ್ಟ್ರೇಲಿಯದ ಗೆಲುವಿನ ಸರಾಸರಿ 56.25ಕ್ಕೆ ಏರುತ್ತದೆ. ಭಾರತ ದ್ವಿತೀಯ ಸ್ಥಾನಕ್ಕೆ ಇಳಿಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-150x84.jpg)

Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
![Mujeeb joins Mumbai Indians team in place of another Afghan bowler](https://www.udayavani.com/wp-content/uploads/2025/02/mujeeb-150x82.jpg)
![Mujeeb joins Mumbai Indians team in place of another Afghan bowler](https://www.udayavani.com/wp-content/uploads/2025/02/mujeeb-150x82.jpg)
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
![ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್](https://www.udayavani.com/wp-content/uploads/2025/02/india-150x82.jpg)
![ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್](https://www.udayavani.com/wp-content/uploads/2025/02/india-150x82.jpg)
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
![Team India: ‘We are not actors..’: Ashwin criticizes Team India’s superstar culture](https://www.udayavani.com/wp-content/uploads/2025/02/ashwin-150x82.jpg)
![Team India: ‘We are not actors..’: Ashwin criticizes Team India’s superstar culture](https://www.udayavani.com/wp-content/uploads/2025/02/ashwin-150x82.jpg)
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
![Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ](https://www.udayavani.com/wp-content/uploads/2025/02/pak-1-150x85.jpg)
![Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ](https://www.udayavani.com/wp-content/uploads/2025/02/pak-1-150x85.jpg)
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ