ಸ್ತ್ರೀ ವೇಷಧರಿಸಿ ಮಹಿಳಾ ಕಬಡ್ಡಿ ನೋಡಿದ ಥಾಯ್ಲೆಂಡ್ ಕೋಚ್!
Team Udayavani, Dec 1, 2017, 8:00 AM IST
ಗೋರ್ಗಾನ್ (ಇರಾನ್): ಇತ್ತೀಚೆಗೆ ಇರಾನಿನ ಗೋರ್ಗಾನ್‌ನಲ್ಲಿ ಏಶ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಮುಗಿದು ಮಹಿಳಾ-ಪುರುಷ ಎರಡೂ ವಿಭಾಗದಲ್ಲಿ ಭಾರತೀಯರೇ ಗೆದ್ದದ್ದು ಈಗ ಇತಿಹಾಸ.
ಇದರ ನಡುವೆಯೇ ಯಾರಿಗೂ ಗೊತ್ತಿಲ್ಲದಂತೆ ಈ ಕೂಟದಲ್ಲೊಂದು ಸ್ವಾರಸ್ಯಕರ ಘಟನೆ ನಡೆದಿದೆ. ಥಾಯ್ಲೆಂಡ್ ತಂಡದ ಕೋಚ್ ಒಬ್ಬರು ಮಹಿಳಾ ತಂಡಗಳ ಕಬಡ್ಡಿ ನೋಡಲು ಹೆಂಗಸಿನಂತೆ ವೇಷ ಮರೆಸಿಕೊಂಡು ಸಭಿಕರ ಗ್ಯಾಲರಿ ಪ್ರವೇಶಿಸಿದ್ದಾರೆ. ಒಮ್ಮೆ ಇದು ಪತ್ತೆಯಾದರೂ ಮತ್ತೆ ಅದನ್ನೇ ಪುನರಾವರ್ತಿಸಿದ್ದಾರೆ!
ಹೀಗೆ ಮುಖ ಮುಚ್ಚಿಕೊಂಡು ಒಳಪ್ರವೇಶಿಸಲು ಕಾರಣವಾದರೂ ಏನು? ನೇರವಾಗಿ ಹೋಗಬಹುದಿತ್ತಲ್ಲ ಎಂದು ನೀವು ಪ್ರಶ್ನಿಸುವುದರಲ್ಲೂ ಅರ್ಥವಿದೆ. ಆತ ಹಾಗೆ ಮುಖಮುಚ್ಚಿಕೊಳ್ಳಲು ಕಾರಣ ಇರಾನಿನ ನಿಯಮಗಳು. ಮುಸ್ಲಿಂ ಧಾರ್ಮಿಕ ನಿಯಮಗಳನ್ನು ಕಟ್ಟರ್ ಆಗಿ ಪಾಲಿಸುವ ಆದೇಶದಲ್ಲಿ ಮಹಿಳೆಯರು ಆಟವಾಡುವಾಗ ಅದನ್ನು ಪುರುಷರ ನೋಡುವಂತಿಲ್ಲ. ಜತೆಗೆ ಮಾಧ್ಯಮದವರಿಗೂ ಪ್ರವೇಶವಿಲ್ಲ! ಇಂತಹ ಸ್ಥಿತಿಯಲ್ಲಿ ಕೋಚ್ ಒಬ್ಬರಿಗೆ ತನ್ನ ತಂಡದ ಪಂದ್ಯಗಳನ್ನು ನೋಡಲೇಬೇಕೆಂದು ಆಸೆ ಹುಟ್ಟಿದರೆ ಆತ ಹೀಗೆ ತಲೆಗೆ ಹಿಜಾಬ್ ಕಟ್ಟಿಕೊಂಡು ಮುಖ ಮುಚ್ಚಿಕೊಂಡು ಹೋಗಬೇಕಾಗುತ್ತದೆ.
ಆದರೆ ಇದರ ವಿರುದ್ಧ ಇರಾನ್ ಕಬಡ್ಡಿ ಒಕ್ಕೂಟ ಆಕ್ಷೇಪವೆತ್ತಿದೆ. ಅಲ್ಲದೇ ಥಾಯ್ ಕೋಚ್ ಇರಾನಿನ ನೆಲದ ನಿಯಮಗಳನ್ನು ಉಲ್ಲಂ ಸಿದ್ದಾರೆ ಎಂದು ಸಿಟ್ಟಾಗಿದೆ. ಇದರ ಮಧ್ಯೆಯೇ ಸ್ವತಃ ಇರಾನ್ ಒಕ್ಕೂಟವೇ ಥಾಯ್ ಕೋಚ್‌ಗೆ ಈ ಉಪಾಯ ಹೇಳಿಕೊಟ್ಟಿದ್ದು ಎಂಬ ಆರೋಪಗಳೂ ಕೇಳಿಬಂದಿವೆ. ಅದೇನೆ ಇರಲಿ ರಹಸ್ಯವಾಗಿ ಪಂದ್ಯ ನೋಡಿದ ಥಾಯ್ ಕೋಚ್ ಯಾವುದೇ ಸಮಸ್ಯೆಯಿಲ್ಲದೇ ಥಾಯ್ಲೆಂಡ್ ಸೇರಿಕೊಂಡಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20; ಸ್ಯಾಮ್ಸನ್ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ
Pro Kabaddi: ಜೈಪುರ್ ಮೇಲೆ ಪಾಟ್ನಾ ಸವಾರಿ
ODI; ಹ್ಯಾರಿಸ್ ರೌಫ್ ಗೆ ಹೆದರಿದ ಆಸೀಸ್ : 9 ವಿಕೆಟ್‌ಗಳಿಂದ ಗೆದ್ದ ಪಾಕಿಸ್ಥಾನ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.