ಸೈನಾ, ಶ್ರೀಕಾಂತ್‌ಗೆ ಸೋಲಿನ ಆಘಾತ
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್
Team Udayavani, Aug 2, 2019, 5:44 AM IST
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಗುರುವಾರ ಭಾರತದ ತಾರಾ ಆಟಗಾರರ ಪತನವಾಗಿದೆ. ವನಿತಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್, ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್ ತಮ್ಮ ಆಟ ಮುಗಿಸಿ ಕೂಟದಿಂದ ನಿರ್ಗಮಿಸಿದ್ದಾರೆ. ಆದರೆ ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಂಧು ಗೈರಲ್ಲಿ ಭಾರತದ ಪ್ರಮುಖ ಆಟಗಾರ್ತಿಯಾಗಿದ್ದ ಸೈನಾ ನೆಹ್ವಾಲ್ ಅವರನ್ನು ಜಪಾನಿನ ಸಯಾಕಾ ಟಕಹಾಶಿ 16-21, 21-11, 21-14 ಅಂತರದಿಂದ ಪರಾಭವಗೊಳಿಸಿದರು. ಟಕಹಾಶಿ ಈ ಕೂಟದಲ್ಲಿ ಯಾವುದೇ ಶ್ರೇಯಾಂಕ ಪಡೆದಿಲ್ಲ ಎಂಬುದು ಗಮನಾರ್ಹ.
ಗಾಯದ ಕಾರಣದಿಂದ ಸೈನಾ ನೆಹ್ವಾಲ್ ಕಳೆದ ಇಂಡೋನೇಶ್ಯ ಓಪನ್ ಮತ್ತು ಜಪಾನ್ ಓಪನ್ ಕೂಟದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು.
ವಿಶ್ವದ ನಂ. 10 ಆಟಗಾರ ಕೆ. ಶ್ರೀಕಾಂತ್ ಇಂಡೋನೇಶ್ಯದ ಖೊಸಿತ್ ಫೆತ್‌ಪ್ರದಾಬ್ ವಿರುದ್ಧ ದಿಟ್ಟ ಹೋರಾಟ ನೀಡಿ 3 ಗೇಮ್‌ಗಳಿಂದ ಎಡವಿದರು. ಮೊದಲ ಗೇಮ್‌ನಲ್ಲಿ 21-11 ಮೇಲುಗೈ ಸಾಧಿಸಿದರೂ ಅನಂತರದ ಗೇಮ್‌ಗಳಲ್ಲಿ 16-21, 12-21 ಅಂತರದಿಂದ ಹಿಂದುಳಿದರು.
ರಾಂಕಿರೆಡ್ಡಿ-ಚಿರಾಗ್ ಮುನ್ನಡೆ
ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಭರವಸೆ ಮೂಡಿಸಿದ್ದಾರೆ. ಇವರು ಇಂಡೋನೇಶ್ಯದ ಫಜರ್ ಅಲ್ಫಿಯಾನ್-ಮುಹಮ್ಮದ್ ರಿಯಾನ್ ಅರ್ದಿಯಾಂತೊ ಜೋಡಿಯನ್ನು 21-17, 21-19ರಿಂದ ಪರಾಭವಗೊಳಿಸಿದರು.
ಪ್ರಣಯ್ ಪರಾಭವ
ದಿನದ ಕೊನೆಯ ಪಂದ್ಯದಲ್ಲಿ ಎಚ್.ಎಸ್. ಪ್ರಣಯ್ ಕೂಡ ಸೋಲಿನ ಸುದ್ದಿ ನೀಡಿದರು. ಜಪಾನಿನ ಕೆಂಟ ನಿಶಿಮೊಟೊ ವಿರುದ್ಧ 17-21, 10-21 ಅಂತರದಿಂದ ಕಳೆದುಕೊಂಡು ಕೂಟದಿಂದ ನಿರ್ಗಮಿಸಿದರು.
ಶುಭಂಕರ್‌ಗೆ ಸೋಲುಣಿಸಿದ ಪ್ರಣೀತ್
ಭಾರತೀಯರ ಮೇಲಾಟದಲ್ಲಿ ಬಿ. ಸಾಯಿಪ್ರಣೀತ್ 21-18, 21-19 ಅಂತರದಿಂದ ಶುಭಂಕರ್ ಡೇ ವಿರುದ್ಧ ಗೆದ್ದು ಬಂದರು. ಸಾಯಿ ಪ್ರಣೀತ್ ಕ್ವಾ.ಫೈನಲ್ನಲ್ಲಿ ಜಪಾನಿನ 7ನೇ ಶ್ರೇಯಾಂಕಿತ ಆಟಗಾರ ಕಾಂಟ ತ್ಸುನೆಯಾಮ ವಿರುದ್ಧ ಸೆಣಸಲಿದ್ದಾರೆ. ಆದರೆ ಪಾರುಪಳ್ಳಿ ಕಶ್ಯಪ್ ಚೈನೀಸ್ ತೈಪೆಯ ಚೋ ಟೀನ್ ಚೆನ್ ವಿರುದ್ಧ 9-21, 14-21 ಅಂಕಗಳಿಂದ ಎಡವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.