ಇಂದಿನಿಂದ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್
Team Udayavani, Jul 30, 2019, 5:27 AM IST
ಬ್ಯಾಂಕಾಕ್: ಭಾರತದ ಪಿ.ವಿ. ಸಿಂಧು ಕಳೆದ ಎರಡು ಕೂಟಗಳಲ್ಲಿ ಜಪಾನಿನ ಅಕಾನೆ ಯಮಾಗುಚಿ ಅವರಿಗೆ ಶರಣಾಗಿ ನಿರಾಶೆ ಮೂಡಿಸಿರಬಹುದು. ಆದರೂ ಮಂಗಳವಾರದಿಂದ ಆರಂಭವಾಗುವ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಕೂಟದಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಿಂದಲೇ ಕಣಕ್ಕೆ ಇಳಿಯಲಿದ್ದಾರೆ.
ಕಳೆದ ಎರಡು ವಾರ ಸಿಂಧು ಪಾಲಿಗೆ ಯಮಾಗುಚಿ ಅಪಾಯ ಕಾರಿಯಾಗಿದ್ದರು. ಇಂಡೋನೇಶ್ಯ ಓಪನ್‌ನ ಫೈನಲ್‌ನಲ್ಲಿ ಅವರಿಗೆ ಶರಣಾಗಿದ್ದ ಸಿಂಧು, ಜಪಾನ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಮತ್ತೆ ಮುಖಾಮುಖೀಯಾದಾಗ ನೇರ ಗೇಮ್‌ಗಳಿಂದ ಸೋತಿದ್ದರು. ಇದೀಗ 7 ತಿಂಗಳ ಪ್ರಶಸ್ತಿ ಬರವನ್ನು ನೀಗಿಸಲು ಸಿಂಧು ಹಾತೊರೆಯುತ್ತಿದ್ದಾರೆ.
ಮೊದಲ ಸುತ್ತಿನಲ್ಲಿ ಚೀನ ಎದುರಾಳಿ
ನಾಲ್ಕನೇ ಶ್ರೇಯಾಂಕದ ಸಿಂಧು ಮೊದಲ ಸುತ್ತಿನಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಚೀನದ ಹಾನ್ ಯುಯಿ ಅವರನ್ನು ಎದುರಿಸಲಿದ್ದಾರೆ. ಜಪಾನ್ ಓಪನ್‌ನಲ್ಲಿ ಸಿಂಧು ಈ ಎದುರಾಳಿಯನ್ನು ಸುಲಭವಾಗಿ ಮಣಿಸಿದ್ದರು.
ಸಿಂಧು ಅವರಿಗೆ ನಿಜವಾದ ಪರೀಕ್ಷೆ ಎದುರಾಗುವುದು ಕ್ವಾರ್ಟರ್ ಫೈನಲ್‌ನಲ್ಲಿ. ಅಲ್ಲಿ ಅವರಿಗೆ ಆರನೇ ಶ್ರೇಯಾಂಕದ ಆತಿಥೇಯ ನಾಡಿನ ರಚನಾಕ್ ಇಂತನಾನ್ ಎದುರಾಗಲಿದ್ದಾರೆ.
ಸೈನಾ ಇನ್ನೋರ್ವ ಸ್ಪರ್ಧಿ
ಸೈನಾ ಮೊದಲ ಸುತ್ತಿನಲ್ಲಿ ಅರ್ಹತಾ ಆಟಗಾರ್ತಿಯೊಬ್ಬರನ್ನು ಎದುರಿಸಲಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು ಕಳೆದ ಎರಡು ಕೂಟಗಳಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಮುಂದಿನ ತಿಂಗಳು ನಡೆಯುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ನಡೆಸುವುದು ಅವರ ಅಲೋಚನೆಯಾಗಿದೆ.
ಪುರುಷರ ಸಿಂಗಲ್ಸ್
ಪುರುಷರ ಸಿಂಗಲ್ಸ್‌ನಲ್ಲಿ ಶುಭಂಕರ್ ಡೇ ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಜಪಾನಿನ ಕೆಂಟೊ ಮೊಮೊಟ ಅವರನ್ನು ಎದುರಿಸಲಿದ್ದಾರೆ. ಇದೇ ವೇಳೆ ಬಿ. ಸಾಯಿ ಪ್ರಣೀತ್ ಥಾಯ್ಲೆಂಡಿನ ಕಾಂತಪನ್ ವಾಂಗ್‌ಚರೋನ್ ಅವರನ್ನು ಎದುರಿಸಲಿದ್ದಾರೆ. ಶುಭಂಕರ್ ಮತ್ತು ಪ್ರಣೀತ್ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದರೆ ದ್ವಿತೀಯ ಸುತ್ತಿನಲ್ಲಿ ಪರಸ್ಪರ ಮುಖಾಮುಖೀಯಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.