ಥಾಯ್ಲೆಂಡ್ ಓಪನ್: ಭಾರತಕ್ಕೆ ನಿರಾಶೆ
Team Udayavani, Jan 15, 2021, 6:29 AM IST
ಬ್ಯಾಂಕಾಕ್ : “ಯೋನೆಕ್ಸ್ ಥಾಯ್ಲೆಂಡ್ ಓಪನ್ ಸೂಪರ್ 1000′ ಕೂಟದಲ್ಲಿ ಗುರುವಾರ ಭಾರತಕ್ಕೆ ನಿರಾಶೆಯೇ ಕಾದಿತ್ತು. ಸೈನಾ ನೆಹ್ವಾಲ್, ಚಿರಾಗ್-ಸಾತ್ವಿಕ್ ಜೋಡಿ ಸೋಲನುಭವಿಸಿದರೆ ಕೆ. ಶ್ರೀಕಾಂತ್ ಗಾಯಾಳಾಗಿ ಕೂಟದಿಂದ ನಿರ್ಗಮಿಸಿದರು.
ದ್ವಿತೀಯ ಸುತ್ತಿನಲ್ಲಿ ಸೈನಾ ನೆಹ್ವಾಲ್ ಥಾಯ್ಲೆಂಡ್‌ನ ಬುಸಾನನ್ ಒಂಗ್ಬಾಮುಂಗ್ಝನ್ ವಿರುದ್ಧ 23-21, 14-21, 16-21 ಅಂತರದಿಂದ ಪರಾಭವಗೊಂಡರು. ಇದು ಸೈನಾಗೆ ಬುಸಾನನ್ ವಿರುದ್ಧ ಎದುರಾದ ಸತತ ನಾಲ್ಕನೇ ಸೋಲು. ಮೊದಲ ಗೇಮ್‌ನಲ್ಲಿ ಗೆಲುವು ಸಾಧಿಸಿದ ಸೈನಾ ಮುಂದಿನ ಎರಡು ಗೇಮ್‌ಗಳಲ್ಲಿ ಎದುರಾಳಿಯ ಆಕ್ರಮಣಕಾರಿ ಆಟದ ಮುಂದೆ ಸಂಪೂರ್ಣ ವಿಫಲರಾಗಿ ಸೋಲೊಪ್ಪಿಕೊಂಡರು. ದಿನದ ಮತ್ತೂಂದು ಪಂದ್ಯಕ್ಕೂ ಮುನ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕೆ. ಶ್ರೀಕಾಂತ್ ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ಕೂಟದಿಂದ ಹೊರನಡೆದರು.ಇದರಿಂದ ಎದುರಾಳಿ ಮಲೇಶ್ಯಾದ ಲೀ ಜೀ- ಝೀಯಾ ಅವರಿಗೆ ವಾಕ್ ಓವರ್ ನೀಡಲಾಯಿತು.
ಚಿರಾಗ್ ಜೋಡಿಗೆ ಸೋಲು :
ಭಾರತದ ಪುರುಷರ ಡಬಲ್ಸ್‌ನ ತಾರಾ ಜೋಡಿಯಾದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ನಿರಾಸೆ ಅನುಭವಿಸಿದ್ದಾರೆ. ಇಂಡೋನೇಷ್ಯಾದ ಮೊಹಮ್ಮದ್ ಅಹ್ಸಾನ್ ಹಾಗೂ ಹೆಂಡ್ರಾ ಸೇಟಿಯಾವನ್ ವಿರುದ್ಧದ ಪಂದ್ಯದಲ್ಲಿ ಭಾರತೀಯ ಜೋಡಿ 21-19, 21-17 ಅಂತರದ ನೇರ ಗೇಮ್‌ಗಳಿಂದ ಸೋಲನುಭವಿಸಿತು. ಈ ಪಂದ್ಯ ಕೇವಲ 33 ನಿಮಿಷಗಳಲ್ಲಿ ಮುಕ್ತಾಯ ಕಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?