ಥಾಯ್ಲೆಂಡ್ ಬ್ಯಾಡ್ಮಿಂಟನ್: ಸಾತ್ವಿಕ್-ಚಿರಾಗ್‌ಗೆ ಸೋಲು
Team Udayavani, Jan 23, 2021, 11:43 PM IST
ಬ್ಯಾಂಕಾಕ್: ಟೋಕ್ಯೊ ಒಲಿಂಪಿಕ್ಸ್ ಪದಕದ ಭರವಸೆಯಾಗಿರುವ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿಯ ಥಾಯ್ಲೆಂಡ್ ಓಪನ್ ಸೂಪರ್-1000 ಬ್ಯಾಡ್ಮಿಂಟನ್’ ಪಂದ್ಯಾವಳಿಯ ಓಟ ಸೆಮಿಫೈನಲ್‌ನಲ್ಲಿ ಅಂತ್ಯಗೊಂಡಿದೆ. ಶನಿವಾರ ನಡೆದ ಪಂದ್ಯದಲ್ಲಿ, 10ನೇ ಶ್ರೇಯಾಂಕಿತ ಭಾರತೀಯ ಜೋಡಿ ಮಲೇಷ್ಯಾದ ಆರನ್ ಚಿಯ-ಸೋಹ್ ವೂಯಿ ಯಿಕ್ ವಿರುದ್ಧ ಅಮೋಘ ಹೋರಾಟ ಪ್ರದರ್ಶಿಸಿತು. ಆದರೂ 18-21, 18-21ರ ನೇರ ಗೇಮ್‌ಗಳಿಂದ ಪರಾಭವಗೊಂಡಿತು.
ಮೊದಲ ಗೇಮ್‌ನಲ್ಲಿ 4-2ರಿಂದ ಮುಂದಿದ್ದ ಸಾತ್ವಿಕ್-ಚಿರಾಗ್, ಬ್ರೇಕ್ ವೇಳೆ ಬಹುತೇಕ ಸಮಬಲ ಸ್ಥಿತಿಗೆ ಬಂದಿದ್ದರು (10-11). ಬಳಿಕ 15-16ರ ತನಕವೂ ಸ್ಪರ್ಧೆ ಇದೇ ಲಯದಲ್ಲಿ ಸಾಗಿತು. ಈ ಹಂತದಲ್ಲಿ ಮಲೇಷ್ಯಾ ಜೋಡಿ ಸತತ 4 ಅಂಕ ಗಳಿಸಿ ಮೇಲುಗೈ ಸಾಧಿಸಿತು. ದ್ವಿತೀಯ ಗೇಮ್‌ನಲ್ಲೂ ಭಾರತೀಯ ಜೋಡಿ 3-1ರ ಆರಂಭಿಕ ಮೇಲುಗೈ ಪಡೆದಿತ್ತು. ಆಗ ಮಲೇಷ್ಯಾ ಶಟ್ಲರ್ ಸತತ 4 ಅಂಕ ಬುಟ್ಟಿಗೆ ಹಾಕಿಕೊಂಡರು. ಪಟ್ಟು ಸಡಿಲಿಸದ ಸಾತ್ವಿಕ್-ಚಿರಾಗ್ 8-8 ಸಮಬಲಕ್ಕೆ ಬಂದರು. ವಿರಾಮದ ವೇಳೆ ಎದುರಾಳಿ ಜೋಡಿ 3 ಅಂಕಗಳ ಮುನ್ನಡೆ ಹೊಂದಿತು. ಬಳಿಕ ಇದೇ ಲಯದಲ್ಲಿ ಸಾಗಿ ಪಂದ್ಯವನ್ನು ವಶಪಡಿಸಿಕೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia ಗೆಲುವಿಗೆ ಕಮಿನ್ಸ್ ನೆರವು: ಪಾಕಿಸ್ಥಾನ 203; ಆಸೀಸ್ 8 ವಿಕೆಟಿಗೆ 204
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Football ಮೈದಾನಕ್ಕೆ ಬಡಿದ ಸಿಡಿಲು; ಆಟಗಾರ ಮೃ*ತ್ಯು, ಹಲವರಿಗೆ ಗಾಯ
BGT Series: ಇಂಡಿಯಾ ಎ ಪಂದ್ಯಕ್ಕಾಗಿ ಆಸೀಸ್ ಗೆ ಹೊರಟ ಕೆಎಲ್ ರಾಹುಲ್, ಜುರೆಲ್
Team India: ಗಂಭೀರ್ ಅಧಿಕಾರಕ್ಕೆ ಕುತ್ತು ತಂದ ಸರಣಿ ಸೋಲು; ಬಿಸಿಸಿಐ ಮಹತ್ವದ ನಿರ್ಧಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.