ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಮೆಂಟ್; ಭಗತ್-ಕದಮ್ ಚಿನ್ನದ ಹೆಜ್ಜೆ
Team Udayavani, Aug 20, 2022, 10:47 PM IST
ಪಟ್ಟಾಯ (ಥಾಯ್ಲೆಂಡ್): ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ಭಾರತದ ಪ್ರಮೋದ್ ಭಗತ್-ಸುಕಾಂತ್ ಕದಮ್ ಜೋಡಿ ಬಂಗಾರದ ಪದಕ ಜಯಿಸಿದ್ದಾರೆ.
ಎಸ್‌ಎಲ್3-ಎಸ್‌ಎಲ್4 ಡಬಲ್ಸ್ ಫೈನಲ್‌ನಲ್ಲಿ ಇವರು ಇಂಡೋನೇಷ್ಯಾದ ದ್ವಿಯೊಕೊ ದ್ವಿಯೊಕೊ-ಫ್ರೆದಿ ಸೆತಿಯವಾನ್ ವಿರುದ್ಧ 21-18, 21-13 ಅಂತರದ ಗೆಲುವು ಸಾಧಿಸಿದರು.
ಸಿಂಗಲ್ಸ್ ವಿಭಾಗದಲ್ಲಿ ಇವರಿಬ್ಬರೂ ಫೈನಲ್ ಪ್ರವೇಶಿಸಿದರೂ ಬೆಳ್ಳಿ ಪದಕಕ್ಕೆ ಸಮಾಧಾನಪಡಬೇಕಾಯಿತು. ಪ್ರಮೋದ್ ಭಗತ್ ಅವರನ್ನು ಇಂಗ್ಲೆಂಡ್‌ನ ಡೇನಿಯಲ್ 21-13, 21-19 ಅಂತರದಿಂದ; ಸುಕಾಂತ್ ಕದಮ್ ಅವರನ್ನು ಫ್ರಾನ್ಸ್‌ನ ಲುಕಾಸ್ ಮಾಜುರ್ 21-2, 21-17 ಅಂತರದಿಂದ ಸೋಲಿಸಿದರು.
ವನಿತೆಯರ ಡಬಲ್ಸ್ ಫೈನಲ್‌ನಲ್ಲಿ ಭಾರತದ ಋತಿಕಾ ರಘುಪತಿ-ಮಾನಸಿ ಜೋಶಿ ಜೋಡಿಗೆ ಸೋಲು ಎದುರಾಯಿತು.
ಸಿಂಗಲ್ಸ್‌ನಲ್ಲಿ ಸ್ವರ್ಣ
ವನಿತಾ ಸಿಂಗಲ್ಸ್‌ನ ಎಸ್‌ಎಲ್3 ವಿಭಾಗದ “ಆಲ್ ಇಂಡಿಯನ್ ಫೈನಲ್’ನಲ್ಲಿ ಮನ್‌ದೀಪ್ ಕೌರ್ 20-22, 21-19, 21-14ರಿಂದ ಮಾನಸಿ ಜೋಶಿ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದರು. ಎಸ್‌ಯು5 ಫೈನಲ್‌ನಲ್ಲಿ ಮನಿಷಾ ರಾಮದಾಸ್ ಕೂಡ ಸ್ವರ್ಣಕ್ಕೆ ಕೊರಳೊಡ್ಡಿದರು. ಅವರು ಜಪಾನ್‌ನ ಕೆ. ಕಮೆಯಾಮಾ ವಿರುದ್ಧ 20-22, 21-12, 21-19 ಅಂತರದ ಗೆಲುವು ಒಲಿಸಿಕೊಂಡರು. ಎಸ್‌ಎಲ್3-ಎಸ್‌ಯು5 ವಿಭಾಗದ ವನಿತಾ ಡಬಲ್ಸ್ ನಲ್ಲಿ ಮಾನಸಿ ಜೋಶಿ-ಶಾಂತಿಯಾ ವಿಶ್ವನಾಥನ್ ಬೆಳ್ಳಿ ಗೆದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.