![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Nov 24, 2019, 11:28 PM IST
ಕೋಲ್ಕತಾ: ಭಾರೀ ಸಂಚಲನ ಮೂಡಿಸಿದ ಕೋಲ್ಕತಾದ ಭಾರತ-ಬಾಂಗ್ಲಾದೇಶ ನಡುವಿನ “ಡೇ-ನೈಟ್ ಟೆಸ್ಟ್’ ಕೇವಲ 2 ದಿನ, 47 ನಿಮಿಷಗಳಲ್ಲಿ ಮುಗಿದು ಹೋಗಿದೆ. ಕೊಹ್ಲಿ ಪಡೆ ಇನ್ನಿಂಗ್ಸ್ ಹಾಗೂ 46 ರನ್‌ಗಳಿಂದ ಜಯಭೇರಿ ಮೊಳಗಿಸಿದೆ. ಇದರೊಂದಿಗೆ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸಿÌàಪ್ ಆಗಿ ವಶಪಡಿಸಿಕೊಂಡ ಟೀಮ್ ಇಂಡಿಯಾ, ತವರಿನ ತನ್ನ ಸತತ ಸರಣಿ ಗೆಲುವಿನ ಅಭಿಯಾನವನ್ನು 12ಕ್ಕೆ ವಿಸ್ತರಿಸಿ ನೂತನ ದಾಖಲೆ ಸ್ಥಾಪಿಸಿತು.
241 ರನ್ನುಗಳ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದ ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ, ದ್ವಿತೀಯ ದಿನದಾಟದ ಅಂತ್ಯಕ್ಕೆ 6 ವಿಕೆಟಿಗೆ 152 ರನ್ ಮಾಡಿ ಸೋಲಿನತ್ತ ಮುಖ ಮಾಡಿತ್ತು. ರವಿವಾರದ 3ನೇ ದಿನದಾಟದಲ್ಲಿ ಉಳಿದ ವಿಕೆಟ್‌ಗಳನ್ನು ಭಾರತ ಕೇವಲ 47 ನಿಮಿಷಗಳಲ್ಲಿ ಉರುಳಿಸಿತು. ಬಾಂಗ್ಲಾ 195ಕ್ಕೆ ಆಲೌಟ್ ಆಯಿತು.
ಭಾರತ ಇಂದೋರ್‌ನ ಮೊದಲ ಟೆಸ್ಟ್ ಪಂದ್ಯವನ್ನೂ ಮೂರೇ ದಿನಗಳಲ್ಲಿ ಇನ್ನಿಂಗ್ಸ್ ಅಂತರದಿಂದಲೇ ಜಯಿಸಿತ್ತು (ಇನ್ನಿಂಗ್ಸ್ ಹಾಗೂ 130 ರನ್). ಇದರೊಂದಿಗೆ ತನ್ನ ಸತತ ಇನ್ನಿಂಗ್ಸ್ ಗೆಲುವನ್ನು 4ಕ್ಕೆ ವಿಸ್ತರಿಸಿದ ಭಾರತ, ಟೆಸ್ಟ್ ಇತಿಹಾಸದಲ್ಲಿ ನೂತನ ದಾಖಲೆ ಬರೆಯಿತು.
ಉಮೇಶ್ ಯಾದವ್ ಪ್ರಹಾರ
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉಮೇಶ್ ಯಾದವ್ ಪ್ರವಾಸಿಗರಿಗೆ ಘಾತಕ ಪ್ರಹಾರವಿಕ್ಕಿದರು. 3ನೇ ದಿನದಾಟ ದಲ್ಲಿ ಉಳಿದ ಮೂರೂ ವಿಕೆಟ್‌ಗಳನ್ನು ಉಡಾಯಿಸಿದರು. ಯಾದವ್ ಸಾಧನೆ 53ಕ್ಕೆ 5. ಅಲ್ ಅಮಿನ್ ಹೊಸೈನ್ ಅವರನ್ನು ಕಾಟ್ ಬಿಹೈಂಡ್ ರೂಪದಲ್ಲಿ ಔಟ್ ಮಾಡುವ ಮೂಲಕ ಯಾದವ್ ಭಾರತದ ಗೆಲುವನ್ನು ಸಾರಿದರು.
ಈ ಪಂದ್ಯದಲ್ಲಿ ಯಾದವ್ ಸಾಧನೆ 81ಕ್ಕೆ 8 ವಿಕೆಟ್. ಊರಿನಂಗಳದಲ್ಲಿ ಆಡುತ್ತಿದ್ದ ಶಮಿಗೆ ದ್ವಿತೀಯ ಇನ್ನಿಂಗ್ಸ್ ನಲ್ಲಿ ವಿಕೆಟ್ ಲಭಿಸಲಿಲ್ಲ. ಆದರೆ ಈ ತ್ರಿವಳಿ ವೇಗಿಗಳು ಸೇರಿ ಒಟ್ಟು 19 ವಿಕೆಟ್ ಉಡಾಯಿಸಿ ತವರಿನ ದಾಖಲೆ ಬರೆದರು. ಗಾಯಾಳು ಮಹಮದುಲ್ಲ ಬ್ಯಾಟಿಂಗಿಗೆ ಇಳಿಯದಿದ್ದುದರಿಂದ ಈ ಒಂದು ವಿಕೆಟ್ ಭಾರತದ ಪಾಲಾಗುವುದು ತಪ್ಪಿತು. ಈ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳು “ವಿಕೆಟ್ ಲೆಸ್’ ಎನಿಸಿದರು. ಇದೊಂದು ಅಪರೂಪದ ನಿದರ್ಶನವಾಗಿ ದಾಖಲಾಯಿತು.
ಇಶಾಂತ್ ಶರ್ಮ ಸಾಧನೆ 56ಕ್ಕೆ 4 ವಿಕೆಟ್. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಹಾರಿಸಿದ ಇಶಾಂತ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು (ಒಟ್ಟು 78ಕ್ಕೆ 9 ವಿಕೆಟ್). ಹಾಗೆಯೇ 2 ಪಂದ್ಯಗಳಿಂದ ಒಟ್ಟು 12 ವಿಕೆಟ್ ಉರುಳಿಸಿದ ಸಾಹಸಕ್ಕಾಗಿ ಸರಣಿಶ್ರೇಷ್ಠರಾಗಿಯೂ ಮೂಡಿಬಂದರು.
ರಹೀಂ 2 ಅರ್ಧ ಶತಕ
ಬಾಂಗ್ಲಾದ ಆಪತಾºಂಧವನೆಂದೇ ಗುರುತಿಸಲ್ಪಡುವ ಮುಶ್ಫಿಕರ್ ರಹೀಂ ಪ್ರಯತ್ನದಿಂದಾಗಿ ಈ ಪಂದ್ಯ 3ನೇ ದಿನಕ್ಕೆ ಕಾಲಿಟ್ಟಿತ್ತು. ಅವರು 59 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಇಶಾಂತ್ ಮತ್ತು ಜಡೇಜಾಗೆ ಬೌಂಡರಿ ರುಚಿ ತೋರಿಸುವ ಮೂಲಕ ರಹೀಂ ರವಿವಾರದ ಆಟವನ್ನು ಅಬ್ಬರದಿಂದಲೇ ಆರಂಭಿಸಿದ್ದರು. ಆದರೆ ಯಾದವ್ ಮುಂದೆ ಅವರ ಆಟ ನಡೆಯಲಿಲ್ಲ.
3ನೇ ದಿನ ಕ್ರೀಸಿಗೆ ಆಗಮಿಸಿದ ಇಬಾದತ್ ಹೊಸೈನ್ ಅವರನ್ನು ಖಾತೆ ತೆರೆಯುವ ಮೊದಲೇ ಪೆವಿಲಿಯನ್ನಿಗೆ ಅಟ್ಟಿದ ಉಮೇಶ್ ಯಾದವ್, ಸ್ಕೋರ್ 184ಕ್ಕೆ ಏರಿದಾಗ ರಹೀಂ ಆಟಕ್ಕೆ ತೆರೆ ಎಳೆದರು. ರಹೀಂ ಗಳಿಕೆ 74 ರನ್. 90 ಎಸೆತ ಎದುರಿಸಿದ ಅವರು 13 ಬೌಂಡರಿ ಸಿಡಿಸಿದರು. ಈ ಸರಣಿಯಲ್ಲಿ ಬಾಂಗ್ಲಾ ಕೇವಲ 2 ಅರ್ಧ ಶತಕ ದಾಖಲಿಸಿದ್ದು, ಎರಡನ್ನೂ ಮುಶ್ಫಿಕರ್ ಅವರೇ ಬಾರಿಸಿದ್ದು ವಿಶೇಷ. ಇಂದೋರ್ ಪಂದ್ಯದ ದ್ವಿತೀಯ ಸರದಿಯಲ್ಲಿ ಅವರು 64 ರನ್ ಹೊಡೆದಿದ್ದರು.
ಈ ವೈಟ್‌ವಾಶ್‌ನೊಂದಿಗೆ ಬಾಂಗ್ಲಾದೇಶ ತಂಡದ ಕಿರು ಪ್ರವಾಸ ಮುಗಿಸಿದೆ. ಮೊದಲ ಟಿ20 ಪಂದ್ಯದಲ್ಲಷ್ಟೇ ಭಾರತವನ್ನು ಮಣಿಸಿದ ಬಾಂಗ್ಲಾ, ಆ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತ್ತು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.