ಡ್ರಮ್ ಕೊಂಡೊಯ್ಯಲು ಭಾರತ್ ಆರ್ಮಿಗೆ ಅವಕಾಶ
Team Udayavani, Jul 24, 2017, 9:44 AM IST
ಲಂಡನ್: ಲಾರ್ಡ್ಸ್ ಅಂದರೆ ಅದೊಂದು ಸಂಪ್ರದಾಯಗಳ ಸಂತೆ. ಶಿಸ್ತಿಗೆ ಇಲ್ಲಿ ಪ್ರಮುಖ ಆದ್ಯತೆ. ಮುಖ್ಯವಾಗಿ ವೀಕ್ಷಕರಿಗೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಲಾಗಿದೆ ಮತ್ತು ಇದನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ.
ಇಲ್ಲಿ ಕ್ರಿಕೆಟ್ ಪಂದ್ಯಗಳ ವೇಳೆ ಡ್ರಮ್ಸ್, ಧೋಲ್ ಮುಂತಾದ ಆಟದ ಸ್ವಾದಕ್ಕೆ ಅಡ್ಡಿಯಾಗುವ ಯಾವುದೇ ವಾದ್ಯಗಳನ್ನು ತರುವಂತಿಲ್ಲ. ಇವಕ್ಕೆಲ್ಲ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಆದರೆ ಭಾರತ-ಇಂಗ್ಲೆಂಡ್ ವನಿತಾ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದ ವೇಳೆ ಇದಕ್ಕೆ ಸ್ವಲ್ಪ ಮಟ್ಟಿನ ರಿಯಾಯಿತಿ ನೀಡಲಾಯಿತು. ಇದರಿಂದ ಹೆಚ್ಚಿನ ಸಂತಸವಾದದ್ದು ಭಾರತೀಯ ಕ್ರಿಕೆಟ್ ಅಭಿಮಾನಿ ಬಳಗವಾದ “ಭಾರತ್ ಆರ್ಮಿ’ಗೆ.
ಭಾತ್ ಆರ್ಮಿ ದೊಡ್ಡ ವಾದ್ಯವೃಂದ ವನ್ನೇ ಹೊಂದಿರುವ ಕ್ರಿಕೆಟ್ ಅಭಿಮಾನಿ ಬಳಗ. ವಿಶ್ವದ ಯಾವ ಮೂಲೆಯೇ ಇರಲಿ, ಭಾರತದ ಪಂದ್ಯ ಇರುವಾಗಲೆಲ್ಲ ಇದು ತಪ್ಪದೇ ಹಾಜರಿರುತ್ತದೆ. ಹಾಗೆಯೇ ವನಿತೆಯರಿಗೆ ಬೆಂಬಲ ನೀಡಲು ಲಾರ್ಡ್ಸ್‌ಗೂ ಆಗಮಿಸಿದೆ. ಆದರೆ ಇದಕ್ಕೆ ಇಲ್ಲಿನ ಸಂಪ್ರದಾಯ ಅಡ್ಡಿಯಾಯಿತು.
ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿ ಬಳಗ ವಾದ “ಬಾರ್ಮಿ ಆರ್ಮಿ’ಗೆ ಹಿಂದೆ ವಾದ್ಯೋಪಕರಣಗಳನ್ನು ಲಾರ್ಡ್ಸ್ ಕ್ರೀಡಾಂಗಣಕ್ಕೆ ಕೊಂಡೊಯ್ಯಲು ನಿಷೇಧ ವಿಧಿಸಲಾಗಿತ್ತು. ಇದು “ಭಾರತ್ ಆರ್ಮಿ’ಗೂ ಅನ್ವಯಿಸಬೇಕಿತ್ತು. ಆದರೆ ಎಂಸಿಸಿ ಅಧಿಕಾರಿಗಳು ಐಸಿಸಿ ವರಿಷ್ಠರೊಂದಿಗೆ ಚರ್ಚಿಸಿ, ಫೈನಲ್ ಪಂದ್ಯವಾದ್ದರಿಂದ ಈ ನಿಯಮವನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಲು ನಿರ್ಧರಿಸಿದರು. ಅದರಂತೆ ಭಾರತ್ ಆರ್ಮಿಗೆ ಕೇವಲ ಒಂದು ಧೋಲನ್ನಷ್ಟೇ ಸ್ಟೇಡಿಯಂಗೆ ಕೊಂಡೊಯ್ಯಲು ಅನುಮತಿ ನೀಡಲಾಯಿತು. ಆದರೆ ಹಾರ್ನ್ಸ್, ವುವುಝೆಲ ಮೊದಲಾದ ವಾದ್ಯಗಳಿಗೆ ಅವಕಾಶ ನೀಡಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.