ಭಾರತ-ಪಾಕ್ ಸಂಬಂಧ ಸುಧಾರಿಸಿದರಷ್ಟೇ ದ್ವಿಪಕ್ಷೀಯ ಸರಣಿ
Team Udayavani, Feb 12, 2019, 12:30 AM IST
ಹೊಸದಿಲ್ಲಿ: ಭಾರತ-ಪಾಕಿಸ್ಥಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಪುನರಾರಂಭವಾಗಬೇಕಾದರೆ ಮೊದಲು ರಾಜಕೀಯ ಸಂಬಂಧಗಳು ಸುಧಾರಿಸಬೇಕು. ಹಾಗಿದ್ದರೆ ಮಾತ್ರ ಕ್ರಿಕೆಟ್ ಸರಣಿ ನಡೆಸಲು ಸಾಧ್ಯವಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಈ ಮೂಲಕ ಪಿಸಿಬಿ ವ್ಯವಸ್ಥಾಪಕ ನಿರ್ದೇಶಕ ವಾಸಿಮ್ ಖಾನ್ ಅವರಿಗೆ ಪ್ರತ್ಯುತ್ತರ ನೀಡಿದೆ. ಮಾತ್ರವಲ್ಲ, ವಾಸಿಂ ತನ್ನ ಅಸ್ತಿತ್ವವನ್ನು ಪಿಸಿಬಿಯಲ್ಲಿ ಮೊದಲು ಕಾಪಾಡಿಕೊಳ್ಳಲಿ ಎಂದು ತಿರುಗೇಟು ನೀಡಿದೆ.
“ಬಿಸಿಸಿಐ ಕ್ರಿಕೆಟ್ ಸರಣಿ ನಡೆಸಲು ರಾಜಕೀಯ ಕಾರಣವನ್ನು ಮುಂದೊಡ್ಡುತ್ತಿದೆ. ನಾವು ಸರಣಿ ಆಯೋಜನೆಗಾಗಿ ಹಲವು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದೇವೆ. ಬಿಸಿಸಿಐ ಒಂದು ಹೆಜ್ಜೆ ಮುಂದೆ ಬಂದು ಯೋಚಿಸಬೇಕು. ನಮಗೆ ಭಾರತದೊಂದಿಗೆ ಸರಣಿ ಆಡುವುದನ್ನೇ ಕಾಯುತ್ತ ಕೂರುವುದು ಕೆಲಸವಲ್ಲ, ನಮ್ಮ ಮುಂದೆ ಹಲವು ಸರಣಿಗಳಿವೆ’ ಎಂದು ವಾಸಿಮ್ ಖಾನ್ ಇತ್ತೀಚೆಗೆ ಹೇಳಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.