ಕರ್ನಾಟಕದ ಸಾಧನೆಯಲ್ಲಿ ಆಳ್ವಾಸ್ ಸಿಂಹಪಾಲು
Team Udayavani, Feb 23, 2017, 10:10 AM IST
ಮೂಡಬಿದಿರೆ: ಆಳ್ವಾಸ್ ಎಜು ಕೇಶನ್ ಫೌಂಡೇಶನ್ ಮತ್ತು ಕರ್ನಾಟಕ ಬಾಲ್‌ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ಬುಧವಾರ ಮುಕ್ತಾಯಗೊಂಡ “ಎಂ.ಕೆ. ಅನಂತ್ರಾಜ್ ಸಂಸ್ಮರಣ 62ನೇ ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಳೆದ ವರ್ಷ ದಂತೆ ಮಹಿಳೆಯರಲ್ಲಿ ಕರ್ನಾಟಕ ತಂಡ, ಪುರುಷರಲ್ಲಿ ಇಂಡಿಯನ್ ರೈಲ್ವೇಸ್ ತಂಡ ಅಗ್ರಸ್ಥಾನ ಗಳಿಸಿವೆ.
ಪುರುಷರ ಫೈನಲ್ಸ್‌ನಲ್ಲಿ ತಮಿಳುನಾಡು ದ್ವಿತೀಯ, ಕರ್ನಾಟಕ ತೃತೀಯ ಮತ್ತು ತೆಲಂಗಾಣ ಚತುರ್ಥ ಪ್ರಶಸ್ತಿ ಗಳಿಸಿವೆ.
ಮಹಿಳೆಯರಲ್ಲಿ ತಮಿಳುನಾಡು ದ್ವಿತೀಯ, ಛತ್ತೀಸ್‌ಗಢ ತೃತೀಯ ಮತ್ತು ಆಂಧ್ರಪ್ರದೇಶ ಚತುರ್ಥ ಪ್ರಶಸ್ತಿ ಪಡೆದಿವೆ. ಕರ್ನಾಟಕ ತಂಡ ಅಗ್ರಸ್ಥಾನಿಯಾಗಿ ಹ್ಯಾಟ್ರಿಕ್ ಸಾಧನೆ ತೋರಿದೆ.
ಮಹಿಳೆಯರ ಫೈನಲ್‌ನಲ್ಲಿ ಕರ್ನಾಟಕ ತಂಡವು ತಮಿಳುನಾಡು ತಂಡವನ್ನು 35-17, 35-17 ನೇರ ಸೆಟ್‌ಗಳಿಂದ ಸೋಲಿಸಿತು. ಪುರುಷರ ವಿಭಾಗದಲ್ಲಿ ಇಂಡಿಯನ್ ರೈಲ್ವೇಸ್ ತಂಡವು ತಮಿಳುನಾಡು ತಂಡವನ್ನು 29-31, 35-29, 35-27 ಅಂಕಗಳೊಂದಿಗೆ ಮಣಿಸಿತು.
ಆಳ್ವಾಸ್ ಸಾಧನೆ: ಮಹಿಳೆಯರಲ್ಲಿ ಅಗ್ರ ಸ್ಥಾನಿಯಾಗಿ ಮೂಡಿಬಂದ ಕರ್ನಾಟಕ ತಂಡ ದಲ್ಲಿ 8 ಮಂದಿ, ಪುರುಷರಲ್ಲಿ ತೃತೀಯ ಬಹು ಮಾನ ಗಳಿಸಿದ ಕರ್ನಾಟಕ ತಂಡದಲ್ಲಿ 6 ಮಂದಿ ಆಳ್ವಾಸ್‌ನವರು ಎಂಬುದು ಗಮನಾರ್ಹ ಅಂಶವಾಗಿದೆ. ಕರ್ನಾಟಕದ ಮೂವರಿಗೆ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಈ ಕ್ರೀಡಾಕೂಟದಲ್ಲಿ ಲಭಿಸಿದ್ದು, ವಿಜೇತ ಕ್ರೀಡಾಪಟುಗಳೆಲ್ಲ ಆಳ್ವಾಸ್‌ನವರು ಎನ್ನುವುದು ಮತ್ತೂಂದು ಹೆಗ್ಗಳಿಕೆ. ಕರ್ನಾಟಕ ಮಹಿಳಾ ತಂಡದ ನಾಯಕಿ ಆಳ್ವಾನ ಕಾವ್ಯಾಆರ್., ಎಂ.ಪಿ. ರಂಜಿತಾ ಹಾಗೂ ಪುರುಷರ ವಿಭಾಗದಲ್ಲಿ ಆಳ್ವಾಸ್‌ನ ಉಲ್ಲಾಸ್ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಪಡೆದಿದ್ದಾರೆ.ಚಾಂಪಿಯನ್ ಕರ್ನಾಟಕ ಮಹಿಳಾ ತಂಡವು ಅಖೀಲ ಭಾರತ ವಿ.ವಿ. ಬಾಲ್ ಬ್ಯಾಡ್ಮಿಂಟನ್‌ನಲ್ಲೂ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ದೇಶದ ಬಲಿಷ್ಠ ತಂಡವಾಗಿ ಮೂಡಿಬಂದಿದೆ.ಗೆದ್ದ ತಂಡಗಳಿಗೆ ಟ್ರೋಫಿ ಜತೆಗೆ ಆತಿಥೇಯ ಆಳ್ವಾಸ್ ಪ್ರಾಯೋಜಿತ ಬಹುಮಾನವಾಗಿ ಪ್ರಥಮ ರೂ. 50,000, ದ್ವಿತೀಯ ರೂ. 25,000, ತೃತೀಯ ಮತ್ತು ಚತುರ್ಥ ಸ್ಥಾನಿ ತಂಡಗಳಿಗೆ ತಲಾ ರೂ. 10,000 ನಗದು ಬಹುಮಾನ ವಿತರಿಸಲಾಯಿತು.
ಏಕಲವ್ಯ ಪ್ರಶಸ್ತಿ ಪುರಸ್ಕೃತರು, ಕ್ರೀಡಾ ರತ್ನ ಪ್ರಶಸ್ತಿ ಗಳಿಸಿದ ಆಳ್ವಾಸ್‌ನ ಕ್ರೀಡಾಳುಗಳು, ತೀರ್ಪುಗಾರರು, ಅಧಿಕಾರಿ ವರ್ಗದವರನ್ನು ಮತ್ತು ಕರ್ನಾಟಕ ಹಾಗೂ ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್ ಅಸೋಸಿಯೇಶನ್ ಕಾರ್ಯದರ್ಶಿಗಳನ್ನು ಪುರಸ್ಕರಿಸಲಾಯಿತು.
ಆತಿಥೇಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಧ್ಯಕ್ಷತೆ ಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರೈಲ್ವೇ ನ್ಪೋರ್ಟ್ಸ್ ಬೋರ್ಡ್ ಪ್ರೊಮೋಶನ್ ಕಾರ್ಯದರ್ಶಿ ರೇಖಾ ಯಾದವ್, ಶಾಸಕ, ಮಾಜಿ ಸಚಿವ ವಿನಯಕುಮಾರ ಸೊರಕೆ, “ಮೂಡಾ’ ಅಧ್ಯಕ್ಷ ಸುರೇಶ್ ಪ್ರಭು, ಕ್ರೀಡಾ ಪ್ರೋತ್ಸಾಹಕರಾದ ನಾರಾಯಣ ಪಿ. ಎಂ., ಮೊಹಮ್ಮದ್ ಮುಸ್ತಫಾ, ಉದಯ ಶೆಟ್ಟಿ ಮುನಿಯಾಲ್, ಗುಣಪಾಲ ಕಡಂಬ, ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್ ಅಸೋಸಿಯೇಶನ್ ಕಾರ್ಯದರ್ಶಿ ರಾಜಾರಾವ್, ಕರ್ನಾಟಕ ಬಾ.ಬ್ಯಾ. ಎಸೋಸಿಯೇಶನ್ ಕಾರ್ಯದರ್ಶಿ ದಿನೇಶ್ ಕುಮಾರ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.