ಒಲಿಂಪಿಕ್ಸ್‌ಗೆ ಕೊರೊನಾ ಭೀತಿ ಸಂವಹನವೇ ಸವಾಲು
Team Udayavani, Feb 15, 2020, 7:20 AM IST
ಟೋಕಿಯೊ: ಮುಂದಿನ ಬೇಸಗೆಯಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೊರೊನಾ ವೈರಸ್ ಭೀತಿ ಗಾಢವಾಗಿಯೇ ತಟ್ಟಿದೆ. ಒಲಿಂಪಿಕ್ಸ್ ತಾಣ ಸಂಪೂರ್ಣ ಸುರಕ್ಷಿತ ಎಂದು ಸಂಘಟನಾ ಅಧಿಕಾರಿಗಳು ಹೇಳುತ್ತಿದ್ದರೂ ವದಂತಿಗಳು ಇದಕ್ಕಿಂತಲೂ ಕ್ಷಿಪ್ರವಾಗಿ ಹರಡುತ್ತಿವೆ. ಸುರಕ್ಷತೆಯ ಬಗ್ಗೆ ತಿಳಿಸುವ ಕೆಲಸವೇ ದೊಡ್ಡ ಸವಾಲಿನದ್ದಾಗಿ ಪರಿಣಮಿಸಿದೆ.
ಚೀನದಲ್ಲಿ ಹಾವಳಿಯಿಟ್ಟಿರುವ ಕೊರೊನಾಗೆ ಈಗಾಗಲೇ 1,400ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 65,000ಕ್ಕೂ ಹೆಚ್ಚು ಮಂದಿ ವೈರಸ್ ಬಾಧಿತರಾಗಿದ್ದಾರೆ. ಗುರುವಾರ ಜಪಾನ್‌ನಲ್ಲೂ ಕೊರೊನಾಗೆ ಓರ್ವ ಬಲಿಯಾಗುವುದರೊಂದಿಗೆ ಒಲಿಂಪಿಕ್ಸ್ ಆತಿಥ್ಯದ ದೇಶದಲ್ಲೂ ಭಯ ಆವರಿಸಿದೆ. ಈ ನಡುವೆಯೇ ಒಲಿಂಪಿಕ್ಸ್ ರದ್ದಾಗುವ ಅಥವಾ ಮುಂದೆ ಹೋಗುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
4 ವರ್ಷಗಳ ಹಿಂದೆ ನಡೆದ ರಿಯೊ ಒಲಿಂಪಿಕ್ಸ್‌ಗೆ ಇದೇ ಮಾದರಿಯಲ್ಲಿ ಸೊಳ್ಳೆಯಿಂದ ಹರಡುವ ಝಿಕಾ ವೈರಸ್ ಭೀತಿ ಎದುರಾಗಿತ್ತು. ಗಾಲ್ಫ್ ಆಟಗಾರ ಜಾಸನ್ ಡೇ ಮತ್ತು ರೋರಿ ಮೆಕಲ್‌ರಾಯ್ ಸೇರಿ ಹಲವು ಟಾಪ್ ಆಟಗಾರರು ಝಿಕಾ ಭಯದಿಂದ ಈ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರಲಿಲ್ಲ. ಈಗ ಕೊರೊನಾ ಇದಕ್ಕಿಂತಲೂ ದೊಡ್ಡ ಭಯವಾಗಿ ಕಾಡುತ್ತಿದೆ.
ಚೀನದ ಸ್ಪರ್ಧಿಗಳು ಬಂದರೆ?
ಒಲಿಂಪಿಕ್ಸ್ ಸಮಿತಿ ಎಲ್ಲ ಕ್ರೀಡಾಪಟುಗಳಿಗೆ ಕೊರೊನಾ ಭಯಬೇಡ ಎಂಬ ಅಭಯ ನೀಡುತ್ತಿದೆ. ಆದರೆ ಚೀನದಿಂದ ಸುಮಾರು 600 ಕ್ರೀಡಾಪಟುಗಳು ಆಗಮಿಸಲಿರುವುದು ಆತಂಕಕ್ಕೆ ಕಾರಣವಾಗಿದೆ. ಚೀನ ಕ್ರೀಡಾಪಟುಗಳ ಜತೆಗೆ ಬೆರೆತರೆ ತಮಗೂ ಕೊರೊನಾ ಬರಬಹುದು ಎಂಬ ಭೀತಿ ಕ್ರೀಡಾಪಟುಗಳದ್ದು. ಚೀನದ ಹೆಚ್ಚಿನ ಕ್ರೀಡಾಪಟುಗಳು ಅವರ ದೇಶದಿಂದ ಹೊರಗಿದ್ದಾರೆ. ಹೀಗಾಗಿ ಅವರಿಗೆ ಕೊರೊನಾ ಸೋಂಕು ತಗಲಿರುವ ಸಾಧ್ಯತೆಯಿಲ್ಲ ಎಂದು ಸಂಘಟನಾ ಅಧಿಕಾರಿ ಜಾನ್ ಕೋಟ್ಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.