ಭಾರತಕ್ಕೆ ಕೊಹ್ಲಿ ಇಲ್ಲದೇ ಗೆಲ್ಲುವ ಸವಾಲು


Team Udayavani, Dec 13, 2017, 12:00 PM IST

13-24.jpg

ಮೊಹಾಲಿ: ಒಂದು ಕಾಲವಿತ್ತು. ಸಚಿನ್‌ ತೆಂಡುಲ್ಕರ್‌ ಗೈರಾದರೆ ಅಥವಾ ಬೇಗನೇ ಔಟಾದರೆ ಭಾರತ ತಂಡ ಪಟಪಟನೆ ವಿಕೆಟ್‌ ಕಳೆದುಕೊಂಡು ಅಸಹಾಯಕ ಸ್ಥಿತಿಗೆ ತಲಪುತ್ತಿತ್ತು. ಈಗ ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲೂ ಟೀಮ್‌ ಇಂಡಿಯಾಕ್ಕೆ ಇದೇ ಸಂಕಟ ಎದುರಾಗಿದೆಯೇ? ಧರ್ಮಶಾಲಾ ಪಂದ್ಯವನ್ನು ಕಂಡಾಗ ಹಾಗೆಯೇ ಅನಿಸುತ್ತದೆ. ಇದನ್ನು ಮೊಹಾಲಿಯಲ್ಲಿ ಭಾರತ ಸುಳ್ಳೆಂದು ಸಾಬೀತುಪಡಿಸಬೇಕು. ಬುಧವಾರ ಇಲ್ಲಿ ಭಾರತ-ಶ್ರೀಲಂಕಾ ನಡುವೆ ದ್ವಿತೀಯ ಏಕದಿನ ಪಂದ್ಯ ನಡೆಯಲಿದ್ದು, ರೋಹಿತ್‌ ಪಡೆ ಸರಣಿ ಉಳಿಸಿಕೊಳ್ಳುವ ವಿಪರೀತ ಒತ್ತಡದಲ್ಲಿದೆ.

ಧರ್ಮಶಾಲಾದಲ್ಲಿ ಮೊದಲ ಸಲ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಪಡೆದ ರೋಹಿತ್‌ ಶರ್ಮ ಎಲ್ಲ ದಿಕ್ಕುಗಳಿಂದಲೂ ವೈಫ‌ಲ್ಯ ಕಾಣುತ್ತ ಹೋದರು. ಜತೆಗೆ ತಂಡವೂ ಪೂರ್ತಿಯಾಗಿ ಮುಗ್ಗರಿಸಿತು. ಭಾರತ ತನ್ನ ಏಕದಿನ ಇತಿಹಾಸದ ಕನಿಷ್ಠ ಮೊತ್ತ ದಾಖಲಿಸಲಿದೆಯೇ ಎಂಬ ಭೀತಿಯೂ ಎದುರಾಗಿತ್ತು. ಪುಣ್ಯಕ್ಕೆ ಹಾಗಾಗಲಿಲ್ಲ.

ಮೊಹಾಲಿಯಲ್ಲೂ ಸ್ವಿಂಗ್‌ ಟ್ರ್ಯಾಕ್‌?
ಧರ್ಮಶಾಲಾದಂತೆ ಮೊಹಾಲಿ ಪಿಚ್‌ ಕೂಡ ಸ್ವಿಂಗ್‌ ಹಾಗೂ ಸೀಮ್‌ ಬೌಲಿಂಗಿಗೆ ಹೆಚ್ಚಿನ ನೆರವು ನೀಡುವುದು ವಾಡಿಕೆ. ಭಾರತದ ಅತಿ ವೇಗದ ಟ್ರ್ಯಾಕ್‌ಗಳಲ್ಲಿ ಮೊಹಾಲಿಯೂ ಒಂದೆನಿಸಿದೆ. ಡೇ-ನೈಟ್‌ ಮ್ಯಾಚ್‌ ಆದರೂ ಇದು ಕೂಡ ಬೆಳಗ್ಗೆ 11.30ಕ್ಕೇ ಆರಂಭ ವಾಗುತ್ತದೆ. ಟಾಸ್‌ ಗೆಲುವು ನಿರ್ಣಾಯಕ. ಬೌಲಿಂಗ್‌ ಆರಿಸಿಕೊಂಡರೆ ಮೇಲುಗೈ ಸಾಧಿಸ ಬಹುದೆಂಬುದೊಂದು ಲೆಕ್ಕಾಚಾರ.

ಧರ್ಮಶಾಲಾದಲ್ಲಿ ಭಾರತಕ್ಕೆ ಎದುರಾದದ್ದು ಗಂಭೀರ ಬ್ಯಾಟಿಂಗ್‌ ವೈಫ‌ಲ್ಯ. ಸುರಂಗ- ಮ್ಯಾಥ್ಯೂಸ್‌ ಜೋಡಿಯ ಸ್ವಿಂಗ್‌ ಎಸೆತಗಳನ್ನು ನಿಭಾಯಿಸಲು ಆತಿಥೇಯ ಬ್ಯಾಟ್ಸ್‌ಮನ್‌ಗಳು ಪೂರ್ತಿಯಾಗಿ ವಿಫ‌ಲರಾದರು. ಅಲ್ಲದೇ ಭಾರತದ ಬ್ಯಾಟಿಂಗ್‌ ಸರದಿ ಕೂಡ ಅಷ್ಟೊಂದು ಸಮತೋಲನದಿಂದ ಕೂಡಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅನುಭವ ಹಾಗೂ ಸ್ಥಿರತೆಯ ಕೊರತೆ ಎದ್ದು ಕಾಣುತ್ತಿತ್ತು. ಅನುಭವಿ ಆರಂಭಿಕರಾದ ಧವನ್‌-ರೋಹಿತ್‌ ಎರಡು ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡಾಗ ಮಿಡ್ಲ್ ಆರ್ಡರ್‌ನಲ್ಲಿ ಸಹಜ ವಾಗಿಯೇ ಕಂಪನ ಕಂಡುಬಂತು. 29 ರನ್ನಿಗೆ 7 ವಿಕೆಟ್‌ ಬಿದ್ದದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ! ಧೋನಿಯ 65 ರನ್‌ ಇಲ್ಲದೇ ಇರುತ್ತಿದ್ದಲ್ಲಿ ಟೀಮ್‌ ಇಂಡಿಯಾದ ಸ್ಥಿತಿಯನ್ನು ಊಹಿಸುವುದೂ ಕಷ್ಟವಿತ್ತು.

ಅಜಿಂಕ್ಯ ರಹಾನೆ ಬೇಕಾಗಿಲ್ಲ!
2019ರ ವಿಶ್ವಕಪ್‌ ಸಮೀಪಿಸುತ್ತಿರುವಾಗ, ಅದಕ್ಕೂ ಮೊದಲು ಭಾರೀ ಸವಾಲಿನ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಜ್ಜಾಗಬೇಕಿರುವ ಭಾರತ ಇನ್ನೂ ಸ್ಥಿರವಾದ ಬ್ಯಾಟಿಂಗ್‌ ಸರದಿಯನ್ನು ರೂಪಿಸಿಕೊಂಡಿಲ್ಲ ಎಂಬುದೊಂದು ವಿಪ ರ್ಯಾಸ. ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ದಿನೇಶ್‌ ಕಾರ್ತಿಕ್‌… ಇವರ್ಯಾರೂ ಯುವರಾಜ್‌ -ರೈನಾ ಅವರಂತೆ ಮ್ಯಾಚ್‌ ವಿನ್ನರ್‌ಗಳಲ್ಲ. ರಹಾನೆ ತಂಡಕ್ಕೆ ಬೇಕಾಗಿಲ್ಲ. 

ಅಜಿಂಕ್ಯ ರಹಾನೆ ಅವರನ್ನು ಕೇವಲ ಓಪನಿಂಗಿಗೆ ಬ್ರ್ಯಾಂಡ್‌ ಮಾಡಿದ್ದು ಭಾರತೀಯ ಕ್ರಿಕೆಟಿನ ದೊಡ್ಡ ಬ್ಲಿಂಡರ್‌! ಕೊಹ್ಲಿ ಗೈರಲ್ಲಿ ಅವರನ್ನು ವನ್‌ಡೌನ್‌ಗೆ ಆರಿಸಬಹುದಿತ್ತು. ಈವರೆಗಿನ 84 ಏಕದಿನ ಪಂದ್ಯಗಳಲ್ಲಿ ರಹಾನೆ ಮಧ್ಯಮ ಕ್ರಮಾಂಕದಲ್ಲೂ ಸಾಕಷ್ಟು ಪಂದ್ಯಗಳನ್ನಾಡಿ ಯಶಸ್ವಿಯಾದುದನ್ನು ಮರೆಯುವಂತಿಲ್ಲ. ಬಹುಶಃ ಮೊಹಾಲಿಯಲ್ಲೂ ರಹಾನೆಗೆ ಅವ ಕಾಶ ಲಭಿಸುವುದು ಅನುಮಾನ. ಉಳಿದಂತೆ ಹೆಚ್ಚುವರಿ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ಗಳೇ ತಂಡದಲ್ಲಿಲ್ಲ! ಅಯ್ಯರ್‌, ಪಾಂಡೆ, ಕಾರ್ತಿಕ್‌ ಸೇರಿಕೊಂಡು ಒತ್ತಡ ನಿಭಾಯಿಸಲು ಶಕ್ತರೇ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ರೋಹಿತ್‌-ಧವನ್‌ ಯಶಸ್ಸು ಕಂಡರೆ ಭಾರತದ ಬ್ಯಾಟಿಂಗ್‌ ಕ್ಲಿಕ್‌ ಆದೀತು, ಅಷ್ಟೇ.

ಸೋಲಿನಿಂದ ಪಾಠ
ಭಾರತದ ಬೌಲಿಂಗ್‌ ಬಗ್ಗೆ ಹೆಚ್ಚು ಆತಂಕಪಡಬೇಕಾದ ಅಗತ್ಯವಿಲ್ಲ. ಆದರೆ ಸ್ಕೋರ್‌ಬೋರ್ಡ್‌ನಲ್ಲಿ ದೊಡ್ಡ ಮೊತ್ತ ಇಲ್ಲದೇ ಹೋದಾಗ ಎಷ್ಟೇ ಶಕ್ತಿಶಾಲಿ ಬೌಲಿಂಗ್‌ ಇದ್ದರೂ ಪ್ರಯೋಜನವಿಲ್ಲ. ಧರ್ಮಶಾಲಾದಲ್ಲಿ ಲಂಕಾ ಆರಂಭಿಕರನ್ನು 19 ರನ್‌ ಆಗುವಷ್ಟರಲ್ಲಿ ವಾಪಸ್‌ ಕಳುಹಿಸಲಾಗಿತ್ತು. ಆದರೆ ಸ್ಪಿನ್ನರ್‌ಗಳನ್ನು ದಾಳಿಗೇ ಇಳಿಸದಿದ್ದುದು ದೊಡ್ಡ ಎಡ ವಟ್ಟೆಂದೇ ಹೇಳಬೇಕಾಗುತ್ತದೆ. 112 ರನ್‌ ಬೆನ್ನಟ್ಟುವುದು ದೊಡ್ಡ ಕತೆಯೇನಲ್ಲ, ಆದರೆ ಈ ಸಂದರ್ಭದಲ್ಲಿ ಸ್ಪಿನ್ನರ್‌ಗಳಿಗೆ ನಾಲ್ಕಾರು ಓವರ್‌ಗಳನ್ನು ನೀಡಿ ಎದುರಾಳಿಯನ್ನು ಪರೀಕ್ಷೆಗೆ ಒಡ್ಡಬಹುದಿತ್ತು. ಚಾಹಲ್‌-ಕುಲದೀಪ್‌ ತಂಡ ದಲ್ಲಿದ್ದೂ ವ್ಯರ್ಥವಾಯಿತು.

ಧರ್ಮಶಾಲಾ ಸೋಲು ನಮಗೊಂದು ಪಾಠ, ಇದರಿಂದ ಕಲಿಯಬೇಕಾದದ್ದು ಸಾಕಷ್ಟಿದೆ ಎಂದು ನಾಯಕ ರೋಹಿತ್‌ ಶರ್ಮ ಹೇಳಿ ದ್ದಾರೆ. ಟೀಮ್‌ ಇಂಡಿಯಾ ಇದನ್ನೆಲ್ಲ ಮೊಹಾಲಿ ಯಲ್ಲಿ ಕಲಿಯದೇ ಹೋದರೆ ಭಾರೀ ಅವಮಾನಕ್ಕೆ ಸಿಲುಕಬೇಕಾಗುತ್ತದೆ. ಒಟ್ಟಾರೆ, ಮೊಹಾಲಿ ಎಂಬುದು ಈಗ ಭಾರತೀಯ ಕ್ರಿಕೆಟ್‌ ಪಾಲಿಗೆ ಮಾನ-ಮರ್ಯಾದೆಯ ಪ್ರಶ್ನೆೆಯಾಗಿದೆ!

ಸರಣಿ ಮೇಲೆ ಶ್ರೀಲಂಕಾ ಕಣ್ಣು
ಟೆಸ್ಟ್‌ ಸರಣಿಯಲ್ಲಿ ನಿರೀಕ್ಷೆಗೂ ಮೀರಿದ ಹೋರಾಟ ಸಂಘಟಿಸಿದ ಶ್ರೀಲಂಕಾ, ಧರ್ಮಶಾಲಾ ಗೆಲುವಿನ ಬಳಿಕ ಹಲವು ಪಂದ್ಯಗಳಿಗಾಗುವಷ್ಟು ಸ್ಫೂರ್ತಿ, ಆತ್ಮವಿಶ್ವಾಸ ವನ್ನು ಸಂಪಾದಿಸಿದೆ. ಪ್ರವಾಸಿಗರ ಮುಂದಿನ ಗುರಿ ಏಕದಿನ ಸರಣಿಯನ್ನು ವಶಪಡಿಸಿ ಕೊಳ್ಳುವುದು. ಧರ್ಮಶಾಲಾ ಸಾಧನೆಯನ್ನೇ ಪುನರಾವರ್ತಿಸಿದರೆ ಇದು ಅಸಾಧ್ಯವೇನಲ್ಲ. ಹೀಗಾಗಿ ಪೆರೆರ ಪಡೆಯೀಗ ಫ‌ುಲ್‌ ಜೋಶ್‌ನಲ್ಲಿದೆ. ಭಾರತದಲ್ಲಿ ಸರಣಿ ಗೆದ್ದರೆ ಲಂಕನ್ನರ ಪಾಲಿಗೆ ಅದೊಂದು ಇತಿಹಾಸವಾಗಲಿದೆ.

122 ರನ್‌ಗೆ ಕುಸಿದಿದ್ದ ಲಂಕಾ
ಮೊಹಾಲಿಯಲ್ಲಿ ಭಾರತ- ಶ್ರೀಲಂಕಾ ನಡುವೆ ಈವರೆಗೆ ನಡೆದದ್ದು ಒಂದೇ ಪಂದ್ಯ. ಅದು 2005ರ 7 ಪಂದ್ಯ ಗಳ ಸರಣಿಯ ದ್ವಿತೀಯ ಮುಖಾಮುಖೀ. ಧೋನಿ ಸಾರಥ್ಯದ ಭಾರತ ಇದನ್ನು 8 ವಿಕೆಟ್‌ಗಳಿಂದ ಗೆದ್ದಿತ್ತು.

ಇರ್ಫಾನ್‌ ಪಠಾಣ್‌ (37ಕ್ಕೆ 4), ಜೆ.ಪಿ. ಯಾದವ್‌ (32ಕ್ಕೆ 2) ಮತ್ತು ಹರ್ಭಜನ್‌ ಸಿಂಗ್‌ (19ಕ್ಕೆ 2) ದಾಳಿಗೆ ತತ್ತರಿಸಿದ ಅತ್ತಪಟ್ಟು ಪಡೆ 122 ರನ್ನಿಗೆ ಕುಸಿದಿತ್ತು. ಭಾರತ 20.2 ಓವರ್‌ಗಳಲ್ಲಿ 2 ವಿಕೆಟಿಗೆ 123 ರನ್‌ ಬಾರಿಸಿ ಗೆದ್ದು ಬಂತು. ತೆಂಡುಲ್ಕರ್‌ ಅಜೇಯ 67, ಸೆಹವಾಗ್‌ 38 ರನ್‌ ಹೊಡೆದಿದ್ದರು.

ಶ್ರೀಲಂಕಾ ಮೊಹಾಲಿಯಲ್ಲಿ 2 ಏಕದಿನ ಪಂದ್ಯಗಳನ್ನಾಡಿದೆ. 1997ರ “ಇಂಡಿಪೆಂಡೆನ್ಸ್‌ ಕಪ್‌’ ಕೂಟದ ಮೊದಲ ಫೈನಲ್‌ನಲ್ಲಿ ಪಾಕಿಸ್ಥಾನವನ್ನು 115 ರನ್ನುಗಳಿಂದ, 2006ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಅರ್ಹತಾ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 37 ರನ್ನುಗಳಿಂದ ಸೋಲಿಸಿದ ಸಾಧನೆ ಲಂಕೆಯದು.

“ಧರ್ಮಶಾಲಾ ಪಂದ್ಯದಂತೆ  ಆಡಿದರೆ ಸರಣಿ ಗೆಲ್ಲಬಲ್ಲೆವು’
ಮೊಹಾಲಿ: “ಧರ್ಮಶಾಲಾ ಪಂದ್ಯದಲ್ಲಿ ನಾವು ಅಮೋಘ ಪ್ರದರ್ಶನ ನೀಡಿದ್ದೆವು. ಇದೇ ಆಟವನ್ನು ಪುನರಾವರ್ತಿಸಿದರೆ ನಾವು ಸರಣಿ ಗೆಲ್ಲಬಲ್ಲೆವು’ ಎಂಬುದಾಗಿ ಶ್ರೀಲಂಕಾ ತಂಡದ ನಾಯಕ ತಿಸರ ಪೆರೆರ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಸರಣಿ ಗೆಲ್ಲಲು ನಮ್ಮ ಮುಂದೆ ಆತ್ಯುತ್ತಮ ಅವಕಾಶವೊಂದು ಎದುರಾಗಿದೆ. ಭಾರತದಲ್ಲಿ ಸರಣಿ ಗೆದ್ದು ಮರಳಿದ ತಂಡಗಳ ಸಂಖ್ಯೆ ಬಹಳ ವಿರಳ. ನಾವು ಅದ್ಭುತವಾದುದನ್ನು ಸಾಧಿಸ ಬಯಸುತ್ತೇವೆ. ಧರ್ಮಶಾಲಾದಲ್ಲಿ ಆಡಿದಂತೆ ಆಡಿದರೆ ಸರಣಿ ಗೆಲ್ಲಬಹುದು’ ಎಂದು ಪೆರೆರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಧರ್ಮಶಾಲಾದ ವಾತಾವರಣಕ್ಕೆ ಮನಸೋತ ಶ್ರೀಲಂಕಾ ತಂಡದ ಸದಸ್ಯರು ಅಲ್ಲಿ ಒಂದು ದಿನ ಹೆಚ್ಚಿಗೆ ಉಳಿದು, ಮಂಗಳವಾರ ಬೆಳಗ್ಗೆಯಷ್ಟೇ ಮೊಹಾಲಿಗೆ ಆಗಮಿಸಿದರು. 

ತಂಡದ ಮೇಲೆ ಒತ್ತಡವೇನಾದರೂ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೆರೆರ, “ಇಲ್ಲ. ಇದು ನಮಗೆ ಮತ್ತೂಂದು ಪಂದ್ಯ ಮಾತ್ರ. ನಾವು ನಾಳೆ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಲ್ಲೆವು. ಹೀಗಾಗಿ 200 ಪ್ರತಿಶತ ಸಾಮರ್ಥ್ಯವನ್ನು ಈ ಪಂದ್ಯಕ್ಕೆ ಮೀಸಲಿಡಲಿದ್ದೇವೆ’ ಎಂದರು. ತಿಸರ ಪೆರೆರ ಅವರಿಗೆ ಮೊಹಾಲಿ ಅಂಗಳ ಸಾಕಷ್ಟು ಪರಿಚಿತ. ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಸದಸ್ಯರಾಗಿದ್ದ ಪೆರೆರ ಇಲ್ಲಿ ಸಾಕಷ್ಟು ಪಂದ್ಯಗಳನ್ನಾಡಿದ್ದಾರೆ.

ಟಾಪ್ ನ್ಯೂಸ್

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

Actress kashima is in Nee nange movie

Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

11-2

Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು

Team India; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

TeamIndia; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Team India; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

TeamIndia; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

ನಿತೀಶ್‌ ಕುಮಾರ್‌ ಆಕರ್ಷಕ ಶತಕ; ಫಾಲೋಆನ್‌ ಅವಮಾನದಿಂದ ಪಾರು

INDvAUS: ನಿತೀಶ್‌ ಕುಮಾರ್‌ ಆಕರ್ಷಕ ಶತಕ; ಫಾಲೋಆನ್‌ ಅವಮಾನದಿಂದ ಪಾರು

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10(1

Mangaluru: ನಗರದ 18 ಕಡೆಗಳಲ್ಲಿ ಪೇ ಪಾರ್ಕಿಂಗ್‌

9(1

Kundapura: ಟಿಟಿ ರೋಡ್‌ನ‌ಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

12-udupi

Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.