ವಿಶ್ವ ಹಾಕಿ ಲೀಗ್‌ನಲ್ಲಿ ಭಾರತ ವಿರುದ್ಧ ಪಿತೂರಿ: ತನಿಖೆಗೆ ಆದೇಶ
Team Udayavani, Jul 8, 2017, 2:50 AM IST
ನವದೆಹಲಿ: ಜೂನ್ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಕೂಟ ನಡೆದಿತ್ತು. ಈ ವೇಳೆ ಭಾರತ ತಂಡದ ವಿರುದ್ಧ ಪಿತೂರಿ ನಡೆದಿತ್ತು ಎಂದು ಭಾರತ ಹಾಕಿ ಮಂಡಳಿ ಆರೋಪಿಸಿದೆ.
ಜೂ.19ರಂದು ನಡೆದ ಪಾಕ್ ವಿರುದ್ಧ ಪಂದ್ಯಕ್ಕೂ ಮುನ್ನ ಭಾರತದ ಮುಖ್ಯ ಆಟಗಾರ ಸರ್ದಾರ್ ಸಿಂಗ್‌ರನ್ನು ಅತ್ಯಾಚಾರ ಆರೋಪದಡಿ ವಿಚಾರಣೆ ನಡೆಸಲು ಯಾರ್ಕ್‌ಶೈರ್ ಪೊಲೀಸರು ತೀರ್ಮಾನಿಸಿದ್ದರು. ಇದು ಉದ್ದೇಶಪೂರ್ವಕ ಎನ್ನುವುದು ಹಾಕಿ ಇಂಡಿಯಾದ ಆರೋಪ. ಈ ಕುರಿತಂತೆ ದೂರು ಸ್ವೀಕರಿಸಿರುವ ಅಂತಾರಾಷ್ಟ್ರೀಯ ಹಾಕಿ ಮಂಡಳಿ ಎಫ್ಐಎಚ್, ತನಿಖೆ ಮಾಡಲು ಇಂಗ್ಲೆಂಡ್ ಪೊಲೀಸರಿಗೆ ಸೂಚಿಸಿದೆ.
“ಸರ್ದಾರ್ ವಿಚಾರಣೆ ವೇಳೆ ಇಂಗ್ಲೆಂಡ್ ಪೊಲೀಸರು ಶಿಷ್ಟಾಚಾರ ಪಾಲಿಸಲಿಲ್ಲ. ಇದು ಭಾರತವನ್ನು ಮಾನಸಿಕವಾಗಿ ಧೃತಿ ಗೆಡಿಸಲೆಂದೇ ಮಾಡಿದ ತೀರ್ಮಾನ. ಇದರ ಪರಿಣಾಮ ಭಾರತ ಮುಂದಿನ ಮೂರೂ ಪಂದ್ಯಗಳನ್ನು ಸೋತು ಹೋಯಿತು’ ಎಂದು ಹಾಕಿ ಇಂಡಿಯಾ ಹೇಳಿದೆ.
ಅಲ್ಲದೇ ಪಾಕಿಸ್ತಾನ ಮೂಲದ ಇಂಗ್ಲೆಂಡ್ ಸಂಸದರೊಬ್ಬರು ಸರ್ದಾರ್ ವಿರುದ್ಧ ದೂರು ನೀಡುವಂತೆ ಇಂಗ್ಲೆಂಡ್ ಹಾಕಿ ಆಟಗಾರ್ತಿಯನ್ನು ಪ್ರಚೋದಿಸಿದರು. ಅದರ ಪರಿಣಾಮವೇ ಈ ದಿಢೀರ್ ಬೆಳವಣಿಗೆ ನಡೆಯಿತು ಎಂದು ಭಾರತ ತಂಡ ವ್ಯವಸ್ಥಾಪಕ ಜುಗ್ರಾಜ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.