ಜೋಶ್ ಇರುವ ತನಕ ದೇಶಕ್ಕಾಗಿ ಆಟ: ಕೊಹ್ಲಿ
Team Udayavani, Nov 9, 2021, 9:15 PM IST
ದುಬಾೖ: “ನಾನು ಯಾವುದೇ ಕಾರಣಕ್ಕೂ ಬದಲಾಗುವವನಲ್ಲ. ಒಂದು ವೇಳೆ ನನ್ನಲ್ಲಿನ ಜೋಶ್, ಆಕ್ರಮಣಕಾರಿ ಆಟ ಕಡಿಮೆಯಾಗಿದೆ ಎಂದು ನನಗೆ ಅನ್ನಿಸಿದರೆ ಕ್ರಿಕೆಟ್‌ಗೆ ಗುಡ್‌ಬೈ ಹೇಳುತ್ತೇನೆ. ಭಾರತ ತಂಡದ ನಾಯಕತ್ವದ ಜವಾಬ್ದಾರಿ ಇಲ್ಲದಿದ್ದರೂ ನಾನು ಹುರುಪು-ಹುಮ್ಮಸ್ಸಿನಿಂದಲೇ ದೇಶಕ್ಕಾಗಿ ಆಡುತ್ತೇನೆ…’ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಹೇಳಿದ ಮಾತುಗಳಿವು.
“ಕಳೆದ ಆರು-ಏಳು ವರ್ಷಗಳಿಂದ ಸಾಕಷ್ಟು ಕೆಲಸ ಮತ್ತು ಒತ್ತಡದಿಂದ ಇದ್ದೆ. ಈಗ ಇದನ್ನು ಸರಿದೂಗಿಸುವ ಸಮಯ ಬಂದಿದೆ. ನನ್ನ ಟಿ20 ಕ್ರಿಕೆಟ್ ನಾಯಕತ್ವ ಕೊನೆಗೊಂಡಿದೆ. ನಮ್ಮ ಆಟಗಾರರು ಅದ್ಭುತ ಪ್ರದರ್ಶನ ತೋರಿದ್ದಾರೆ. ಹೌದು, ನಾವು ಇಲ್ಲಿ ಟ್ರೋಫಿ ಗೆದ್ದಿಲ್ಲ ನಿಜ, ಆದರೆ ಅತ್ಯುತ್ತಮ ಕ್ರಿಕೆಟ್ ಆಡಿದ್ದೇವೆ’ ಎಂದು ಕೊಹ್ಲಿ ಹೇಳಿದರು.
ಕೆಲಸ ಸರಳಗೊಳಿಸಿದ್ದಾರೆ
“ನಮ್ಮ ತಂಡದಲ್ಲಿರುವ ಆಟಗಾರರು ನನ್ನ ಕೆಲಸನ್ನು ಬಹಳ ಸರಳಗೊಳಿಸಿದ್ದಾರೆ. ಕೋಚ್ ರವಿಶಾಸ್ತ್ರಿ ಮತ್ತು ಸಹಾಯಕ ಸಿಬಂದಿಗೆ ನನ್ನ ಧನ್ಯವಾದಗಳು. ವರ್ಷದಿಂದ ವರ್ಷಕ್ಕೆ ಅವರು ಸಾಕಷ್ಟು ಶ್ರಮಿಸಿದ್ದಾರೆ. ಆಟಗಾರರಲ್ಲಿ ಉತ್ತಮ ಸಂಬಂಧ, ಬಾಂಧವ್ಯ ಬೆಳೆಸಿದ್ದಾರೆ’ ಎಂದರು.
ಇದನ್ನೂ ಓದಿ:ಜಾಗತಿಕ ಷೇರುಮಾರುಕಟ್ಟೆ ಎಫೆಕ್ಟ್; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 112 ಅಂಕ ಇಳಿಕೆ
ಉತ್ಸಾಹಿಗಳಿಗೆ ಮೊದಲ ಆದ್ಯತೆ
ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶವಿದ್ದರೂ ಕ್ರೀಸ್‌ಗೆ ಆಗಮಿಸದ ಬಗ್ಗೆ ಉತ್ತರಿಸಿದ ಕೊಹ್ಲಿ, “ಉತ್ಸಾಹಿ ಹಾಗೂ ಯುವ ಆಟಗಾರ ಸೂರ್ಯಕುಮಾರ್ ಯಾದವ್‌ಗೆ ಈ ಟೂರ್ನಿಯಲ್ಲಿ ಬ್ಯಾಟಿಂಗ್ ಮಾಡಲು ಹೆಚ್ಚು ಅವಕಾಶ ಸಿಗಲಿಲ್ಲ. ಯಾವುದೇ ಒಬ್ಬ ಆಟಗಾರ ಅತ್ಯುತ್ತಮ ಪ್ರದರ್ಶನದೊಂದಿಗೆ ಪಂದ್ಯ ಪೂರ್ಣಗೊಳಿಸಬೇಕೆಂದು ಬಯಸುತ್ತಾನೆ. ಹೀಗಾಗಿ ಸೂರ್ಯಕುಮಾರ್‌ಗೆ ಅವಕಾಶ ನೀಡುವುದು ಉತ್ತಮ ಎಂದು ನನಗೆ ಅನ್ನಿಸಿತು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.