ಯೋಧಾ ಎದುರು ಹಾಲಿ ಚಾಂಪಿಯನ್ ಬುಲ್ಸ್
Team Udayavani, Oct 14, 2019, 5:57 AM IST
ಅಹ್ಮದಾಬಾದ್: ಪ್ರೊ ಕಬಡ್ಡಿ 7ನೇ ಆವೃತಿಯ ಸುದೀರ್ಘ ಲೀಗ್ ಹಣಾಹಣಿ ಬರೋಬ್ಬರಿ 132 ಪಂದ್ಯಗಳ ಬಳಿಕ ಕೊನೆಗೊಂಡಿದೆ. ಪಂದ್ಯಾವಳಿಯೀಗ ಅಂತಿಮ ಘಟ್ಟ ತಲುಪಿದೆ. ಸೋಮವಾರ ಎರಡು ಎಲಿಮಿನೇಟರ್ ಪಂದ್ಯಗಳು ನಡೆಯಲಿದ್ದು, ಇಲ್ಲಿ ಸೋತ ತಂಡಗಳು ಕೂಟದಿಂದ ನಿರ್ಗಮಿಸಲಿವೆ. ಗೆದ್ದವರಿಗೆ ಸೆಮಿಫೈನಲ್ ಟಿಕೆಟ್ ಲಭಿಸಲಿದೆ.
ನಿಯಮದಂತೆ, ಅಂಕಪಟ್ಟಿಯಲ್ಲಿ ಮೊದಲ 2 ಸ್ಥಾನ ಗಳಿಸಿದ ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ ನೇರವಾಗಿ ಸೆಮಿಫೈನಲ್ ಪ್ರವೇಶಿಸಿವೆ. ಉಳಿದ 4 ತಂಡಗಳಾದ ಬುಲ್ಸ್-ಯುಪಿ ಯೋಧಾ, ಯು ಮುಂಬಾ-ಹರ್ಯಾಣ ಅಹ್ಮದಾಬಾದ್‌ನಲ್ಲಿ ಅದೃಷ್ಟಪರೀಕ್ಷೆಗೆ ಇಳಿಯಲಿವೆ.
ಚಾಂಪಿಯನ್‌ಗೆ ಕಠಿನ ಸವಾಲು
ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ ಸೆಣಸಲಿದೆ. ಬುಲ್ಸ್‌ಗೆ ನಾಯಕ ರೋಹಿತ್ ಕುಮಾರ್ ಅನುಪಸ್ಥಿತಿ ಕಾಡುತ್ತಿದ್ದು, ತಂಡದ ಸಂಪೂರ್ಣ ಜವಾಬ್ದಾರಿ ಪವನ್ ಸೆಹ್ರಾವತ್ ಮೇಲಿದೆ. ತಂಡದ ಅಷ್ಟೂ ನಿರ್ವಹಣೆ ಸೆಹ್ರಾವತ್ ಆಟವನ್ನೇ ಅವಲಂಬಿಸಿದೆ. ಅವರ ಏಕಾಂಗಿ ಹೋರಾಟದಿಂದಲೇ ತಂಡ ಪ್ಲೇ-ಆಫ್ ಹಂತದ ವರೆಗೆ ತಲುಪಿದೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಎಲಿಮಿನೇಟರ್ ಸ್ಪರ್ಧೆ ಬೇರೆಯೇ ಜೋಶ್ ಹೊಂದಿರುತ್ತದೆ. ಸಾಂ ಕವಾಗಿ ಆಡಿದರಷ್ಟೇ ಬುಲ್ಸ್ ಓಟ ಮುಂದುವರಿದೀತು.
ಯುಪಿ ಯೋಧಾ ಎದುರಿನ ಕೊನೆಯ ಲೀಗ್ ಪಂದ್ಯದಲ್ಲಿ ಬುಲ್ಸ್ ಎಡವಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಬೇಕಿದೆ. ಒಂದು ವೇಳೆ ಎಲಿಮಿನೇಟರ್ ಪಂದ್ಯವನ್ನು ಗೆದ್ದು ಬುಲ್ಸ್ ಸೆಮಿಫೈನಲ್‌ಗೇರಿದರೂ ಅಲ್ಲಿ ಬಲಿಷ್ಠ ದಬಾಂಗ್ ಡೆಲ್ಲಿ ಸವಾಲು ಎದುರಾಗಲಿದೆ. ಪ್ರಚಂಡ ಪ್ರದರ್ಶನ ಕಾಯ್ದುಕೊಂಡು ಬಂದಿರುವ ಡೆಲ್ಲಿ ವಿರುದ್ಧ ಸೆಣಸುವುದು ಸುಲಭವಲ್ಲ.
ಯುಪಿ ಯೋಧಾ ಸಶಕ್ತ ತಂಡ
ಬುಲ್ಸ್‌ಗೆ ಹೋಲಿಸಿದರೆ ಯುಪಿ ಯೋಧಾ ರೈಡಿಂಗ್ ಹಾಗೂ ಟ್ಯಾಕಲ್ ವಿಭಾಗಗಳೆರ ಡರಲ್ಲೂ ಬಲಿಷ್ಠವಾಗಿದೆ. ಇದೊಂದು ಸಶಕ್ತ ಹಾಗೂ ಪರಿಪೂರ್ಣ ತಂಡ. ಕನ್ನಡಿಗ ರಿಷಾಂಕ್ ಅವರ ಆಲ್‌ರೌಂಡ್ ಆಟ; ಶ್ರೀಕಾಂತ್, ಮೋನು ಗೋಯತ್ ಅವರ ಅಮೋಘ ರೈಡಿಂಗ್, ನಾಯಕ ನಿತೇಶ್ ಕುಮಾರ್ ಅವರ ಟ್ಯಾಕಲ್ ಎದುರಾಳಿಗೆ ಭಾರೀ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
ಮುಂಬಾ-ಹರ್ಯಾಣ ಸಮಬಲ
ಯು ಮುಂಬಾ ಮತ್ತು ಹರ್ಯಾಣ ಸ್ಟೀಲರ್ ನಡುವಿನ 2ನೇ ಎಲಿಮಿನೇಟರ್ ಪಂದ್ಯ ಅತ್ಯಂತ ರೋಚಕವಾಗಿ ಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಎರಡೂ ತಂಡಗಳು ಸಮಾನ ಸಾಮರ್ಥ್ಯದೊಂದಿಗೆ ಬಲಿಷ್ಠವಾಗಿರುವುದೇ ಇದಕ್ಕೆ ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.