ಆರಂಭಿಕರ ಶೀಘ್ರ ಪತನವೇ ಗೆಲುವಿಗೆ ಕಾರಣ: ಮುನ್ರೊ
Team Udayavani, Nov 6, 2017, 8:49 AM IST
ರಾಜ್‌ಕೋಟ್: ಭಾರತದ ಆರಂಭಿಕರಿಬ್ಬರನ್ನೂ ಬೇಗನೇ ಔಟ್ ಮಾಡಿದ್ದೇ ಗೆಲುವಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ ನ್ಯೂಜಿಲ್ಯಾಂಡ್ ಓಪನರ್, ಶತಕವೀರ ಕಾಲಿನ್ ಮುನ್ರೊ. ಶನಿವಾರ ರಾತ್ರಿ ನಡೆದ ರಾಜ್‌ಕೋಟ್ ಪಂದ್ಯವನ್ನು 40 ರನ್ನಿನಿಂದ ಗೆದ್ದು ಸರಣಿಯನ್ನು ಸಮಬಲಕ್ಕೆ ತಂದ ಬಳಿಕ ಅವರು ಪ್ರತಿಕ್ರಿಯಿಸಿದರು.
ಮುನ್ರೊ ಅವರ ಚಜೇಯ 109 ರನ್ ಸಾಹಸದಿಂದ ನ್ಯೂಜಿಲ್ಯಾಂಡ್ ಕೇವಲ 2 ವಿಕೆಟಿಗೆ 196 ರನ್ ಪೇರಿಸಿ ಸವಾಲೊಡ್ಡಿತ್ತು. ಇದನ್ನು ಬೆನ್ನಟ್ಟುವ ವೇಳೆ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ತಮ್ಮ ಮೊದಲ ಓವರಿನಲ್ಲೇ ಭಾರತದ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಆಗ ಸ್ಕೋರ್ ಬೋರ್ಡ್ ಕೇವಲ 11 ರನ್ ದಾಖ ಲಿಸುತ್ತಿತ್ತು. ಇದೇ ಪಂದ್ಯದ ಟರ್ನಿಂಗ್ ಪಾಯಿಂಟ್ ಆಗಿತ್ತು ಎಂದು ಪಂದ್ಯ ಶ್ರೇಷ್ಠ ಮುನ್ರೊ ಹೇಳಿದರು. ಇದಕ್ಕೆ ವ್ಯತಿರಿಕ್ತವೆಂಬಂತೆ ನ್ಯೂಜಿಲ್ಯಾಂಡ್ ಮೊದಲ ವಿಕೆಟಿಗೆ 11.1 ಓವರ್‌ಗಳಿಂದ 105 ರನ್ ಸೂರೆಗೈದಿತ್ತು.
“ಭಾರತದ ಆರಂಭಿಕರಿಬ್ಬರೂ ಎಷ್ಟೊಂದು ಅಮೋಘ ಫಾರ್ಮ್ ನಲ್ಲಿದ್ದಾರೆ ಎಂಬುದಕ್ಕೆ ಮೊದಲ ಪಂದ್ಯವೇ ಸಾಕ್ಷಿ. 158 ರನ್ನುಗಳ ದಾಖಲೆ ಜತೆಯಾಟ ನಡೆಸಿದ್ದರು. ಇಲ್ಲಿ ಇವರಿಬ್ಬರೂ ಕ್ರೀಸ್ ಆಕ್ರಮಿಸಿಕೊಂಡಿದ್ದರೆ ನಮಗೆ ಅಪಾಯ ವಿತ್ತು. ಆದರೆ ಬೌಲ್ಟ್ ಇವರಿಬ್ಬರನ್ನೂ ಬೇಗನೇ ಔಟ್ ಮಾಡಿದರು. ಸ್ಪಿನ್ನರ್‌ಗಳಾದ ಸ್ಯಾಂಟ್ನರ್, ಸೋಧಿ ಕೂಡ ಉತ್ತಮ ನಿಯಂತ್ರಣ ಸಾಧಿಸಿದರು. ಇಬ್ಬರೂ ನಾರ್ದರ್ನ್ ಡಿಸ್ಟ್ರಿಕ್ಟ್ ಆಟಗಾರರಾದ್ದರಿಂದ ಅವರಲ್ಲಿ ಉತ್ತಮ ಹೊಂದಾಣಿಕೆ ಇದೆ. ಹೀಗಾಗಿ ಗೆಲುವು ಸುಲಭವಾಯಿತು’ ಎಂದು ದಕ್ಷಿಣ ಆಫ್ರಿಕಾ ಮೂಲದವರಾದ ಮುನ್ರೊ ಹೇಳಿದರು.
ಶತಕ ಸಂಭ್ರಮ
ತಮ್ಮ ಶತಕದ ಬಗ್ಗೆಯೂ ಮುನ್ರೊ ಖುಷಿಯಿಂದ ಹೇಳಿಕೊಂಡರು. “ದೇಶದ ಪರ ಮೊದಲ ಶತಕ ಬಾರಿಸು ವುದೇ ಹೆಮ್ಮೆಯ ಸಂಗತಿ. ಕಳೆದ ಬಾಂಗ್ಲಾ ಸರಣಿಯಲ್ಲಿ ನನಗೆ ಈ ಅನುಭವವಾಗಿತ್ತು. ಆದರೆ ಭಾರತ ಕಠಿನ ಎದುರಾಳಿ. ಶತಕ ಬಾರಿಸುವುದು, ಪೂರ್ತಿ 20 ಓವರ್ ತನಕ ಬ್ಯಾಟಿಂಗ್ ವಿಸ್ತರಿಸುವುದು ಸುಲಭವಲ್ಲ. “ಗಪ್ಪಿ’ (ಗಪ್ಟಿಲ್) ಆರಂಭದಲ್ಲಿ ಹೆಚ್ಚಿನ ಸ್ಟ್ರೈಕ್ ಪಡೆದು ಬೀಸಲಾರಂಭಿಸಿದ್ದು ನನಗೆ ಸ್ಫೂರ್ತಿ ಕೊಟ್ಟಿತು. ಇದು ಬ್ಯಾಟಿಂಗಿಗೆ ಉತ್ತಮವಾದ ಟ್ರ್ಯಾಕ್ ಆಗಿತ್ತು. ಇಂಥ ಅಂಗಳದಲ್ಲೂ ನಮ್ಮ ಬೌಲರ್‌ಗಳು ದಿಟ್ಟ ದಾಳಿ ಸಂಘಟಿಸಿದರು’ ಎಂದರು.
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತ ಬಂದ ಕೀಪರ್ ಟಾಮ್ ಲ್ಯಾಥಂ ಅವರನ್ನು ಹೊರಗಿರಿಸಿದ್ದು ಕಠಿನ ನಿರ್ಧಾರವಾಗಿತ್ತು ಎಂದು ಮುನ್ರೊ ಹೇಳಿದರು. ರಾಜ್‌ಕೋಟ್‌ನಲ್ಲಿ ಗ್ಲೆನ್ ಫಿಲಿಪ್ಸ್ ಕೀಪಿಂಗ್ ನಡೆಸಿದ್ದರು.
ಎಕ್ಸ್‌ಟ್ರಾ ಇನ್ನಿಂಗ್ಸ್
ಕಾಲಿನ್ ಮುನ್ರೊ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2 ಶತಕ ಹೊಡೆದ 4ನೇ ಬ್ಯಾಟ್ಸ್‌ಮನ್ ಎನಿಸಿದರು. ಉಳಿದವರೆಂದರೆ ಬ್ರೆಂಡನ್ ಮೆಕಲಮ್, ಕ್ರಿಸ್ ಗೇಲ್ ಮತ್ತು ಎವಿನ್ ಲೆವಿಸ್.
ಮುನ್ರೊ ಒಂದೇ ವರ್ಷದಲ್ಲಿ 2 ಟಿ20 ಶತಕ ಹೊಡೆದ ವಿಶ್ವದ ಮೊದಲ ಬ್ಯಾಟ್ಸ್‌ಮನ್. ಅವರ ಮೊದಲ ಸೆಂಚುರಿ ಇದೇ ಜನವರಿಯಲ್ಲಿ ಬಾಂಗ್ಲಾದೇಶ ವಿರುದ್ಧ ದಾಖಲಾಗಿತ್ತು (54 ಎಸೆತಗಳಿಂದ 101 ರನ್).
ಮುನ್ರೊ ಭಾರತದೆದುರು ಶತಕ ಬಾರಿಸಿದ 3ನೇ ಕ್ರಿಕೆಟಿಗ. ಎವಿನ್ ಲೆವಿಸ್ (2) ಮತ್ತು ಶೇನ್ ವಾಟ್ಸನ್ ಉಳಿದಿಬ್ಬರು.
ಮುನ್ರೊ ಭಾರತದ ವಿರುದ್ಧ ಭಾರತದಲ್ಲಿ ಶತಕ ಬಾರಿಸಿದ ಮೊದಲ ಆಟಗಾರ. 2012ರ ಚೆನ್ನೈ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ 91 ರನ್ ಹೊಡೆದದ್ದು ಈವರೆಗಿನ ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು.
ಟ್ರೆಂಟ್ ಬೌಲ್ಟ್ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದರು (34ಕ್ಕೆ 4). ಅವರು ಭಾರತದೆದುರು 4 ವಿಕೆಟ್ ಕಿತ್ತ ನ್ಯೂಜಿಲ್ಯಾಂಡಿನ 3ನೇ ಬೌಲರ್. ಡೇನಿಯಲ್ ವೆಟರಿ (20ಕ್ಕೆ 4) ಮತ್ತು ಮಿಚೆಲ್ ಸ್ಯಾಂಟ್ನರ್ (11ಕ್ಕೆ 4) ಉಳಿದಿಬ್ಬರು.
ಭಾರತ ತವರಿನ 12 ಚೇಸಿಂಗ್‌ಗಳಲ್ಲಿ 4ನೇ ಸೋಲನುಭವಿಸಿತು. ಇದರಲ್ಲಿ 3 ಸೋಲು ನ್ಯೂಜಿಲ್ಯಾಂಡ್ ಎದುರೇ ಬಂದಿದೆ.
ವಿರಾಟ್ ಕೊಹ್ಲಿ ಟಿ20 ಪಂದ್ಯಗಳಲ್ಲಿ 7 ಸಾವಿರ ರನ್ ಪೂರ್ತಿಗೊಳಿಸಿದ ಭಾರತದ ಮೊದಲ, ವಿಶ್ವದ 8ನೇ ಆಟಗಾರ ಎನಿಸಿದರು. 10,571 ರನ್ ಬಾರಿಸಿರುವ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಉಳಿದವರೆಂದರೆ ಬ್ರೆಂಡನ್ ಮೆಕಲಮ್ (8,245), ಕೈರನ್ ಪೊಲಾರ್ಡ್ (7,589), ಡೇವಿಡ್ ವಾರ್ನರ್ (7,572), ಬ್ರಾಡ್ ಹಾಜ್ (7,338), ಡ್ವೇನ್ ಸ್ಮಿತ್ (7,270) ಮತ್ತು ಶೋಯಿಬ್ ಮಲಿಕ್ (7,226).
ಕೊಹ್ಲಿ ಎಲ್ಲ ಮಾದರಿಯ ಟಿ20 ಪಂದ್ಯಗಳ 212 ಇನ್ನಿಂಗ್ಸ್ ಗಳಲ್ಲಿ 7 ಸಾವಿರ ರನ್ ಬಾರಿಸಿದರು. ಅತೀ ವೇಗದ ಇನ್ನಿಂಗ್ಸ್ ಲೆಕ್ಕಾಚಾರದಲ್ಲಿ ಇದಕ್ಕೆ 2ನೇ ಸ್ಥಾನ. ದಾಖಲೆ ಗೇಲ್ ಹೆಸರಲ್ಲಿದೆ (192 ಇನ್ನಿಂಗ್ಸ್).
ಕೊಹ್ಲಿ 18ನೇ ಅರ್ಧ ಶತಕ ಹೊಡೆದರು. ಪರಾಜಿತ ಪಂದ್ಯಗಳಲ್ಲಿ ಕೊಹ್ಲಿ ಅವರಿಂದ ದಾಖಲಾದ 5ನೇ ಅರ್ಧ ಶತಕ ಇದಾಗಿದೆ.
ಕೊಹ್ಲಿ ಟಿ20ಯಲ್ಲಿ 200 ಬೌಂಡರಿ ಬಾರಿಸಿದ 3ನೇ ಬ್ಯಾಟ್ಸ್ ಮನ್ ಎನಿಸಿದರು (207). ಉಳಿದ ಇಬ್ಬರೆಂದರೆ ತಿಲಕರತ್ನ ದಿಲ್ಶನ್ (223) ಮತ್ತು ಮೊಹಮ್ಮದ್ ಶಾಜಾದ್ (200).
ಮುನ್ರೊ-ಗಪ್ಟಿಲ್ ಮೊದಲ ವಿಕೆಟಿಗೆ 105 ರನ್ ಒಟ್ಟುಗೂಡಿಸಿದರು. ಇದು ಮೊದಲ ವಿಕೆಟಿಗೆ ನ್ಯೂಜಿಲ್ಯಾಂಡಿನ 7ನೇ ಶತಕದ ಜತೆಯಾಟವಾದರೆ, ಭಾರತದ ವಿರುದ್ಧ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ನ್ಯೂಜಿಲ್ಯಾಂಡ್ ದಾಖಲಿಸಿದ ಮೊದಲ ಶತಕದ ಜತೆಯಾಟ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.