ಮೊದಲ ಡ್ರಾ ಕಂಡ ಕರ್ನಾಟಕ
Team Udayavani, Nov 13, 2017, 7:35 AM IST
ಬೆಂಗಳೂರು: ಕರ್ನಾಟಕ-ದಿಲ್ಲಿ ನಡುವೆ ಆಲೂರಿನ “ಕೆಎಸ್‌ಸಿಎ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ರಣಜಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಇದು ಪ್ರಸಕ್ತ ರಣಜಿ ಋತುವಿನಲ್ಲಿ ವಿನಯ್ ಕುಮಾರ್ ಪಡೆ ಕಂಡ ಮೊದಲ ಡ್ರಾ ಫಲಿತಾಂಶವಾಗಿದೆ.
“ಎ’ ವಿಭಾಗದ ಮೊದಲ 3 ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ ಕರ್ನಾಟಕಕ್ಕೆ ಸತತ 4ನೇ ಗೆಲುವಿಗೆ ಪ್ರಯತ್ನ ಮಾಡಲಿಲ್ಲ. 348 ರನ್ನುಗಳ ಭಾರೀ ಇನ್ನಿಂಗ್ಸ್ ಮುನ್ನಡೆ ಗಳಿಸಿದರೂ ದಿಲ್ಲಿಗೆ ಫಾಲೋಆನ್ ಹೇರಲು ರಾಜ್ಯ ತಂಡ ಮುಂದಾಗಲಿಲ್ಲ. ಬೌಲರ್‌ಗಳಿಗೆ ವಿಶ್ರಾಂತಿ ನೀಡಲು ವಿನಯ್ ಕುಮಾರ್ ನಿರ್ಧರಿಸಿದರು. ಇದರಿಂದ ಕರ್ನಾಟಕ ಒಂದಿಷ್ಟು ಬ್ಯಾಟಿಂಗ್ ಅಭ್ಯಾಸ ನಡೆಸಿತು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆರಂಭಕಾರ ಕೆ.ಎಲ್. ರಾಹುಲ್ 92 ರನ್ ಬಾರಿಸಿ ಗಮನ ಸೆಳೆದರು (109 ಎಸೆತ, 9 ಬೌಂಡರಿ, 2 ಸಿಕ್ಸರ್). ಮುಂಬರುವ ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗಾಗಿ ಅವರಿಗೆ ಇಂಥದೊಂದು ಅಭ್ಯಾಸ ಅನಿವಾರ್ಯವಾಗಿತ್ತು. ಆದರೆ ಶತಕದ ಹಾದಿಯಲ್ಲಿದ್ದ ಅವರು ರನೌಟಾಗಿ ನಿರ್ಗಮಿಸುವ ಸಂಕಟಕ್ಕೆ ಸಿಲುಕಿದರು. ರಾಹುಲ್-ಸಮರ್ಥ್ ಜೋಡಿಯಿಂದ ಮೊದಲ ವಿಕೆಟಿಗೆ 121 ರನ್ ಒಟ್ಟುಗೂಡಿತು. ಸಮರ್ಥ್ ಗಳಿಕೆ 47 ರನ್. ಔಟಾದ ಮತ್ತೂಬ್ಬ ಆಟಗಾರ ಮಾಯಾಂಕ್ ಅಗರ್ವಾಲ್ (23).
ಟೀ ವಿರಾಮ ಕಳೆದು ಅರ್ಧ ಗಂಟೆ ಆದೊಡನೆ ಪಂದ್ಯವನ್ನು ಕೊನೆಗೊಳಿಸಲಾಯಿತು. ಆಗ ಕರ್ನಾಟಕ ದ್ವಿತೀಯ ಇನ್ನಿಂಗ್ಸ್‌ನಲ್ಲಿ 3 ವಿಕೆಟಿಗೆ 235 ರನ್ ಮಾಡಿತ್ತು. ಕರುಣ್ ನಾಯರ್ 33 ಹಾಗೂ ಮನೀಷ್ ಪಾಂಡೆ 34 ರನ್ ಮಾಡಿ ಅಜೇಯರಾಗಿದ್ದರು.
4 ಪಂದ್ಯಗಳಿಂದ ಒಟ್ಟು 23 ಅಂಕ ಗಳಿಸಿರುವ ಕರ್ನಾಟಕ “ಎ’ ಗುಂಪಿನ ಅಗ್ರಸ್ಥಾನ ಕಾಯ್ದುಕೊಂಡಿದ್ದು, ನಾಕೌಟ್ ಸ್ಥಾನವನ್ನು ಖಚಿತಪಡಿಸಿದೆ. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ನ. 17ರಿಂದ ಉತ್ತರಪ್ರದೇಶ ವಿರುದ್ಧ ಕಾನ್ಪುರದ “ಗ್ರೀನ್‌ಪಾರ್ಕ್ ಸ್ಟೇಡಿಯಂ’ನಲ್ಲಿ ಆಡಲಿದೆ.
24 ರನ್ನಿಗೆ ಬಿತ್ತು 6 ವಿಕೆಟ್!
4ಕ್ಕೆ 277 ರನ್ ಗಳಿಸಿ 3ನೇ ದಿನದಾಟ ಮುಗಿಸಿದ್ದ ದಿಲ್ಲಿ ಅಂತಿಮ ದಿನ ರನ್ ರಾಶಿ ಪೇರಿಸಬಹುದೆಂಬ ನಿರೀಕ್ಷೆ ಬಲವಾಗಿತ್ತು. ಗೌತಮ್ ಗಂಭೀರ್ ಅಜೇಯ ಶತಕ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡದ್ದೂ ಈ ನಿರೀಕ್ಷೆಗೆ ಕಾರಣವಾಗಿತ್ತು. ಆದರೆ ಕರ್ನಾಟಕದ, ಅದರಲ್ಲೂ ಆಭಿಮನ್ಯು ಮಿಥುನ್ ದಾಳಿಗೆ ತತ್ತರಿಸಿದ ದಿಲ್ಲಿ ನಾಟಕೀಯ ಕುಸಿತವೊಂದನ್ನು ಕಂಡು 301 ರನ್ನಿಗೆ ಸರ್ವಪತನ ಕಂಡಿತು. ಕೇವಲ 24 ರನ್ ಗಳಿಸುವಷ್ಟರಲ್ಲಿ ದಿಲ್ಲಿಯ ಉಳಿದ ಆರೂ ವಿಕೆಟ್‌ಗಳು ಹಾರಿಹೋಗಿದ್ದವು. ಇದಕ್ಕಾಗಿ ಕರ್ನಾಟಕ ಎಸೆದದ್ದು 11 ಓವರ್ ಮಾತ್ರ. ಅಕಸ್ಮಾತ್ ದಿಲ್ಲಿಗೆ ಫಾಲೋಆನ್ ಹೇರಿದ್ದೇ ಆದಲ್ಲಿ, ಇಂಥದೇ ಕುಸಿತವೊಂದು ಪುನರಾವರ್ತನೆಗೊಂಡು ಪಂದ್ಯ ರೋಚಕ ಅಂತ್ಯ ಕಾಣುತ್ತಿತ್ತೋ ಏನೋ!
ದಿಲ್ಲಿ ಕುಸಿತದಲ್ಲಿ ವೇಗಿ ಅಭಿಮನ್ಯು ಮಿಥುನ್ ಪಾತ್ರ ನಿರ್ಣಾಯಕವಾಗಿತ್ತು. ಅವರು 70 ರನ್ನಿತ್ತು 5 ವಿಕೆಟ್ ಹಾರಿಸಿದರು. ಮಿಥುನ್ ದಿನದ ಮೊದಲ ಓವರಿನಲ್ಲೇ ಮಿಲಿಂದ್ ಮತ್ತು ಮನನ್ ಶರ್ಮ ವಿಕೆಟ್‌ಗಳನ್ನು ಸತತ ಎಸೆತಗಳಲ್ಲಿ ಉರುಳಿಸಿ ದಿಲ್ಲಿಯ ದಿಕ್ಕು ತಪ್ಪಿಸಿದರು. ಬಿನ್ನಿ 2 ವಿಕೆಟ್ ಕಿತ್ತರು. 135 ರನ್ ಮಾಡಿ ಆಡುತ್ತಿದ್ದ ಗೌತಮ್ ಗಂಭೀರ್ 144ಕ್ಕೆ ಆಟ ಮುಗಿಸಿದರು (244 ಎಸೆತ, 22 ಬೌಂಡರಿ).
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-649 ಮತ್ತು 3 ವಿಕೆಟಿಗೆ 235 (ರಾಹುಲ್ 92, ಸಮರ್ಥ್ 47, ಪಾಂಡೆ ಔಟಾಗದೆ 34, ನಾಯರ್ ಔಟಾಗದೆ 33, ಅಗರ್ವಾಲ್ 23). ದಿಲ್ಲಿ-301 (ಗಂಭೀರ್ 144, ಶೋರಿ 64, ಪಂತ್ 41, ಮಿಥುನ್ 70ಕ್ಕೆ 5, ಬಿನ್ನಿ 39ಕ್ಕೆ 2). ಪಂದ್ಯಶ್ರೇಷ್ಠ: ಸ್ಟುವರ್ಟ್ ಬಿನ್ನಿ. ಅಂಕ: ಕರ್ನಾಟಕ-3, ದಿಲ್ಲಿ-1.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್
ODI: ಶ್ರೀಲಂಕಾ ಬ್ಯಾಟಿಂಗ್ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.