ಹೊನಲು ಬೆಳಕಿನ ವಾಲಿಬಾಲ್ ಆರಂಭ
Team Udayavani, Mar 5, 2018, 6:40 AM IST
ಬೆಳ್ತಂಗಡಿ: ಕ್ರೀಡಾಪಟುಗಳು ಶಿಸ್ತು, ಸಮಯಪಾಲನೆ ಹೊಂದಿದಲ್ಲಿ ಮಾತ್ರ ಕ್ರೀಡೆಯಲ್ಲಿ ಅಭಿವೃದ್ಧಿಸಾಧಿಸಲು ಸಾಧ್ಯ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಅರೋಗ್ಯವೃದ್ಧಿಯಾಗುವುದರಿಂದ ಹೆಚ್ಚಿನ ಗಮನ ವಹಿಸಬೇಕು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ವಾಲಿಬಾಲ್ ಕೋಚ್ ನಾರಾಯಣ ಆಳ್ವ ತಿಳಿಸಿದರು.
ಅವರು ಉಜಿರೆ ಶ್ರೀ ಡಿ. ರತ್ನವರ್ಮ ಕ್ರೀಡಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿರುವ ವಿ.ಟಿ.ಯು. ರಾಜ್ಯ ಮಟ್ಟದ ಅಂತರ್ ಕಾಲೇಜು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಉಜಿರೆ ಎಸ್‌ಡಿಎಂಐಟಿ ಉಪ ಪ್ರಾಂಶುಪಾಲ ಕೆ. ಮಂಜುನಾಥ್, ಉತ್ತಮವಾಗಿ ಯೋಜನೆ ರೂಪಿಸಿಕೊಂಡು ಪರಿಸ್ಥಿತಿಗೆ ಅನುಗುಣವಾಗಿ ಆಡಬೇಕು ಎಂದು ತಿಳಿಸಿದರು. ರವಿವಾರ 16 ತಂಡಗಳು ಮಂಗಳೂರು ವಿಭಾಗದಲ್ಲಿ ಆಡಲಿದ್ದು, ಸೋಮವಾರ ರಾಜ್ಯದ 16 ತಂಡಗಳ ನಡುವೆ ಹಣಾಹಣಿ ನಡೆಯಲಿದೆ.
ಎಸ್.ಡಿ.ಎಂ ಕ್ರೀಡಾ ವಿಭಾಗದ ನಿರ್ದೇಶಕ ರಮೇಶ್, ಎಸ್‌ಡಿಎಂಐಟಿ ಕ್ರೀಡಾ ಸಮಿತಿ ಅಧ್ಯಕ್ಷ ಪ್ರೊ| ಅವಧೂತ್ ಶಿವಾಜಿ ಕಾರಟ್, ಎಸ್‌ಡಿಎಂ ದೈಹಿಕ ಶಿಕ್ಷಣ ಸಂಘಟನಾ ಸಮಿತಿ ಸಂಚಾಲಕ ರಾಜೇಂದ್ರ ಪ್ರಸಾದ್ ಇದ್ದರು. ಪ್ರಿಯಾಂಕಾ ನಿರೂಪಿಸಿ, ಅನ್ವರ್ಷಿತಾ ಸ್ವಾಗತಿಸಿದರು. ದಿಲೀಪ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.