ಗಾಯಾಳು ಚಂಡಿಮಾಲ್ 2ನೇ ಟೆಸ್ಟ್ ಪಂದ್ಯಕ್ಕಿಲ್ಲ
Team Udayavani, Nov 12, 2018, 6:20 AM IST
ಕೊಲಂಬೊ: ಸ್ನಾಯು ಸೆಳೆತಕ್ಕೆ ಸಿಲುಕಿರುವ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಂಡಿಮಾಲ್ ಪ್ರವಾಸಿ ಇಂಗ್ಲೆಂಡ್ ಎದುರಿನ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಪೇಸ್ ಬೌಲರ್ ಸುರಂಗ ಲಕ್ಮಲ್ ಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ.
ಸುರಂಗ ಲಕ್ಮಲ್ ಇದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಲಂಕಾ ಸಾರಥ್ಯ ವಹಿಸಿದ್ದರು. ಆಗ ಚಂಡಿಮಾಲ್ ನಿಷೇಧಕ್ಕೊಳಗಾಗಿದ್ದರು.
ಗಾಲೆ ಟೆಸ್ಟ್ ಪಂದ್ಯದ ವೇಳೆ ಚಂಡಿಮಾಲ್ ತೊಡೆಯ ಸ್ನಾಯು ಸೆಳೆತಕ್ಕೆ ಸಿಲುಕಿದ್ದರು. ಅವರಿಗೆ 2 ವಾರಗಳ ವಿಶ್ರಾಂತಿ ಸೂಚಿಸಿರುವುದರಿಂದ 3ನೇ ಟೆಸ್ಟ್ನಲ್ಲೂ ಆಡುವ ಸಾಧ್ಯತೆ ಗೋಚರಿಸುತ್ತಿಲ್ಲ. ಚಂಡಿಮಾಲ್ ಬದಲು ಹೊಸ ಆಟಗಾರ ಚರಿತ ಅಸಲಂಕ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ರೋಷನ್ ಸಿಲ್ವ ಕೂಡ ಅವಕಾಶ ಪಡೆದಿದ್ದಾರೆ. ಇವರಿಬ್ಬರೂ ಆಯ್ಕೆ ರೇಸ್ನಲ್ಲಿ ಲಹಿರು ತಿರಿಮನ್ನೆ ಮತ್ತು ಕುಸಲ್ ಪೆರೆರ ಅವರನ್ನು ಹಿಂದಿಕ್ಕಿದರು.
ರಂಗನ ಹೆರಾತ್ ನಿವೃತ್ತರಾದ್ದರಿಂದ ಹಾಗೂ ಅಖೀಲ ಧನಂಜಯ “ಆ್ಯಕ್ಷನ್ ಟೆಸ್ಟ್’ನಲ್ಲಿ ತೇರ್ಗಡೆಯಾಗಬೇಕಿರುವುದರಿಂದ ಮಲಿಂದ ಪುಷ್ಪಕುಮಾರ ಲಂಕಾ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ.ಸರಣಿಯ 2ನೇ ಟೆಸ್ಟ್ ನ. 14ರಿಂದ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್ಎನ್ಎಲ್ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.