![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 1, 2019, 5:19 AM IST
ಅಹ್ಮದಾಬಾದ್ (ಗುಜರಾತ್): ಜಾಗತಿಕ ಕ್ರಿಕೆಟ್‌ನಲ್ಲಿ ಭಾರತ ಮತ್ತೂಂದು ಮಹಾನ್ ಸಾಧನೆಯ ಕ್ಷಣಗಣನೆಯಲ್ಲಿದೆ. ಇದು ಬೃಹತ್ ಸ್ಟೇಡಿಯಂಗೆ ಸಂಬಂಧಿಸಿದ ದಾಖಲೆ. 1.10 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ವಿಶ್ವದ ಈ ಬೃಹತ್ ಕ್ರಿಕೆಟ್ ಸ್ಟೇಡಿಯಂ ಇನ್ನು ಕೆಲವೇ ತಿಂಗಳಲ್ಲಿ ತಲೆ ಎತ್ತಲಿದೆ. ಅಹ್ಮದಾಬಾದ್‌ನ ಮೊಟೆರಾದಲ್ಲಿ 65 ಎಕರೆ ಜಾಗದಲ್ಲಿ ಈ ವರ್ಷದ ಕೊನೆಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪುನರ್ನಿರ್ಮಾಣಗೊಂಡಿರುವ ‘ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಟೇಡಿಯಂ’ ಉದ್ಘಾಟನೆಗೊಳ್ಳಲಿದೆ.
ಇಂಥ ಅದ್ಭುತ ಮೈದಾನದ ನಿರ್ಮಾಣದ ಕನಸು ಕಂಡವರು ಪ್ರಧಾನಿ ನರೇಂದ್ರ ಮೋದಿ ಎಂದು ಬಹಿರಂಗಪಡಿಸಿದ್ದಾರೆ ಕೇಂದ್ರ ಗೃಹಸಚಿವ ಅಮಿತ್ ಶಾ.
ಬೃಹತ್ ಯೋಜನೆ
2013ರ ವರೆಗೆ ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ನರೇಂದ್ರ ಮೋದಿ, 2017ರಲ್ಲಿ ತಮ್ಮ ಈ ಕನಸಿನ ಯೋಜನೆಯನ್ನು ಗುಜರಾತ್ ಕ್ರಿಕೆಟ್ ಸಂಸ್ಥೆಯ ಮುಂದೆ ಸಾದರಪಡಿಸಿದರು. ಆಗ 30 ವರ್ಷ ಹಳೆಯದಾದ ಸರ್ದಾರ್ ವಲ್ಲಭಭಾಯ್ ಮೈದಾ ನವನ್ನು ನವೀಕರಣ ಮಾಡುವ ಯೋಜನೆ ಯನ್ನಷ್ಟೇ ಗುಜರಾತ್ ಕ್ರಿಕೆಟ್ ಸಂಸ್ಥೆ ಹೊಂದಿತ್ತು. ಇದನ್ನು ಮೋದಿಯವರಲ್ಲಿ ಪ್ರಸ್ತಾವಿಸಿದಾಗ, ಏನೇ ಮಾಡಿದರೂ ವಿಶ್ವದಲ್ಲೇ ಬೃಹತ್ ಎನ್ನುವ ರೀತಿಯಲ್ಲೇ ಮಾಡಬೇಕು ಎಂಬ ಸಲಹೆ ಕೊಟ್ಟರು. ಅದನ್ನೇ ಅನುಸರಿಸಿ ಈ ದೊಡ್ಡ ಯೋಜನೆ ಕೈಗೆತ್ತಿಕೊಳ್ಳಲಾಯಿತು ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಉಪಾ ಧ್ಯಕ್ಷ ಪರಿಮಳ್ ನಾಥ್ವಾನಿ ಹೇಳಿದ್ದಾರೆ.
4 ಒಳಾಂಗಣ ಕ್ರೀಡೆ
ಒಟ್ಟು 65 ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ಮೈದಾನ ನಿರ್ಮಾಣ ವಾಗಿದೆ. ಇದಕ್ಕೆ ಹೊಂದಿಕೊಂಡಂತೆ ಇನ್ನೂ ಎರಡು ಮೈದಾನಗಳು ತಲೆ ಯೆತ್ತಿವೆ. ಅತ್ಯಾಧುನಿಕ ತಂತ್ರಜ್ಞಾ ನಗಳನ್ನೂ ಬಳಸಿಕೊಳ್ಳಲಾಗಿದೆ. ಏಕಕಾಲದಲ್ಲಿ 4 ಒಳಾಂಗಣ ಕ್ರೀಡೆ ನಡೆಸಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಈಗ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನವೆಂಬ ಹೆಗ್ಗಳಿಕೆ ಇರುವುದು ಆಸ್ಟ್ರೇಲಿಯದ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್’ಗೆ. ಇದರ ಸಾಮರ್ಥ್ಯ 1,00,024. ಕೋಲ್ಕತಾದ ‘ಈಡನ್ ಗಾರ್ಡನ್ಸ್’ಗೆ ದ್ವಿತೀಯ ಸ್ಥಾನ (66 ಸಾವಿರ). ಇನ್ನು ಅಹ್ಮದಾಬಾದ್ ಸ್ಟೇಡಿಯಂ ಮೆಲ್ಬರ್ನ್ ದಾಖಲೆಯನ್ನು ಮುರಿಯಲಿದೆ.
ಗಾವಸ್ಕರ್ ಟೆಸ್ಟ್‌ನಲ್ಲಿ 10 ಸಾವಿರ ರನ್ ಪೂರೈಸಿದ್ದು, ಕಪಿಲ್ ಸರ್ವಾಧಿಕ ಟೆಸ್ಟ್ ವಿಕೆಟ್‌ಗಳ ವಿಶ್ವದಾಖಲೆ ಸ್ಥಾಪಿಸಿದ್ದಕ್ಕೆಲ್ಲ ಈ ಸ್ಟೇಡಿಯಂ ಸಾಕ್ಷಿಯಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.