ಕೊನೆಗೂ ನಿಖತ್‌ಗೆ ಮಣಿದ ಭಾರತೀಯ ಬಾಕ್ಸಿಂಗ್ ಸಂಸ್ಥೆ
Team Udayavani, Dec 23, 2019, 12:22 AM IST
ಹೊಸದಿಲ್ಲಿ: ಕೊನೆಗೂ ವನಿತಾ ಬಾಕ್ಸರ್ ನಿಖತ್ ಜರೀನ್‌ಗೆ ಭಾರತೀಯ ಬಾಕ್ಸಿಂಗ್ ಸಂಸ್ಥೆ ಮಣಿದಿದೆ. ಡಿ. 27-28ರಂದು ಇಂದಿರಾಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಟೋಕಿಯೊ ಒಲಿಂಪಿಕ್ಸ್ ಕ್ವಾಲಿಫೈಯರ್ಗಾಗಿ ನಡೆಯುವ ಅಭ್ಯಾಸ ಪಂದ್ಯದಲ್ಲಿ ಜರೀನ್ ಅವರನ್ನು 51 ಕೆ.ಜಿ. ವಿಭಾಗದಲ್ಲಿ 4ನೇ ಸ್ಫರ್ಧಿಯಾಗಿ ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಬಾಕ್ಸಿಂಗ್ ಸಂಸ್ಥೆ “ಅಗ್ರ ಶ್ರೇಯಾಂಕಿತ ಮೇರಿ ಕೋಮ್ 4ನೇ ಶ್ರೇಯಾಂಕದಲ್ಲಿರುವ ಸ್ಪರ್ಧಿ ರಿತು ಅವರನ್ನು ಎದುರಿಸಲಿದ್ದಾರೆ. 2ನೇ ಶ್ರೇಯಾಂಕಿತ ನಿಖತ್ ಜರೀನ್ ತೃತೀಯ ಶ್ರೇಯಾಂಕಿತೆ ಜ್ಯೋತಿ ಅವರನ್ನು ಎದುರಿಸಲಿದ್ದಾರೆ’ ಎಂದು ತಿಳಿಸಿದೆ. ದ್ವಿತೀಯ ಸುತ್ತಿನಲ್ಲಿ ಮೇರಿ-ಜರೀನ್ ನಡುವೆ ಮುಖಾಮುಖೀ ನಡೆದೀತೇ ಎಂಬುದೊಂದು ಕುತೂಹಲ.
ಪ್ರತೀ ಪಂದ್ಯದ ವಿಜೇತರು ಫೈನಲ್ ಅರ್ಹತಾ ಸುತ್ತಿಗೆ ಆಯ್ಕೆಯಾಗುತ್ತಾರೆ. ಇಲ್ಲಿ ಆಯ್ಕೆಯಾದವರು ಫೆ. 4ರಿಂದ ವುಹಾನ್‌ನಲ್ಲಿ ಆರಂಭವಾಗಲಿರುವ ಒಲಿಂಪಿಕ್ಸ್ ಅರ್ಹತಾ ಸುತ್ತು ಏಶ್ಯ ಒಶಿಯಾನಿಯ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೆಲವು ದಿನಗಳ ಹಿಂದೆ ಒಲಿಂಪಿಕ್ಸ್ ತಾರೆ ಮೇರಿ ಕೋಮ್‌ಗೆ ಅವಕಾಶ ನೀಡುವ ಸಲುವಾಗಿ ಅರ್ಹತಾ ಕೂಟಕ್ಕೆ ತನ್ನನ್ನು ಬೇಕೆಂದೇ ಕಡೆಗಣಿಸಲಾಗಿದೆ ಎಂದು ನಿಖತ್ ಜರೀನ್ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಷಯ ಕೇಂದ್ರ ಕ್ರೀಡಾ ಸಚಿವಾಲಯ ತನಕ ತಲುಪಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.