ಧೋನಿ ಹತ್ತಿರದಿಂದ ಕಂಡ ಸ್ಮರಣೀಯ ಇನ್ನಿಂಗ್ಸ್
Team Udayavani, Aug 15, 2020, 9:44 PM IST
ಧೋನಿಯ ಬ್ಯಾಟಿಂಗ್ ದಾಖಲೆ ಒಂದೆಡೆ ಇರಲಿ, ಅವರು ನಾನ್ ಸ್ಟ್ರೈಕಿಂಗ್ ತುದಿಯಲ್ಲಿ ನಿಂತು ವೀಕ್ಷಿಸಿದ ಜತೆಗಾರರ ಕೆಲವು ಅಪೂರ್ವ ಕ್ರಿಕೆಟ್ ಕ್ಷಣಗಳಿಗೆ ಸಾಕ್ಷಿಯಾದ ನಿದರ್ಶನಗಳನ್ನು ಮರೆಯುವಂತಿಲ್ಲ. ಬಹುಶಃ ಇಂಥ ಸೌಭಾಗ್ಯ ಎಲ್ಲ ಕ್ರಿಕೆಟಿಗರಿಗೂ ಬರುವುದಿಲ್ಲ.
ಯುವರಾಜ್ 6 ಸಿಕ್ಸರ್
2007ರ ಟಿ20 ವಿಶ್ವಕಪ್ ಕೂಟದ ಡರ್ಬನ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಓವರಿನಲ್ಲಿ ಸತತ 6 ಸಿಕ್ಸರ್ ಬಾರಿಸಿದ ದೃಶ್ಯಾವಳಿ ಇನ್ನೂ ನಮ್ಮ ಕಣ್ಮುಂದಿದೆ. ಇದಕ್ಕೆ ಅತೀ ಹತ್ತಿರದಿಂದ ಸಾಕ್ಷಿಯಾದವರೆಂದರೆ ಧೋನಿ. ಆಗ ಅವರು ಕ್ರೀಸಿನ ಇನ್ನೊಂದು ತುದಿಯಲ್ಲಿದ್ದರು.
ತೆಂಡುಲ್ಕರ್ ದ್ವಿಶತಕ, 50ನೇ ಟೆಸ್ಟ್ ಶತಕ
ಏಕದಿನ ಇತಿಹಾಸದ ಪ್ರಥಮ ದ್ವಿಶತಕ ಬಾರಿಸಿದ ಹೆಗ್ಗಳಿಗೆ ಸಚಿನ್ ತೆಂಡುಲ್ಕರ್ ಅವರದು. ಅದು 2010ರ ದಕ್ಷಿಣ ಆಫ್ರಿಕಾ ಎದುರಿನ ಗ್ವಾಲಿಯರ್ ಪಂದ್ಯ. ಸಚಿನ್ 200 ರನ್ ಬಾರಿಸಿ ಅಜೇಯರಾಗಿದ್ದರು. ಆಗ ಕ್ರಿಕೆಟ್ ದೇವರನ್ನು ಮೊದಲಿಗೆ ಹೋಗಿ ಆಭಿನಂದಿಸಿದವರೇ ಧೋನಿ. ಅವರು ಮತ್ತೂಂದು ತುದಿಯಲ್ಲಿ ಬ್ಯಾಟ್ ಹಿಡಿದು ನಿಂತಿದ್ದರು. ಮುಂದೆ ತೆಂಡುಲ್ಕರ್ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಟೆಸ್ಟ್ ಕ್ರಿಕೆಟ್‌ನಲ್ಲಿ 50ನೇ ಶತಕ ಬಾರಿಸುತ್ತಾರೆ. ಅದು 2010ರ ಸೆಂಚುರಿಯನ್ ಟೆಸ್ಟ್ ಪಂದ್ಯ. ಆಗಲೂ ಧೋನಿ ನಾನ್ ಸ್ಟ್ರೈಕಿಂಗ್ ಎಂಡ್‌ನಲ್ಲಿದ್ದರು.
ರೋಹಿತ್ ಶರ್ಮ ಡಬಲ್ ಸೆಂಚುರಿ
ರೋಹಿತ್ ಶರ್ಮ ಅವರ ಚೊಚ್ಚಲ ದ್ವಿಶತಕದ ರೋಚಕ ಕ್ಷಣಗಳನ್ನೂ ನಾನ್ ಸ್ಟ್ರೈಕಿಂಗ್ ತುದಿಯಲ್ಲಿ ನಿಂತು ಸಂಭ್ರಮಿಸಿದ ಅದೃಷ್ಟಶಾಲಿ ಧೋನಿ! ಅದು 2013ರಲ್ಲಿ ಆಸ್ಟ್ರೇಲಿಯ ವಿರುದ್ಧ ಬೆಂಗಳೂರಿನಲ್ಲಿ ನಡೆದ ಮುಖಾಮುಖೀ. ರೋಹಿತ್ ಅಂದು 209 ರನ್ ಬಾರಿಸಿದ್ದರು.
ಸುರೇಶ್ ರೈನಾ ಟಿ20 ಶತಕ
ಸುರೇಶ್ ಟಿ20 ಇತಿಹಾಸದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಹೊಂದಿದ್ದಾರೆ. 2010ರ ಟಿ20 ವಿಶ್ವಕಪ್ ಕೂಟದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗ್ರಾಸ್ ಐಲೆಟ್ ಅಂಗಳದಲ್ಲಿ ಅವರು 101 ರನ್ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಆಗಲೂ ಧೋನಿ ಅಂಗಳದಲ್ಲೇ ಇದ್ದು ಈ ಸಂಭ್ರಮದ ಕ್ಷಣವನ್ನು ಕಣ್ತುಂಬಿಸಿಕೊಂಡಿದ್ದರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.