ಆದಿವಾಸಿ ಹಾಕಿ ಆಟಗಾರ್ತಿಯರ ನಿಗೂಢ ಸಾವು
Team Udayavani, Aug 14, 2019, 6:21 AM IST
ರಾಂಚಿ: ಝಾರ್ಖಂಡ್ನ ಸಿಮ್ಡೇಗ ಜಿಲ್ಲೆಯಲ್ಲಿ ಸುನಂದಿನಿ ಬಾಗೆ (23) ಮತ್ತು ಶ್ರದ್ಧಾ ಸೊರೆಂಗ್ (18) ಎಂಬಿಬ್ಬರು ಆದಿವಾಸಿ ಹಾಕಿ ಆಟಗಾರ್ತಿಯರ ಶವಗಳು ಮರದಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಯುವತಿಯರ ಮನೆಯವರು ಇದು ಕೊಲೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶವಗಳ ಅಂತ್ಯಸಂಸ್ಕಾರ ಮಾಡಲಾಗಿದೆ.
ಶ್ರದ್ಧಾ ಸಿಮ್ಡೇಗ ಜಿಲ್ಲೆಯ ಪತ್ರಟೋಲಿಯವರಾಗಿದ್ದು ಒಡಿಶಾದ ಸುಂದರ್ಗ್ರಹ ಜಿಲ್ಲೆಯ ಬಿರ್ಮಿತ್ರಪುರ ಎಂಬಲ್ಲಿ ಕಲಿಯುತ್ತಿದ್ದರು. ಸುನಂದಿನಿ ಸುಂದರ್ಗ್ರಹದ ಗಿಪಿಟೋಲ ಲಾಚ್ರ ಎಂಬ ಹಳ್ಳಿಯವರಾಗಿದ್ದು, ರೂರ್ಕೆಲಾದ ಹಾಕಿ ತರಬೇತಿ ಕೇಂದ್ರದಲ್ಲಿ ಪರಿಚಿತರಾದ ಬಳಿಕ ಇವರಿಬ್ಬರು ಸ್ನೇಹಿತೆಯರಾಗಿದ್ದರು. ಆಗಾಗ ಅವರು ಪರಸ್ಪರರ ಮನೆಗಳಿಗೆ ಹೋಗುವುದಿತ್ತು. ಸಾವಿನ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.