
ಮುಂದಿನ ವರ್ಷ ಕೇಂದ್ರ ಕ್ರೀಡಾಪ್ರಶಸ್ತಿ ಮಾನದಂಡ ಬದಲು
Team Udayavani, Aug 22, 2017, 1:55 PM IST

ನವದೆಹಲಿ: ಮಹತ್ವದ ಕ್ರೀಡಾ ಪ್ರಶಸ್ತಿಗಳನ್ನು ನೀಡುವ ಕುರಿತು ಇರುವ ಮಾನದಂಡಗಳನ್ನು ಕೇಂದ್ರಸರ್ಕಾರ ಮುಂದಿನ ವರ್ಷ ಬದಲಿಸಲಿದೆಯೇ? ಹೌದು ಎಂದು ಸುಳಿವು ನೀಡಿದ್ದಾರೆ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಲು ಕರ್ನಾಟಕದ ಖ್ಯಾತ ಟೆನಿಸ್ ತಾರೆ ರೋಹನ್ ಬೋಪಣ್ಣ ಪ್ರಕರಣ ಕಾರಣ ಎಂದೂ ಹೇಳಲಾಗಿದೆ.
ಪ್ರತಿಬಾರಿ ಕೇಂದ್ರ ಕ್ರೀಡಾಪ್ರಶಸ್ತಿಗಳನ್ನು ಘೋಷಿಸುವಾಗಲೂ ಕೆಲವೊಂದು ಗೊಂದಲಗಳು ಏಳುತ್ತವೆ. ಈ ಬಾರಿಯೂ ಹಲವು ಗೊಂದಲಗಳು ಉಂಟಾಗಿವೆ. ಕೆಲವು ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದರೂ ಅವರು ಖೇಲ್‌ರತ್ನ, ಅರ್ಜುನದಂತಹ ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸುತ್ತಿಲ್ಲ. ಈ ಗೊಂದಲಗಳಿಗೆಲ್ಲ ಹಳೆಯ ಪ್ರಶಸ್ತಿ ಮಾನದಂಡಗಳೇ ಕಾರಣ ಎಂದು ಭಾವಿಸಿರುವ ಕೇಂದ್ರ ಕ್ರೀಡಾಸಚಿವಾಲಯ ಬದಲಾವಣೆಗೆ ಮುಂದಾಗಿದೆ.
ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕ್ರೀಡಾಸಚಿವಾಲಯದ ಅಧಿಕಾರಿ ಯೊಬ್ಬರು, ಆಯ್ಕೆ ಸಮಿತಿಯ ಸಾಮರ್ಥ್ಯದ ಬಗ್ಗೆ ಎರಡು ಪ್ರಶ್ನೆಯಿಲ್ಲ. ಅಲ್ಲಿ ಪಾರದರ್ಶಕತೆಯೂ ಇದೆ. ಯೋಗ್ಯ ವ್ಯಕ್ತಿಗಳೇ ಯಾವಾಗಲೂ ಆಯ್ಕೆ ಸಮಿತಿಯ ಭಾಗವಾಗಿದ್ದಾರೆ. ಆದರೂ ನಾವು ಮುಂದಿನ
ವರ್ಷದಿಂದ ಮಾನದಂಡವನ್ನು ಬದಲಿಸಲಿದ್ದೇವೆಂದು ತಿಳಿಸಿದ್ದಾರೆ.
ಸದ್ಯದಲ್ಲೇ ಹೊಸ ಮಾರ್ಗದರ್ಶಿ ಸೂತ್ರಗಳು ಜಾರಿಯಾಗಲಿವೆ. ಒಂದು ವೇಳೆ ಯಾರಾದರೂ ಅರ್ಜಿ ಸಲ್ಲಿಸದಿದ್ದರೂ, ಕ್ರೀಡಾ ಸಂಸ್ಥೆಗಳಿಂದ
ನಾಮ ನಿರ್ದೇಶಿತಗೊಂಡಿರದಿದ್ದರೂ ಅವರು ಅರ್ಹರಾಗಿದ್ದರೆ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಅರ್ಹತೆಯಿದ್ದರೂ
ರೋಹನ್ ಬೋಪಣ್ಣಗೆ ಅರ್ಜುನ ಪ್ರಶಸ್ತಿ ಕೈತಪ್ಪಿದ್ದು ಈ ಬದಲಾವಣೆಗೆ ಕಾರಣವಲ್ಲ. ಬದಲಿಗೆ ವ್ಯವಸ್ಥೆಯನ್ನೇ ಉನ್ನತೀಕರಣ
ಗೊಳಿಸಬೇಕಾದ ಅಗತ್ಯವಿದೆ ಎನ್ನುವುದು ಸಚಿವಾಲಯದ ಅಭಿಪ್ರಾಯ.
ರೋಹನ್ ಬೋಪಣ್ಣ ಪ್ರಕರಣವೇನು?
ರಾಜ್ಯದ ರೋಹನ್ ಬೋಪಣ್ಣ ಅವರು ಕೆಲ ವರ್ಷಗಳಿಂದ ಅರ್ಜುನ ಪ್ರಶಸ್ತಿ ತಪ್ಪಿಸಿಕೊಳ್ಳುತ್ತಿದ್ದಾರೆ. ಅವರು ಅರ್ಹತೆ ಹೊಂದಿದ್ದರೂ ಈ
ಬಾರಿಯೂ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಇದಕ್ಕೆ ಕಾರಣ ಏ.28ರ ಗಡುವಿನ ಅವರ ಹೆಸರನ್ನು ಸಂಬಂಧಪಟ್ಟ ಕ್ರೀಡಾಸಂಸ್ಥೆ ಪ್ರಶಸ್ತಿಗೆ ಶಿಫಾರಸು ಮಾಡಿದ್ದು! ಇದಕ್ಕೆ ಬೋಪಣ್ಣ ಕೂಡ ಬೇಸರ ವ್ಯಕ್ತಪಡಿಸಿದ್ದರು. ಬೋಪಣ್ಣ ಜೂನ್‌ನಲ್ಲಿ ಫ್ರೆಂಚ್ ಓಪನ್ ಟೆನಿಸ್ ಮಿಶ್ರ ಡಬಲ್ಸ್‌ನಲ್ಲಿ ಗ್ರ್ಯಾನ್
ಸ್ಲಾಮ್ ಗೆದ್ದಿದ್ದರು. ಪ್ರತಿಷ್ಠಿತ ಪ್ರಶಸ್ತಿ ಗೆದ್ದಿದ್ದರೂ ಬೋಪಣ್ಣಗೆ ವಂಚಿತರಾಗಿದ್ದು ವಿವಾದವಾಗಿತ್ತು.
ವಿವಾದ ಸೃಷ್ಟಿಸಿದ ಸಾನಿಯಾ ಖೇಲ್‌ರತ್ನ
2015ರಲ್ಲಿ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಖೇಲ್‌ರತ್ನಕ್ಕೆ ಆಯ್ಕೆ ಮಾಡಲಾಗಿತ್ತು. ಇದು ತಪ್ಪು, ಪ್ರಶಸ್ತಿಯನ್ನು ತನಗೆ ನೀಡಬೇಕಿತ್ತು
ಎಂದು ರಾಜ್ಯದ ಹೈಜಂಪ್ ತಾರೆ ಎಚ್.ಎನ್.ಗಿರೀಶ್ ವಿವಾದವೆಬ್ಬಿಸಿದ್ದರು. ಈ ವಿವಾದಕ್ಕೆ ಖೇಲ್‌ರತ್ನ ಆಯ್ಕೆ ನೀತಿಗಳೇ ಕಾರಣವಾಗಿದ್ದವು. ನೀತಿಗಳ ಪ್ರಕಾರ ವಿಶ್ವಚಾಂಪಿಯನ್ ಶಿಪ್, ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್, ಒಲಿಂಪಿಕ್ಸ್ ನಂತಹ ಕೂಟಗಳ ಪ್ರದರ್ಶನವನ್ನು ಗಮನಿಸಿ ಆಯ್ಕೆ
ಮಾಡಲಾಗುತ್ತದೆ. ಆ ಪ್ರಕಾರ ಸಾನಿಯಾ ಆಯ್ಕೆ ಅಸಿಂಧುವಾಗುತ್ತಿತ್ತು! ಕಡೆಗೂ ಈ ನೀತಿಗಳಲ್ಲಿ ಬದಲಾವಣೆ ಮಾಡಿ ಸಾನಿಯಾಗೆ ಪ್ರಶಸ್ತಿ
ನೀಡಲಾಗಿತ್ತು.
ಮಿಥಾಲಿಗೆ ತಪ್ಪಿತು ಖೇಲ್‌ರತ್ನ
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಈ ಬಾರಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್‌ವರೆಗೆ ತಂಡವನ್ನು
ಮುನ್ನಡೆಸಿದ್ದರು. ಅಷ್ಟು ಮಾತ್ರವಲ್ಲ ಹಲವು ವಿಶ್ವದಾಖಲೆಗಳನ್ನು ಸ್ವತಃ ನಿರ್ಮಿಸಿದ್ದರು. ಏಕದಿನದಲ್ಲಿ ಗರಿಷ್ಠ ರನ್ ಗಳಿಕೆ, ಗರಿಷ್ಠ ಅರ್ಧಶತಕ
ಇವೆಲ್ಲ ಆ ಪಟ್ಟಿಯಲ್ಲಿವೆ. ಆದರೂ ಅವರು ಖೇಲ್‌ರತ್ನ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಇದಕ್ಕೆ ಕಾರಣ ಸಂಬಂಧಪಟ್ಟ ಕ್ರೀಡಾಸಂಸ್ಥೆಯಾದ ಬಿಸಿಸಿಐ ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡದಿರುವುದು! ಸದ್ಯ ದೇವೇಂದ್ರ ಜಜಾರಿಯಾ, ಸರ್ದಾರ್ ಸಿಂಗ್ ಖೇಲ್ ರತ್ನ ಪೈಪೋಟಿಯಲ್ಲಿದ್ದಾರೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!

WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ

R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.