ಪಾಕ್ ಕ್ರಿಕೆಟ್ ಮಂಡಳಿಗೆ ಮತ್ತೂಂದು ಹೊಡೆತ
Team Udayavani, Dec 20, 2018, 6:05 AM IST
ದುಬಾೖ: ಬಿಸಿಸಿಐ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ ದಾವೆ ಹೂಡಿ ವಿಫಲವಾಗಿದ್ದ ಪಾಕಿಸ್ಥಾನ ಕ್ರಿಕೆಟ್ ಮಂಡಳಿಗೆ ಮತ್ತೂಂದು ಆಘಾತ ಎದುರಾಗಿದೆ. ಐಸಿಸಿಯಲ್ಲಿ ನಡೆದ ಕಾನೂನು ಹೋರಾಟದಲ್ಲಿ ಬಿಸಿಸಿಐ ಅನುಭವಿಸಿದ ಖರ್ಚಿನ ಶೇ. 60ರಷ್ಟನ್ನು ನೀಡುವಂತೆ ವಿವಾದ ತೀರ್ಮಾನ ಸಮಿತಿ ಡಿಆರ್ಸಿ (ಡಿಸ್ಪೂéಟ್ ರೆಸಲೂಷನ್ ಕಮಿಟಿ) ಪಿಸಿಬಿಗೆ ಆದೇಶ ನೀಡಿದೆ.
ಇದಕ್ಕೂ ಮುನ್ನ ಕಾನೂನು ಹೋರಾಟದ ಪೂರ್ಣ ಖರ್ಚನ್ನು ನೀಡಬೇಕೆಂದು ಬಿಸಿಸಿಐ, ಐಸಿಸಿಯಲ್ಲಿ ದಾವೆ ಹೂಡಿತ್ತು. ಮತ್ತೂಂದು ಕಡೆ, ಕಾನೂನು ಹೋರಾಟದ ಅಂಗವಾಗಿ ಐಸಿಸಿಯ ಡಿಆರ್ಸಿ ಶುಲ್ಕ, ಆಡಳಿತಾತ್ಮಕ ಖರ್ಚಿನಲ್ಲಿ ಶೇ. 40ರಷ್ಟನ್ನು ನೀಡುವಂತೆ ಬಿಸಿಸಿಐಗೂ ಆದೇಶಿಸಲಾಗಿದೆ.
2015ರಿಂದ 2023ರ ವರೆಗೆ ಪಾಕಿಸ್ಥಾನದ ವಿರುದ್ಧ 6 ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡುತ್ತೇವೆಂದು ಬಿಸಿಸಿಐ ಒಪ್ಪಂದ ಮಾಡಿಕೊಂಡು, ಅನಂತರ ತಪ್ಪಿದೆ. ಆದ್ದರಿಂದ ಬಿಸಿಸಿಐ 447 ಕೋಟಿ ರೂ. ಪರಿಹಾರ ನೀಡಬೇಕೆಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಐಸಿಸಿಯಲ್ಲಿ ದಾವೆ ಹೂಡಿತ್ತು. ಅ. ಒಂದರಿಂದ 3ರ ವರೆಗೆ ವಿವಾದ ತೀರ್ಮಾನ ಮಂಡಳಿ (ಡಿಆರ್ಸಿ) ವಿಚಾರಣೆ ನಡೆಸಿ, ಪಿಸಿಬಿ ಅಭಿಪ್ರಾಯವನ್ನು ತಿರಸ್ಕರಿಸಿತ್ತು. ಬಿಸಿಸಿಐ ಮಾಡಿಕೊಂಡದ್ದು ತಿಳಿವಳಿಕೆ ಪತ್ರವೇ ಹೊರತು, ಒಪ್ಪಂದವಲ್ಲ ಎಂದು ಡಿಆರ್ಸಿ ಖಚಿತವಾಗಿ ಹೇಳಿತ್ತು. ಇದಕ್ಕೆ ಪ್ರತಿಯಾಗಿ ದಾವೆ ಹೂಡಿದ್ದ ಬಿಸಿಸಿಐ, ಈ ಪ್ರಕ್ರಿಯೆಯ ಖರ್ಚು ನೀಡಬೇಕೆಂದು ಅರ್ಜಿ ಹಾಕಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.