ಅಮ್ಮ ಹೇಳಿದ ರೆಸಿಪಿಯ ಹೆಸರು ಬೇಳೆ ಪಾಯಸ…

Team Udayavani, Apr 23, 2020, 10:20 AM IST

ಅಮ್ಮ ಹೇಳಿದ ರೆಸಿಪಿಯ ಹೆಸರು ಬೇಳೆ ಪಾಯಸ…

ಇಷ್ಟು ದಿನ ಒಂದಷ್ಟು ಜಾಸ್ತಿ ಕೆಲಸ ಇರ್ತಾ ಇತ್ತು. ಲಾಕ್‌ ಡೌನ್‌ ಕಾರಣಕ್ಕೆ ಸ್ವಲ್ಪ ಕೆಲಸ ಕಮ್ಮಿ ಆಗಿದೆ ಅಂತಾನೇ ಹೇಳಬಹುದು. ಪಂಡಿತ್‌ ಭೀಮಸೇನ ಜೋಶಿ ಅವರ ಹಾಡು ಕೇಳುವ ಮೂಲಕ, ನನ್ನ ಬೆಳಗು ಆರಂಭ ಆಗುತ್ತದೆ. ನಂತರ ಒಂದು- ಒಂದೂವರೆ ಗಂಟೆ ಕಾಲ ಮನೆಯಲ್ಲಿಯೇ ಇರುವ ಜಿಮ್‌ ಮತ್ತು ಟ್ರೆಡ್‌ ಮಿಲ್‌ನಲ್ಲಿ ವ್ಯಾಯಾಮ, ಆಮೇಲೆ ಸ್ವಲ್ಪ ಹೊತ್ತು ಧ್ಯಾನ. ಎರಡು ಮೊಟ್ಟೆ ಮತ್ತು ಬ್ರೆಡ್, ಅಥವಾ ಎರಡು ಇಡ್ಲಿ ಇಲ್ಲವೇ ಎರಡು ದೋಸೆ ತಿಂದು ಒಂದು ಟೀ ಕುಡಿದರೆ, ತಿಂಡಿಯ ಶಾಸ್ತ್ರ ಮುಗಿದಂತೆ.

ನಂತರ, ಕ್ರಿಕೆಟ್‌ ಗೆ ಸಂಬಂಧಿಸಿದ ಒಂದಷ್ಟು ಕೆಲಸಗಳು ಅಥವಾ ಮೀಟಿಂಗ್‌ಗಳಲ್ಲಿ ಪಾಲ್ಗೊಂಡು ಅಲ್ಲಿಂದ ನೇರವಾಗಿ ಕೆನರಾ ಬ್ಯಾಂಕ್‌ನ ಮುಖ್ಯ ಕಚೇರಿಗೆ ಹೋಗುತ್ತೇನೆ. ಕೆನರಾ ಬ್ಯಾಂಕ್‌ ನ ನೌಕರ ಅನ್ನೋದು ನನ್ನ ಖುಷಿ, ಹೆಮ್ಮೆ. ಮಧ್ಯಾಹ್ನದವರೆಗೂ ಬ್ಯಾಂಕ್‌ ಕೆಲಸ. ನಂತರ ಮನೆಗೆ ಬಂದು ಊಟ ಮುಗಿಸ್ತೇನೆ. ನಂತರ ಕ್ರೀಡೆಗೆ ಸಂಬಂಧಿಸಿದ ಕೆಲವು ಪತ್ರಿಕೆ- ಪುಸ್ತಕಗಳನ್ನು ಓದುತ್ತಾ, ಹೆಂಡತಿ- ಮಗನ ಜೊತೆಗೆ ಸ್ವಲ್ಪ ಹರಟೆ ಹೊಡೆಯುವ ಹೊತ್ತಿಗೆ ಸಂಜೆ ಆಗಿಬಿಡುತ್ತೆ!

ಗೊತ್ತಾ ನಿಮಗೆ? ರಜೆಯಲ್ಲಿ, ಇಂಥದೊಂದು ಸಮಯಕ್ಕಾಗಿ ನಾನು ಕಾಯ್ತಾ ಇರ್ತೇನೆ. ಸಂಜೆ ಆಗುತ್ತಿದ್ದಂತೆ, ನೇರ ಅಡುಗೆ ಮನೆಗೆ ಹೋಗ್ತೀನೆ. ಹೆಸರು ಬೇಳೆ ಪಾಯಸ ಮಾಡುವುದರಲ್ಲಿ ನಾನು ಎಕ್ಸ್ ಪರ್ಟ್ ಇದು, ನನ್ನ ಅಮ್ಮ ಹೇಳಿಕೊಟ್ಟಿರುವ ರೆಸಿಪಿ ಗುಟ್ಟು. 10 ಜನ ವಾಹ್‌ ವಾಹ್‌ ಅನ್ನಬೇಕು, ಅಷ್ಟು ಚೆನ್ನಾಗಿ ನಾನು ಪಾಯಸ ಮಾಡಬಲ್ಲೆ. ಅದರ ಜೊತೆಗೆ, ಬೇರೆ ತಿನಿಸುಗಳನ್ನೂ ಮಾಡಿ, ನನ್ನ ಹೊಸರುಚಿಯನ್ನು ಹೆಂಡತಿ-ಮಗನ ಮೇಲೆ ಪ್ರಯೋಗ ಮಾಡ್ತೇನೆ!

ನಂತರ, ಮಾಸ್ಕ್ ಧಾರಿಯಾಗಿ, ಪತ್ನಿಯ ಜೊತೆ ಮನೆಯ ಹತ್ತಿರದ ಪಾರ್ಕ್‌ ನಲ್ಲಿ ವಾಕ್‌ ಮಾಡುವುದು ಈಗಿನ ನನ್ನ ರೂಟೀನ್‌ ಆಗಿದೆ. ಈ ಸಂದರ್ಭದಲ್ಲಿ ತಪ್ಪದೆ ದೈಹಿಕ ಅಂತರ ಕಾಯ್ದುಕೊಳ್ತೇನೆ. ರಾತ್ರಿ, ರಾಜ್ಯ ಮತ್ತು ದೇಶದ ವಿವಿಧ ಭಾಗದಲ್ಲಿ ಇರುವ ಗೆಳೆಯರು, ಬಂಧುಗಳಿಗೆ ವಿಡಿಯೋ ಕಾಲ್‌ ಮಾಡಿ ಮಾತಾಡುವುದು, ಎಲ್ಲರಿಗೂ ಹುಷಾರಾಗಿರಿ ಎಂದು ಎಚ್ಚರಿಸಿ ಗುಡ್‌ ನೈಟ್‌ ಹೇಳುವುದು, ಕ್ರಿಕೆಟ್‌ಗೆ ಸಂಬಂಧಿಸಿದ ನ್ಯೂಸ್‌ ನೋಡಿ- ಓದಿ ರಾತ್ರಿ ಹತ್ತೂವರೆಗೆಲ್ಲಾ ನಿದ್ರೆಗೆ ಜಾರುವುದು-ಈಗಿನ ದಿನಚರಿ ಆಗಿದೆ.

ಸುನಿಲ್‌ ಜೋಶಿ, ಖ್ಯಾತ ಕ್ರಿಕೆಟಿಗ

ಟಾಪ್ ನ್ಯೂಸ್

1-CT

C.T.Ravi; ನನ್ನ ಬಂಧನ ನ್ಯಾಯಾಂಗ ತನಿಖೆಯಾಗಲಿ…ಈಗಲೂ ಜೀವ ಬೆದರಿಕೆ ಇದೆ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi: ಪಾಟ್ನಾ-ಗುಜರಾತ್‌ ಟೈ

Pro Kabaddi: ಪಾಟ್ನಾ-ಗುಜರಾತ್‌ ಟೈ

Weightlifting: ಏಷ್ಯನ್‌ ವೇಟ್‌ ಲಿಫ್ಟಿಂಗ್‌; ಭಾರತಕ್ಕೆ ಎರಡು ಬೆಳ್ಳಿ

Weightlifting: ಏಷ್ಯನ್‌ ವೇಟ್‌ ಲಿಫ್ಟಿಂಗ್‌; ಭಾರತಕ್ಕೆ ಎರಡು ಬೆಳ್ಳಿ

15

Junior World Cup shooting: ಭಾರತದ ಆತಿಥ್ಯದಲ್ಲಿ ಜೂ. ವಿಶ್ವಕಪ್‌ ಶೂಟಿಂಗ್‌

R Ashwin: ಅಶ್ವಿ‌ನ್‌ಗೆ ಖೇಲ್‌ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ

R Ashwin: ಅಶ್ವಿ‌ನ್‌ಗೆ ಖೇಲ್‌ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ

Virat Kohli: ಬಾಕ್ಸಿಂಗ್‌ ಡೇ ಟೆಸ್ಟ್‌ಗೂ ಮುನ್ನ ವಿರಾಟ್‌ ನೂತನ ಕೇಶ ವಿನ್ಯಾಸ

Virat Kohli: ಬಾಕ್ಸಿಂಗ್‌ ಡೇ ಟೆಸ್ಟ್‌ಗೂ ಮುನ್ನ ವಿರಾಟ್‌ ನೂತನ ಕೇಶ ವಿನ್ಯಾಸ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-CT

C.T.Ravi; ನನ್ನ ಬಂಧನ ನ್ಯಾಯಾಂಗ ತನಿಖೆಯಾಗಲಿ…ಈಗಲೂ ಜೀವ ಬೆದರಿಕೆ ಇದೆ

Pro Kabaddi: ಪಾಟ್ನಾ-ಗುಜರಾತ್‌ ಟೈ

Pro Kabaddi: ಪಾಟ್ನಾ-ಗುಜರಾತ್‌ ಟೈ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.