India ಕ್ರೀಡೋದ್ಯಮದ ಗಾತ್ರ ಸದ್ಯದಲ್ಲೇ ಒಂದು ಲಕ್ಷ ಕೋಟಿ ರೂ. ಮುಟ್ಟಲಿದೆ: ಪ್ರಧಾನಿ ಮೋದಿ
ಖೇಲೋ ಇಂಡಿಯಾ ಉದ್ಘಾಟಿಸಿ ಮೋದಿ
Team Udayavani, Jan 19, 2024, 11:26 PM IST
ಚೆನ್ನೈ: ಭಾರತದ ಕ್ರೀಡೋ ದ್ಯಮದ ಗಾತ್ರ ಸದ್ಯದಲ್ಲೇ ಒಂದು ಲಕ್ಷ ಕೋಟಿ ರೂ. ಮುಟ್ಟಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ. ಚೆನ್ನೈಯಲ್ಲಿ ಖೇಲೋ ಇಂಡಿಯಾ ಯುವ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದ ಅವರು, “ಭಾರತದಲ್ಲಿ ಕ್ರೀಡೆ ಬೆಳೆ ಯುತ್ತಿದೆ. 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 5,000ಕ್ಕೂ ಅಧಿಕ ಆ್ಯತ್ಲೀಟ್‌ಗಳು ಇಲ್ಲಿ ಸೇರಿದ್ದಾರೆ. ಇದರ ಮೂಲಕ ಏಕಭಾರತ್, ಶ್ರೇಷ್ಠ ಭಾರತ್‌ನ ಸ್ಫೂರ್ತಿ ಇಲ್ಲಿ ಪ್ರಕಟಗೊಳ್ಳುತ್ತಿದೆ’ ಎಂದರು.
“ಕಳೆದ 10 ವರ್ಷಗಳಿಂದ ಭಾರತ ದಲ್ಲಿ ಕ್ರೀಡೆ ಬೆಳೆದಿದೆ. ಖೇಲೋ ಇಂಡಿಯಾ ಕ್ರೀಡಾಕೂಟವೇ 12 ಬೇರೆ ಬೇರೆ ವಿಭಾಗಗಳಲ್ಲಿ ನಡೆ ಯುತ್ತಿದೆ. ಖೇಲೋ ಇಂಡಿಯಾ ಯೋಜನೆಯಡಿ ಆ್ಯತ್ಲೀಟ್‌ಗಳಿಗೆ ಮಾಸಿಕ 50,000 ರೂ. ಸಹಾಯಧನ ನೀಡಲಾಗುತ್ತಿದೆ. ಟಿಒಪಿ ಯೋಜನೆಯಡಿ ಕೋಟ್ಯಂತ ರೂ. ವ್ಯಯಿಸಲಾಗುತ್ತಿದೆ. ಇದರ ಪರಿಣಾಮ, ಕ್ರೀಡೆಯಲ್ಲಿ ಅತ್ಯುತ್ತಮ ಫಲಿತಾಂಶ ಬರುತ್ತಿದೆ. ಜಾಗತಿಕವಾಗಿ ಭಾರತ ಮುಖ್ಯ ಕ್ರೀಡಾಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಆದ್ದರಿಂದ ಭಾರತ
ದಲ್ಲಿ 2029ರ ಯುವ ಒಲಿಂಪಿಕ್ಸ್, 2036ರ ಒಲಿಂಪಿಕ್ಸ್ ಕೂಟವನ್ನು ಆಯೋಜಿಸಲು ಶ್ರಮಿಸುತ್ತಿದ್ದೇವೆ’ ಎಂದು ಮೋದಿ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.